ಸಬರಮತಿ ಹಾಸ್ಟೆಲ್ ಮೊದಲ ಮಹಡಿಯಿಂದ ಕೆಳಕ್ಕೆ ಜಿಗಿದಿದ್ದ ಇಬ್ಬರು ವಿದ್ಯಾರ್ಥಿಗಳು

Update: 2020-01-06 10:45 GMT

ಹೊಸದಿಲ್ಲಿ, ಜ.6:  ಜವಾಹರಲಾಲ್ ನೆಹರೂ  ವಿಶ್ವವಿದ್ಯಾಲಯದ (ಜೆಎನ್‌ಯು) ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮೇಲೆ ಕಬ್ಬಿಣದ ಸರಳು, ಸ್ಲೆಡ್ಜ್ ಹ್ಯಾಮರ್‌ಗಳು ಮತ್ತು ಗಾಜಿನ ಬಾಟಲಿಗಳೊಂದಿಗೆ ಮುಸುಕುಧಾರಿಗಳು  ರವಿವಾರ ರಾತ್ರಿ ದಾಳಿ ನಡೆಸುತ್ತಿದ್ದಂತೆ, ಸಬರಮತಿ ಹಾಸ್ಟೆಲ್ ನಲ್ಲಿ  ಭಯಭೀತರಾದ ಇಬ್ಬರು ವಿದ್ಯಾರ್ಥಿಗಳು ದಾಳಿಕೋರರಿಂದ ತಪ್ಪಿಸಿಕೊಳ್ಳಲು ಮೊದಲ ಮಹಡಿಯಿಂದ ಕೆಳಕ್ಕೆ  ಜಿಗಿದಿದ್ದಾರೆ. ಇದರಿಂದಾಗಿ  ಇಬ್ಬರ ಕಾಲು ಮುರಿದಿದೆ.

 ಇದರ ಬೆನ್ನಲ್ಲೇ ಹಿರಿಯ ಹಾಸ್ಟೆಲ್ ವಾರ್ಡನ್ ಆರ್. ಮೀನಾ   ಸೋಮವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು,  ತನ್ನ ಕೈಬರಹದಲ್ಲಿರುವ ರಾಜೀನಾಮೆ ಪತ್ರದಲ್ಲಿ  ಹಾಸ್ಟೆಲ್ ಗೆ  ಭದ್ರತೆಯನ್ನು ಒದಗಿಸಲು  ಸಾಧ್ಯವಾಗದಿರುವುದನ್ನು ತಿಳಿಸಿದ್ದಾರೆ.

ಜೆಎನ್‌ಯು ಕ್ಯಾಂಪಸ್‌ನಲ್ಲಿರುವ ಸುಮಾರು 400 ವಿದ್ಯಾರ್ಥಿಗಳಿರುವ  ಸಬರಮತಿ  ಹಾಸ್ಟೆಲ್ ಪ್ರಮುಖ ಹಾಸ್ಟೆಲ್ ಗಳಲ್ಲಿ ಒಂದಾಗಿದೆ.  ದಾಳಿಕೋರರು  ಹಾಸ್ಟೆಲ್ ಕಟ್ಟಡಕ್ಕೆ ನುಗ್ಗಿ ದಾಂದಲೆ ನಡೆಸಿದ್ದಾರೆ ಬಾಗಿಲುಗಳು  ಕಿಟಕಿಗಳು  ಮತ್ತು ಪೀಠೋಪಕರಣಗಳನ್ನು ಪುಡಿಪುಡಿ ಮಾಡಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News