ಮಾಧ್ಯಮಗಳಿಗೆ ಖಂಡಿತ ಕೊರೋನ ತಟ್ಟುತ್ತದೆ, ಇದು ನನ್ನ ಶಾಪ: ತೆಲಂಗಾಣ ಸಿಎಂ ಕೆಸಿಆರ್

Update: 2020-04-07 11:17 GMT

ಹೈದರಾಬಾದ್: "ಒಳ್ಳೆಯ ವಿಷಯಗಳನ್ನು ಬರೆಯಿರಿ ಅಥವಾ ನಿದ್ದೆ ಮಾಡಿ. ನಿಮ್ಮ ತಲೆ ಕೆಟ್ಟಿದೆ. ನೀವು  ಸುಧಾರಿಸುತ್ತೀರಿ ಎಂದು ಪ್ರಾರ್ಥಿಸುತ್ತೇನೆ. ನಿಮ್ಮ ಕರ್ಮ, ಖಂಡಿತ ನಿಮಗೆ ಕೊರೋನ ತಟ್ಟುತ್ತದೆ. ಇದು ನಿಮಗೆ ನನ್ನ ಶಾಪ'' ಎಂದು ತೆಲಂಗಾಣ ಮುಖ್ಯಮಂತ್ರಿ ಎನ್ ಚಂದ್ರಶೇಖರ ರಾವ್ ಮಾಧ್ಯಮಗಳ ವಿರುದ್ಧ ಕಿಡಿಕಾರಿದ ಘಟನೆ ಅವರು ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ನಡೆದಿದೆ.

ಪತ್ರಿಕಾಗೋಷ್ಠಿಯಲ್ಲಿ ಕೆಸಿಆರ್ ಅವರು ಬಾಸ್ಟನ್ ಕನ್ಸಲ್ಟೆನ್ಸಿ ಗ್ರೂಪ್ ಜೂನ್ 3ರವರೆಗೆ ಲಾಕ್ ಡೌನ್ ಮುಂದುವರಿಸಬೇಕೆಂಬ ಸಲಹೆ ನೀಡಿರುವ ಕುರಿತು ಹೇಳಿದ್ದರೆ, ಕೆಲ ಮಾಧ್ಯಮಗಳು ಅದಾಗಲೇ ಅವರ ಮಾತುಗಳನ್ನು ತಪ್ಪಾಗಿ ಅರ್ಥೈಸಿ, "ಲಾಕ್‍ಡೌನ್ ಜೂನ್ 3ರವರೆಗೆ ಮುಂದುವರಿಯಲಿದೆ" ಎಂದು ವರದಿ ಮಾಡಿದ್ದವು. ಇದರಿಂದ ಕಿಡಿಕಾರಿದ ಅವರು "ನಾನಿಲ್ಲಿ ಪತ್ರಿಕಾಗೋಷ್ಠಿ ನಡೆಸುತ್ತಿದ್ದೇನೆ, ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಮಾತನಾಡುತ್ತಿದ್ದೇನೆ'' ಎಂದು ಹೇಳಿದರು.

ರಾಜ್ಯದಲ್ಲಿ ಪರ್ಸನಲ್ ಪ್ರೊಟೆಕ್ಟಿವ್ ಇಕ್ವಿಪ್ಮೆಂಟ್ ಅಥವಾ ಪಿಪಿಇ ಕೊರತೆ ಇದೆ ಎಂಬ ಸುದ್ದಿ ಮಾಧ್ಯಮಗಳ ವರದಿಗೂ ಅವರು ಕೆಂಡವಾದರು. "ನಮ್ಮಲ್ಲಿ 40,000 ಪಿಪಿಇ ಇದೆಯೆಂದು ನಿಮಗೆ ತಿಳಿದಿದೆಯೇ? ವೈದ್ಯರು ಬಹಳಷ್ಟು ತ್ಯಾಗಗಳನ್ನು ಮಾಡುತ್ತಿದ್ದಾರೆ, ಅವರಿಗೆ ಧೈರ್ಯ ತುಂಬಬೇಕು. ಆದರೆ ನೀವು ಪಿಪಿಇ ಇಲ್ಲ ಎಂದು  ಬರೆಯುತ್ತಿದ್ದರೆ ಇದರಿಂದ ಏನಾದರೂ ಲಾಭವಿದೆಯೇ?" ಎಂದು ಪ್ರಶ್ನಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News