ಸಿಇಟಿ-2020: ಎಪ್ರಿಲ್ 22ರಿಂದ ಆರಂಭ
ಬೆಂಗಳೂರು, ಜ.1: ರಾಜ್ಯ ಪರೀಕ್ಷಾ ಪ್ರಾಧಿಕಾರವು ಮೊದಲನೆ ವರ್ಷದ, ಮೊದಲನೇ ಸೆಮಿಸ್ಟರ್‌ನ ಇಂಜಿನಿಯರಿಂಗ್, ತಂತ್ರಜ್ಞಾನ, ಯೋಗ ಮತ್ತು ನ್ಯಾಚುರೋಪತಿ, ಕೃಷಿ ವಿಜ್ಞಾನ ಕೋರ್ಸುಗಳಾದ ಬಿವಿಎಸ್‌ಸಿ ಮತ್ತು ಎ.ಎಚ್(ಪಶು ವೈದ್ಯಕೀಯ ಮತ್ತು ಪಶುಸಂಗೋಪನೆ), ಬಿ.ಎಸ್‌ಸಿ(ಆನರ್ಸ್), ತೋಟಗಾರಿಕೆ, ಬಿ.ಎಸ್‌ಸಿ(ಆನರ್ಸ್), ಅರಣ್ಯ ವಿಜ್ಞಾನ, ಬಿಎಸ್‌ಸಿ(ಆನರ್ಸ್). ರೇಷ್ಮೆ ಕೃಷಿ ಬಿಎಸ್‌ಸಿ(ಆನರ್ಸ್), ತೋಟಗಾರಿಕೆ ಬಿಎಸ್‌ಸಿ (ಆನರ್ಸ್), ಕೃಷಿ ಜೈವಿಕ ತಂತ್ರಜ್ಞಾನ ಬಿಎಸ್‌ಸಿ(ಆನರ್ಸ್), ಸಮುದಾಯ ವಿಜ್ಞಾನ, ಬಿ.ಟೆಕ್(ಕೃಷಿ ಇಂಜಿನಿಯರಿಂಗ್), ಬಿ.ಟೆಕ್(ಬಯೋಟೆಕ್ನಾಲಜಿ), ಬಿ.ಟೆಕ್(ಹೈನುಗಾರಿಕೆ ತಂತ್ರಜ್ಞಾನ), ಬಿ.ಎಫ್.ಎಸ್‌ಸಿ(ಮೀನುಗಾರಿಕೆ). ಬಿ.ಟೆಕ್(ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ), ಬಿ.ಎಸ್‌ಸಿ(ಕೃಷಿ ಮಾರುಕಟ್ಟೆ ಮತ್ತು ಸಹಕಾರ) ಮತ್ತು ಬಿ.ಫಾರ್ಮ ಮತ್ತು ಫಾರ್ಮಾ-ಡಿ ಕೋರ್ಸುಗಳ ಪ್ರವೇಶಕ್ಕಾಗಿ 2020ನೆ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ನಡೆಸಲಿದೆ.
ಎ.22ರಂದು ಬುಧವಾರ ಬೆಳಗ್ಗೆ 10.30 ರಿಂದ 11.50ರವರೆಗೆ ಜೀವಶಾಸ್ತ್ರ(60 ಅಂಕಗಳು), ಮಧ್ಯಾಹ್ನ 2.30 ರಿಂದ 3.50ರ ವರೆಗೆ ಗಣಿತ(60 ಅಂಕಗಳು), ಎ.23ರಂದು ಗುರುವಾರ ಬೆಳಗ್ಗೆ 10.30 ರಿಂದ 11.50ರವರೆಗೆ ಭೌತಶಾಸ್ತ್ರ(60 ಅಂಕಗಳು), ಮಧ್ಯಾಹ್ನ 2.30 ರಿಂದ 3.50ರ ವರೆಗೆ ರಸಾಯನ ಶಾಸ್ತ್ರ(60 ಅಂಕಗಳು).
ಎ.24ರಂದು ಶುಕ್ರವಾರ ಕನ್ನಡ ಭಾಷಾ ಪರೀಕ್ಷೆ(ಬೆಂಗಳೂರು ಕೇಂದ್ರದಲ್ಲಿ ಮಾತ್ರ) ಬೆಳಗ್ಗೆ 11.30 ರಿಂದ ಮಧಾಹ್ನ 12.30ರ ವರೆಗೆ ಹೊರನಾಡು ಹಾಗೂ ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ(50 ಅಂಕಗಳು).
ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್(ಆಯುರ್ವೇದ, ಯುನಾನಿ, ಹೋಮಿಯೋಪತಿ) ಕೋರ್ಸುಗಳಿಗೆ ಅಭ್ಯರ್ಥಿಗಳು ಎನ್‌ಟಿಎ ನವರು ನಡೆಸುವ ರಾಷ್ಟ್ರೀಯ ಅರ್ಹತಾ ಕಮ್ ಪ್ರವೇಶ ಪರೀಕ್ಷೆ-2020ಕ್ಕೆ (NEET-UG-2020) ಹಾಜರಾಗಬೇಕು.
ಆರ್ಕಿಟೆಕ್ಚರ್ ಕೋರ್ಸ್‌ನ ಪ್ರವೇಶಕ್ಕಾಗಿ ಅಭ್ಯರ್ಥಿಗಳು ಕೌನ್ಸಿಲ್ ಆಫ್ ಆರ್ಕಿಟೆಕ್ಚರ್ ರವರು ನಡೆಸುವ NATA (National Aptitude Test in Architecture) ಪರೀಕ್ಷೆಗೆ ಅಥವಾ (JEE-Paper-2) ಹಾಜರಾಗಬೇಕು.
ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ಸೈಟ್ (http://kea.kar.nic.in) ಗೆ ಭೇಟಿ ನೀಡುವಂತೆ ರಾಜ್ಯ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರ ಪ್ರಕಟಣೆ ತಿಳಿಸಿದೆ.