ಬೆರಣಿಗೆ ಬೆಂಕಿ: ಉಸಿರುಗಟ್ಟಿ ಮೂವರು ಮಕ್ಕಳ ಸಾವು
Update: 2020-04-04 16:09 GMT
ಮುಝಫ್ಫರ್‌ನಗರ(ಉ.ಪ್ರ),ಎ.4: ಮನೆಯಲ್ಲಿದ್ದ ಬೆರಣಿಯ ರಾಶಿಗೆ ಬೆಂಕಿ ತಗುಲಿದ ಪರಿಣಾಮ ಇಟ್ಟಿಗೆ ಭಟ್ಟಿಯ ದಲಿತ ಕಾರ್ಮಿಕನೋರ್ವನ ಮೂವರು ಮಕ್ಕಳು ಉಸಿರುಗಟ್ಟಿ ಸಾವನ್ನಪ್ಪಿದ ದುರಂತ ಘಟನೆ ಮುಝಫ್ಫರ್‌ನಗರ ಜಿಲ್ಲೆಯ ಭೋರಾ ಕಲನ್ ಪ್ರದೇಶದಲ್ಲಿ ಶನಿವಾರ ಬೆಳಿಗ್ಗೆ ಸಂಭವಿಸಿದೆ.
ಸಪ್ನಾ(11),ಅಭಯ(9) ಮತ್ತು ನಿಖಿಲ್(7) ಮೃತ ಮಕ್ಕಳು. ದುರ್ಘಟನೆ ಸಂಭವಿಸಿದಾಗ ಮಕ್ಕಳ ಹೆತ್ತವರು ಇಟ್ಟಿಗೆ ಭಟ್ಟಿಯ ಕೆಲಸಕ್ಕೆ ತೆರಳಿದ್ದರು ಎಂದು ಪೊಲೀಸರು ತಿಳಿಸಿದರು.