ಪ್ರಪ್ರಥಮ ಅಂತರ್‌ರಾಷ್ಟ್ರೀಯ ಏಕದಿನ ಕ್ರಿಕೆಟ್ ಪಂದ್ಯ

Update: 2023-06-30 05:28 GMT

1909: ಪನಾಮಾವನ್ನು ಸ್ವತಂತ್ರ ರಾಜ್ಯವನ್ನಾಗಿ ಮಾಡಲು ಕೊಲಂಬಿಯಾ, ಪನಾಮಾ ಹಾಗೂ ಅಮೆರಿಕ ದೇಶಗಳು ಒಪ್ಪಂದವೊಂದಕ್ಕೆ ಸಹಿ ಹಾಕಿದವು.

1953: ಖ್ಯಾತ ನಾಟಕಕಾರ, ಕಾದಂಬರಿಕಾರ ಸ್ಯಾಮುಯೆಲ್ ಬೆಕೆಟ್‌ರ ನಾಟಕ ‘ಎನ್ ಅಟೆಂಡೆಂಟ್ ಗೋಡೋ’ ಪ್ಯಾರಿಸ್‌ನಲ್ಲಿ ಪ್ರಥಮ ಪ್ರದರ್ಶನ ಕಂಡಿತು.

1971: ಪ್ರಪ್ರಥಮ ಅಂತರ್‌ರಾಷ್ಟ್ರೀಯ ಏಕದಿನ ಕ್ರಿಕೆಟ್ ಪಂದ್ಯ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯ ತಂಡಗಳ ಮಧ್ಯೆ ಆಸ್ಟ್ರೇಲಿಯದ ಮೆಲ್ಬೋರ್ನ್‌ನಲ್ಲಿ ನಡೆಯಿತು.

1982: ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೊ ಬಳಿ ಮಹಾ ಮಳೆಯಿಂದಾಗಿ ಭೂ ಕುಸಿತ ಸಂಭವಿಸಿದ ಪರಿಣಾಮ 33 ಜನರು ಪ್ರಾಣ ಕಳೆದುಕೊಂಡರು ಹಾಗೂ ಗೋಲ್ಡನ್ ಗೇಟ್ ಸೇತುವೆ ಮುಚ್ಚಿತು.

2005: ಸೌರಮಾನ ವ್ಯವಸ್ಥೆಯ ಅತ್ಯಂತ ದೊಡ್ಡದಾದ ಕುಬ್ಜ ಗ್ರಹ ಎಂದು ಹೆಸರಾದ ‘ಎರಿಸ್’ ಅನ್ನು ಮೈಕೆಲ್ ಬ್ರೌನ್, ಚಾಡ್ ಟ್ರುಜಿಲ್ಲೊ ಮತ್ತು ಡೇವಿಡ್ ರಾಬಿನೊ ವುಡ್ಜ್ ನೇತೃತ್ವದ ತಂಡ ಸಂಶೋಧಿಸಿತು.

2012: ಬ್ರೆಝಿಲ್‌ನ ಕಾಂಪೋಸ್ ಡಿ ಗೊಯ್ಟೆಕೇಜಸ್ ಪ್ರದೇಶದ ಹತ್ತಿರದ ಅಣೆಕಟ್ಟೊಂದು ಭೂ ಕುಸಿತ ಮತ್ತು ವ್ಯಾಪಕ ಪ್ರವಾಹದಿಂದಾಗಿ ಒಡೆಯಿತು.

1934: ಕೇಂದ್ರದ ಮಾಜಿ ಸಚಿವ, ಬಿಜೆಪಿ ನಾಯಕ ಮುರಳಿ ಮನೋಹರ್ ಜೋಶಿ ಜನ್ಮದಿನ.

1941: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ರಾಜವಂಶಸ್ಥ ನವಾಬ್ ಮನ್ಸೂರ್ ಅಲಿ ಖಾನ್ ಪಟೌಡಿ ಜನ್ಮದಿನ.

1956: ಪ.ಬಂಗಾಳದ ಮುಖ್ಯಮಂತ್ರಿ, ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಜನ್ಮದಿನ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಈ ದಿನ
ಈ ದಿನ