ಜೋಧ್‌ ಪುರದ ಎರಡು ಆಸ್ಪತ್ರೆಗಳಲ್ಲಿ 100 ಶಿಶುಗಳು ಸಾವು

Update: 2020-01-05 18:33 GMT

 ಜೋಧ್‌ಪುರ, ಜ. 6: ಕೋಟಾ ಸರಕಾರಿ ಆಸ್ಪತ್ರೆಯಲ್ಲಿ ಶಿಶುಗಳ ಸಾವಿನ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿರುವ ನಡುವೆ ಜೋಧಪುರದ ಎರಡು ಸರಕಾರಿ ಆಸ್ಪತ್ರೆಯಲ್ಲಿ ಕಳೆದ ವರ್ಷ ಡಿಸೆಂಬರ್‌ನಲ್ಲಿ 100ಕ್ಕೂ ಅಧಿಕ ಶಿಶುಗಳು ಮೃತಪಟ್ಟಿವೆ ಎಂದು ವರದಿ ಬಹಿರಂಗಗೊಳಿಸಿದೆ.

ಜೋಧಪುರದ ಉಮೈದ್ ಹಾಗೂ ಎಂಡಿಎಂ ಆಸ್ಪತ್ರೆಗಳಲ್ಲಿ ಡಿಸೆಂಬರ್‌ನಲ್ಲಿ ಒಟ್ಟು 146 ಮಕ್ಕಳು ಸಾವನ್ನಪ್ಪಿವೆ. ಇದರಲ್ಲಿ 102 ಮಕ್ಕಳು ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಮೃತಪಟ್ಟಿವೆ.

  ಕೋಟಾದ ಜೆ.ಕೆ. ಲೋನ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಶಿಶುಗಳು ಮೃತಪಟ್ಟ ಹಿನ್ನೆಲೆಯಲ್ಲಿ ಎಸ್.ಎನ್. ವೈದ್ಯಕೀಯ ಕಾಲೇಜು ಜೋಧಪುರದಲ್ಲಿ ಶಿಶುಗಳು ಸಾವನ್ನಪ್ಪಿರುವ ವರದಿ ಸಿದ್ಧಪಡಿಸಿದೆ.

ಸಂಪೂರ್ಣ ಪಶ್ಚಿಮ ರಾಜಸ್ಥಾನದ ರೋಗಿಗಳನ್ನು ಇಲ್ಲಿನ ಆಸ್ಪತ್ರೆ ದಾಖಲು ಮಾಡಿಕೊಳ್ಳುತ್ತಿದೆ ಹಾಗೂ ಮಕ್ಕಳನ್ನು ಏಮ್ಸ್‌ನಂತಹ ಆಸ್ಪತ್ರೆಗಳಿಗೆ ಶಿಫಾರಸು ಮಾಡುತ್ತಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News