ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಸ್ಥಾಪನೆ
1612: ಖ್ಯಾತ ಖಗೋಳತಜ್ಞ, ಭೌತಶಾಸ್ತ್ರಜ್ಞ ಇಟಲಿಯ ಗೆಲಿಲಿಯೋ ಗೆಲಿಲಿ ಪ್ರಥಮ ಬಾರಿಗೆ ನೆಪ್ಚೂನ್ ಗ್ರಹವನ್ನು ವೀಕ್ಷಿಸಿದ್ದಾಗಿ ಘೋಷಿಸಿದರು. ಆದರೆ ಅದು ಗ್ರಹವೆಂದು ಅರಿಯದ ಗೆಲಿಲಿಯೊ ಸ್ಥಿರ ನಕ್ಷತ್ರ ಎಂದು ದಾಖಲಿಸಿದರು.
1828: ಜಪಾನ್‌ನಲ್ಲಿ 6.8 ಕಂಪನಾಂಕದಲ್ಲಿ ಸಂಭವಿಸಿದ ಪ್ರಬಲ ಭೂಕಂಪಕ್ಕೆ 30,000 ಜನರು ಬಲಿಯಾದರು.
1885: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ಥಿಯೊಸೋಫಿಕಲ್ ಸೊಸೈಟಿಯ ಸದಸ್ಯ ಎ.ಒ.ಹ್ಯೂಮ್‌ರಿಂದ ಸ್ಥಾಪಿಸಲ್ಪಟ್ಟಿತು. ಬ್ರಿಟಿಷ್ ಆಳ್ವಿಕೆಯಿಂದ ಭಾರತವನ್ನು ಮುಕ್ತಗೊಳಿಸಿ ಸ್ವತಂತ್ರ ದೇಶವನ್ನಾಗಿ ಮಾಡುವಲ್ಲಿ ಕಾಂಗ್ರೆಸ್ ಕೊಡುಗೆ ಗಣನೀಯ. ವಿವಿಧ ವಿಷಯಗಳಲ್ಲಿ ಬ್ರಿಟಿಷರೊಂದಿಗೆ ಸಹಮತವಿಲ್ಲದೆ ಕೋಪಗೊಂಡಿದ್ದ ಭಾರತೀಯರನ್ನು ಸಮಾಧಾನವಾಗಿರಿಸಲು ಉದಾರವಾದಿ ಬ್ರಿಟಿಷ್ ಅಧಿಕಾರಿಗಳು ಕಾಂಗ್ರೆಸ್ ಸ್ಥಾಪಿಸಿದ್ದರು. ಆದರೆ ಅದೇ ಪಕ್ಷ ಅವರನ್ನು ದೇಶದಿಂದ ಹೊರದೂಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿತು.
1908: ಇಟಲಿಯ ಮೆಸ್ಸಿನಾದಲ್ಲಿ ಪ್ರಬಲ ಭೂಕಂಪ ಸಂಭವಿಸಿತು. ಈ ಕಂಪನದ ಪರಿಣಾಮ ಸುಮಾರು 80,000 ಜನರು ಸಾವಿಗೀಡಾದ ಘಟನೆ ವರದಿಯಾಗಿದೆ.
1970: ಯೆಮನ್ ಅರಬ್ ರಿಪಬ್ಲಿಕ್ ಸಂವಿಧಾನವನ್ನು ಅಂಗೀಕರಿಸಿತು.
1984: ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷ 1984ರ ಲೋಕಸಭಾ ಚುನಾವಣೆಯಲ್ಲಿ 404 ಕ್ಷೇತ್ರಗಳಲ್ಲಿ ಅಭೂತಪೂರ್ವ ವಿಜಯ ಸಾಧಿಸಿತು.
1984: ಇಂಗ್ಲೆಂಡ್‌ನ ಖ್ಯಾತ ಕವಿ ಟೆಡ್ ಹ್ಯೂಜಸ್ ಬ್ರಿಟಿಷ್ ಪೋಯೆಟ್ ಲಾರೆಟ್ ಆಗಿ ಆಯ್ಕೆ
2014: ಜಾವಾ ಸಮುದ್ರ ಪ್ರದೇಶದಲ್ಲಿ ಕೆಟ್ಟ ಹವಾಮಾನ ಪರಿಸ್ಥಿತಿಯಿಂದಾಗಿ ಇಂಡೋನೇಶ್ಯದ ಏರ್‌ಏಶ್ಯ ವಿಮಾನವೊಂದು ಪತನಗೊಂಡಿತು. ಈ ಸಂದರ್ಭದಲ್ಲಿ 162 ಜನರು ಮೃತಪಟ್ಟರು.
1937: ಬಿಜೆಪಿ ನಾಯಕ, ಕೇಂದ್ರ ಹಣಕಾಸು ಮಂತ್ರಿ ಅರುಣ್ ಜೇಟ್ಲಿ ಜನ್ಮದಿನ.
1940: ಹಿರಿಯ ಕಾಂಗ್ರೆಸ್ ನಾಯಕ, ಕೇಂದ್ರದ ಮಾಜಿ ರಕ್ಷಣಾ ಸಚಿವ, ವಕೀಲ ಎ. ಕೆ. ಆ್ಯಂಟನಿ ಜನ್ಮದಿನ.