ಹೈಟಿ ಭೂಕಂಪಕ್ಕೆ ಲಕ್ಷಾಂತರ ಜನರು ಬಲಿ

Update: 2023-06-30 05:28 GMT

1940: ಎರಡನೇ ಮಹಾಯುದ್ಧದಲ್ಲಿ ಫಿನ್ಲೆಂಡ್ ಮೇಲೆ ಸೋವಿಯತ್ ರಶ್ಯ ಬಾಂಬ್ ದಾಳಿ ನಡೆಸಿತು.

1954: ಆಸ್ಟ್ರಿಯದಲ್ಲಿ ಭಾರೀ ಹಿಮಪಾತದಿಂದಾಗಿ 200 ಜನರು ಮೃತಪಟ್ಟರು ಹಾಗೂ 9 ತಾಸಿನ ನಂತರ ಸಂಭವಿಸಿದ ಮತ್ತೊಂದು ಹಿಮಪಾತದಲ್ಲಿ 115 ಜನರು ಅಸುನೀಗಿದರು.

1962: ವಿಯೆಟ್ನಾಂ ಯುದ್ಧದಲ್ಲಿ ಆಪರೇಷನ್ ಚಾಪರ್ ಹೆಸರಿನಲ್ಲಿ ಅಮೆರಿಕ ಮೊದಲ ಬಾರಿಗೆ ವಿಯೆಟ್ನಾಂ ವಿರುದ್ಧ ಸಮರ ಆರಂಭಿಸಿತು.

1974: ಲಿಬಿಯಾ ಮತ್ತು ಟ್ಯೂನಿಶಿಯಾ ದೇಶಗಳು ಇಸ್ಲಾಮಿಕ್ ಅರಬ್ ರಿಪಬ್ಲಿಕ್ ಹೆಸರಿನಲ್ಲಿ ವಿಲೀನಗೊಳ್ಳುವುದಾಗಿ ಘೋಷಿಸಿದವು.

1986: ನಾಸಾದಿಂದ 24ನೇ ಬಾಹ್ಯಾಕಾಶ ನೌಕಾಯಾನ ಕಾರ್ಯಕ್ರಮ ಕೊಲಂಬಿಯ-7 ಆರಂಭವಾಯಿತು.

1995: ಜಪಾನ್‌ನ ಕೋಬೆ ಎಂಬಲ್ಲಿ ಸಂಭವಿಸಿದ ಭಾರೀ ಭೂಕಂಪದಲ್ಲಿ 5,092 ಜನರು ಮೃತಪಟ್ಟ ಘಟನೆ ವರದಿಯಾಗಿದೆ. ರಿಕ್ಟರ್ ಮಾಪಕದಲ್ಲಿ 7ರಷ್ಟು ತೀವ್ರತೆಯನ್ನು ಈ ಕಂಪನ ದಾಖಲಿಸಿತ್ತು.

2004: ಜಗತ್ತಿನ ಅತ್ಯಂತ ದೊಡ್ಡ ಪ್ರಯಾಣಿಕ ಹಡಗು ‘‘ಆರ್‌ಎಮ್‌ಎಸ್ ಕ್ವೀನ್ ಮೇರಿ 2’’ ಇಂದು ತನ್ನ ಚೊಚ್ಚಲ ಪ್ರಯಾಣವನ್ನು ಆರಂಭಿಸಿತು.

2010: ಹೈಟಿಯಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಲಕ್ಷಕ್ಕಿಂತ ಹೆಚ್ಚು ಜನರು ಮೃತಪಟ್ಟ ಘಟನೆ ವರದಿಯಾಗಿದೆ. ಹೈಟಿಯ ರಾಜಧಾನಿ ನಗರ ಪೋರ್ಟ್-ಆವ್-ಪ್ರಿನ್ಸ್ ಬಹುತೇಕ ನಾಶವಾಯಿತು.

1863: ಸ್ವಾಮಿ ವಿವೇಕಾನಂದ ಜನ್ಮದಿನ.

1940: ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವ, ವಕೀಲ, ಸಾಹಿತಿ ಎಂ.ವೀರಪ್ಪ ಮೊಯ್ಲಿ ಜನ್ಮದಿನ. 2004: ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ರಾಮಕೃಷ್ಣ ಹೆಗಡೆ ನಿಧನರಾದರು.

2005: ಖ್ಯಾತ ಬಹುಭಾಷಾ ನಟ ಅಮರೀಷ್ ಪುರಿ ನಿಧನರಾದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಈ ದಿನ
ಈ ದಿನ