ವಲಸೆ ಕಾರ್ಮಿಕರ ಮೇಲೆ ರಾಸಾಯನಿಕ ಸಿಂಪಡಣೆ: ಆಘಾತಕಾರಿ ವೀಡಿಯೋ ವೈರಲ್

Update: 2020-03-30 10:54 GMT

ಬರೇಲಿ: ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನೂರಾರು ವಲಸಿಗ ಕಾರ್ಮಿಕರು ರಸ್ತೆಯಲ್ಲಿರುವಂತೆಯೇ ಅವರ  ಮೇಲೆಯೇ ಸೋಂಕು ನಿವಾರಕವನ್ನು ಸಿಂಪಡಿಸಿದ ಆಘಾತಕಾರಿ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

"ನಿಮ್ಮ ಹಾಗೂ ನಿಮ್ಮ ಮಕ್ಕಳ ಕಣ್ಣುಗಳನ್ನು ಮುಚ್ಚಿ" ಎಂದು ಆದೇಶಿಸಿದ ರಕ್ಷಾ ಕವಚಗಳನ್ನು ಧರಿಸಿದ ಸಿಬ್ಬಂದಿ ನಂತರ ಅಲ್ಲಿ ರಸ್ತೆಯ ಮೇಲೆಯೇ ಕುಳಿತಿದ್ದ ಬಡ ಜನರ ಮೇಲೆ ಈ ಈ ಸೋಂಕು ನಿವಾರಕ ದ್ರಾವಣವನ್ನು ಸಿಂಪಡಿಸಿದಾಗ ಅವರೆಲ್ಲರೂ ಕಣ್ಣುರಿ ತಾಳಲಾರದೆ ಅಳುವ ದೃಶ್ಯ ಸೆರೆಯಾಗಿದೆ.

ಈ ವೀಡಿಯೋ ಸಾಕಷ್ಟು ಆಕ್ರೋಶ ಮೂಡಿಸಿದ ಬೆನ್ನಿಗೇ ಪ್ರತಿಕ್ರಿಯಿಸಿದ ಜಿಲ್ಲಾಡಳಿತ ``ವಲಸಿಗ ಕಾರ್ಮಿಕರ ಮೇಲೆ ಕ್ಲೋರಿನ್ ಮಿಶ್ರಿತ ನೀರು ಸಿಂಪಡಿಸಲಾಗಿತ್ತು ಯಾವುದೇ ರಾಸಾಯನಿಕ ಸಿಪಡಿಸಲಾಗಿಲ್ಲ'' ಎಂದು ಹೇಳಿದೆ.

"ನಾವೇನೂ ಅಮಾನವೀಯವಾಗಿ ವರ್ತಿಸಿಲ್ಲ, ಅಲ್ಲಿ ಜನರ ಸಾಕಷ್ಟು ನೂಗುನುಗ್ಗಲಿದ್ದುದರಿಂದ ಹಾಗೂ ನೂರಾರು ಮಂದಿ ಬಸ್ಸುಗಳಲ್ಲಿ ವಾಪಸಾಗಿರುವುದರಿಂದ ಅವರೆಲ್ಲರನ್ನೂ ಸ್ಯಾನಿಟೈಸ್ ಮಾಡುವುದು ಅಗತ್ಯವಾಗಿತ್ತು'' ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

"ಕಾರ್ಮಿಕರು ಆಗಮಿಸಿದ್ದ ಬಸ್ಸುಗಳನ್ನು  ಸ್ಯಾನಿಟೈಸ್ ಮಾಡಲು ತಿಳಿಸಲಾಗಿತ್ತು ಆದರೆ ಅಧಿಕಾರಿಗಳು ಅತ್ಯುತ್ಸಾಹದಿಂದ ಇಂತಹ ಒಂದು ಕ್ರಮ ಕೈಗೊಂಡಿದ್ದಾರೆ'' ಎಂದು ಬರೇಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ತಿಳಿಸಿದ್ದಾರೆ.

ಆಡಳಿತದ ಈ ಕ್ರಮ ಮಾಯಾವತಿ ಸೇರಿದಂತೆ ವಿಪಕ್ಷ ನಾಯಕರ ಟೀಕೆಗೆ ಗುರಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News