ವಿದೇಶದಲ್ಲಿ ಕಾನೂನು ಕ್ರಮ ಸ್ಥಗಿತೊಳಿಸಲು ಬಾಕಿ ಇರುವ ಪ್ರಕರಣವನ್ನು ಬಳಸದಂತೆ ಮಲ್ಯರಿಗೆ ಸುಪ್ರೀಂ ಸೂಚನೆ

Update: 2020-01-06 08:03 GMT

ಹೊಸದಿಲ್ಲಿ, ಜ.6:  ವಿದೇಶದಲ್ಲಿ ಕಾನೂನು ಕ್ರಮಗಳನ್ನು ಸ್ಥಗಿತಗೊಳಿಸಲು ನ್ಯಾಯಾಲಯದಲ್ಲಿ ಬಾಕಿ ಇರುವ ವಿಚಾರಣೆಯನ್ನು ಬಳಸದಂತೆ ಸುಪ್ರೀಂ ಕೋರ್ಟ್  ಉದ್ಯಮಿ  ವಿಜಯ್ ಮಲ್ಯರಿಗೆ ನಿರ್ದೇಶನ ನೀಡಿದೆ.

ವಿಶ್ವದ ಬೇರೆಲ್ಲಿಯೂ" ಕಾನೂನು ಕ್ರಮಗಳನ್ನು ಸ್ಥಗಿತಗೊಳಿಸಲು ನ್ಯಾಯಾಲಯದಲ್ಲಿ ಬಾಕಿ ಇರುವ ವಿಚಾರಣೆಯನ್ನು ಬಳಸದಂತೆ ಸುಪ್ರೀಂ ಕೋರ್ಟ್  ಉದ್ಯಮಿ  ವಿಜಯ್ ಮಲ್ಯ ಅವರಿಗೆ ನಿರ್ದೇಶನ ನೀಡಿದೆ.

 ವಿಜಯ್ ಮಲ್ಯ ವಿರುದ್ಧ ದಿವಾಳಿತನ ಪ್ರಕ್ರಿಯೆಗಳು ಯುಕೆ ನ್ಯಾಯಾಲಯದಲ್ಲಿ  ವಿಚಾರಣೆಗೆ ಬಾಕಿ ಉಳಿದಿವೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯಾಲಯಕ್ಕೆ ತಿಳಿಸಿದ ನಂತರ ಸುಪ್ರೀಂ ಕೋರ್ಟ್ ಸೋಮವಾರ ಈ ಆದೇಶಗಳನ್ನು ಅಂಗೀಕರಿಸಿತು

ಮರುಪಾವತಿ ವಿಷಯವು ಸುಪ್ರೀಂಕೋರ್ಟ್ ಮುಂದೆ ಬಾಕಿ ಇರುವುದರಿಂದ ತೀರ್ಪು ನೀಡಬಾರದು ಎಂದು ಮಲ್ಯ ಕೋರಿದ್ದಾರೆ. , "ನಾವು ಎಲ್ಲವನ್ನೂ ಪಾವತಿಸುತ್ತೇವೆ ಎಂದು ಅವರು 2011 ರಿಂದ ಹೇಳುತ್ತಿದ್ದಾರೆ ಆದರೆ ಇಲ್ಲಿಯವರೆಗೆ ಒಂದು ರೂಪಾಯಿಯನ್ನು ಸಹ ಪಾವತಿಸಲಾಗಿಲ್ಲ". ತುಷಾರ್ ಮೆಹ್ತಾ  ನ್ಯಾಯಾಲಯಕ್ಕೆ ತಿಳಿಸಿದರು

ಈ ವಿಷಯವನ್ನು ಶುಕ್ರವಾರ ವಿಚಾರಣೆಗೆ ಮುಂದೂಡಲಾಗಿದೆ.

ದಿವಾಳಿತನ ವಿಚಾರಣೆಯಲ್ಲಿ ತೀರ್ಪು ನೀಡದಂತೆ ಯುಕೆ ನ್ಯಾಯಾಲಯವನ್ನು ತಡೆಯಲು ಮಲ್ಯ ಅವರು ಮನವಿ ಮಾಡಿದ್ದಾರೆ ಎಂದು ಕೇಂದ್ರವು ಉನ್ನತ ನ್ಯಾಯಾಲಯಕ್ಕೆ ತಿಳಿಸಿದ ನಂತರ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ನೇತೃತ್ವದ ನ್ಯಾಯಪೀಠ ಈ ಆದೇಶವನ್ನು ಅಂಗೀಕರಿಸಿದೆ.

ತನ್ನ ಮತ್ತು  ಸಂಬಂಧಿಕರ ಒಡೆತನದ ಆಸ್ತಿಗಳನ್ನು ಮುಟ್ಟುಗೋಲು ಹಾಕುವುದಕ್ಕೆ ತಡೆಯಾಜ್ಞೆ  ಕೋರಿ ಜೂನ್ 27ರಂದು ಸುಪ್ರೀಂ ಕೋರ್ಟ್ ನ್ನು ಮಲ್ಯ  ಸಂಪರ್ಕಿಸಿದ್ದರು.

ವಿಜಯ ಮಲ್ಯ 9,000 ಕೋಟಿ ರೂ.  ಬ್ಯಾಂಕ್ ಸಾಲವನ್ನು ಮರುಪಾವತಿಸಿದ  ಆರೋಪವನ್ನು ಎದುರಿಸುತ್ತಿದ್ದಾರೆ. ಬ್ರಿಟನ್ ನಲ್ಲಿ  ಹಸ್ತಾಂತರದ ವಿಚಾರಣೆಯನ್ನೂ ಎದುರಿಸುತ್ತಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News