ಮದ್ಯದಂಗಡಿ ಬಂದ್ ಆದದ್ದಕ್ಕೆ ಬೇಸರಗೊಂಡು ನೇಣಿಗೆ ಶರಣಾದ!

Update: 2020-03-27 17:35 GMT

ತ್ರಿಶೂರ್, ಮ.27: ಕೊರೋನ ವೈರಸ್ ಸೋಕು ಹರಡುವುದನ್ನು ತಪ್ಪಿಸಲು ಜಾರಿಯಾಗಿರುವ ಲಾಕ್ ಡೌನ್‌ನಿಂದಾಗಿ ಕುಡಿಯಲು ಮದ್ಯ ದೊರೆಯದ ಕಾರಣದಿಂದ ಮನನೊಂದ 38 ವರ್ಷದ ಕೂಲಿ ಕಾರ್ಮಿಕನೊಬ್ಬ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೀಚೇರಿಯ ತುವ್ವಾನೂರ್ ಎಂಬಲ್ಲಿ ನಡೆದಿದೆ.

ಕುಲಾಂಗ್ರ ವೀಟಿಲ್ ಸನೋಜ್ ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ. ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಆತನ ಮೃತದೇಹ ಇಂದು ಬೆಳಗ್ಗೆ ಪತ್ತೆಯಾಗಿದೆ.

ಲಾಕ್‌ಡೌನ್‌ನಿಂದ ಮದ್ಯ ದೊರೆಯದ ಕಾರಣದಿಂದಾಗಿ ಸನೋಜ್ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News