ಸಿಎಎ, ಎನ್‌ಆರ್‌ಸಿ: ಹೈದರಾಬಾದ್ ಪುಸ್ತಕ ಮೇಳದಲ್ಲಿ ಇದ್ದಕ್ಕಿದ್ದಂತೆ ಪ್ರತಿಭಟನೆ

Update: 2019-12-29 18:00 GMT

 ಹೈದರಾಬಾದ್, ಡಿ. 29: ಹೈದರಾಬಾದ್‌ನ ಇಂದಿರಾ ಪಾರ್ಕ್ ಸಮೀಪ ಇರುವ ಎನ್‌ಟಿಆರ್ ಕ್ರೀಡಾಂಗಣದ ಒಳಗೆ ಶನಿವಾರ ನಡೆದ ಪುಸ್ತಕ ಮೇಳದಲ್ಲಿ 12ಕ್ಕೂ ಅಧಿಕ ಜನರಿದ್ದ ಗುಂಪು ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ವಿರುದ್ಧ ಪ್ರತಿಭಟನೆ ನಡೆಸಿತು.

 ಎನ್‌ಟಿಆರ್ ಕ್ರೀಡಾಂಗಣದ ಒಳಗೆ ಪೊಲೀಸರನ್ನು ನಿಯೋಜಿಸುವ ಮೊದಲೇ ವೇದಿಕೆಯಲ್ಲಿದ್ದ 12ಕ್ಕೂ ಅಧಿಕ ಜನರಿದ್ದ ಗುಂಪು ತಾವು ತಂದಿದ್ದ ಘೋಷಣಾ ಫಲಕಗಳನ್ನು ಗಾಂಧೀಜಿ ಪ್ರತಿಮೆ ಎದುರು ಎತ್ತಿ ಹಿಡಿದು ಪ್ರತಿಭಟನೆ ನಡೆಸಿತು. ಕೂಡಲೇ ಅಲ್ಲಿಗೆ ಧಾವಿಸಿದ ಪೊಲೀಸರು ಪ್ರತಿಭಟನಾಕಾರರಿಂದ ಘೋಷಣಾ ಫಲಕಗಳನ್ನು ಕಸಿದುಕೊಂಡರು ಹಾಗೂ ಅವರನ್ನು ಅಲ್ಲಿಂದ ಹೊರಗೆ ಕರೆದೊಯ್ದರು.

“ರ್ಯಾಲಿ ನಡೆಯಲು ಪೊಲೀಸರು ಅವಕಾಶ ನೀಡಲಿಲ್ಲ. ಯಾಕೆ ? ಹಾಗಾದರೆ, ಸಾಂವಿಧಾನಿಕವಾಗಿ ಅನುಮತಿ ನೀಡಲಾದ ಪ್ರತಿಭಟನೆಯನ್ನು ನಮ್ಮಂತಹ ನಾಗರಿಕರು ನಡೆಸುವುದು ಹೇಗೆ ?” ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡ ಹೋರಾಟಗಾರ ಇಮ್ರಾನ್ ಸಿದ್ದೀಕಿ ಪ್ರಶ್ನಿಸಿದ್ದಾರೆ.

ಪೊಲೀಸರು ನಮ್ಮನ್ನು ನಡೆಸಿಕೊಂಡ ರೀತಿ ತನಗೆ ಹತಾಶೆ ಉಂಟು ಮಾಡಿತು ಎಂದು ಇನ್ನೋರ್ವ ಪ್ರತಿಭಟನಾಗಾರ್ತಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News