ಪ್ರಧಾನಿ ಮೋದಿ, ರಾಷ್ಟ್ರಪತಿ ಕೋವಿಂದ್ ಟ್ವಿಟರ್ ಹ್ಯಾಂಡಲ್ ಅನ್‍ಫಾಲೋ ಮಾಡಿದ್ದಕ್ಕೆ ಶ್ವೇತಭವನದ ಸ್ಪಷ್ಟೀಕರಣ

Update: 2020-04-30 10:17 GMT

ಹೊಸದಿಲ್ಲಿ: ಮೂರು ವಾರಗಳ ಹಿಂದೆ ತಾನು ಫಾಲೋ ಮಾಡಲು ಆರಂಭಿಸಿದ್ದ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಟ್ವಿಟರ್ ಹ್ಯಾಂಡಲ್‍ಗಳನ್ನು ಏಕೆ ಹಠಾತ್ ಆಗಿ ಅನ್‍ಫಾಲೋ ಮಾಡಿದೆ ಎಂಬುದಕ್ಕೆ ಅಮೆರಿಕಾ ಆಡಳಿತದ ಅಧಿಕೃತ ಶ್ವೇತಭವನದ ಟ್ವಿಟರ್ ಹ್ಯಾಂಡಲ್ ಸ್ಪಷ್ಟೀಕರಣ ನೀಡಿದೆ.

ಅಮೆರಿಕಾದ ಅಧ್ಯಕ್ಷರು ಪ್ರವಾಸಕ್ಕೆ ತೆರಳುವ ದೇಶಗಳ ಮುಖ್ಯಸ್ಥರ ಹಾಗೂ ಸಂಬಂಧಿತ ಅಧಿಕಾರಿಗಳ ಟ್ವಿಟರ್ ಹ್ಯಾಂಡಲ್‍ಗಳನ್ನು ಸ್ವಲ್ಪ ಸಮಯದ ಮಟ್ಟಿಗೆ ಫಾಲೋ ಮಾಡುತ್ತಿರುವ ಪರಿಪಾಠ ಹೊಂದಿರುವುದಾಗಿ ಹಾಗೂ ಅಧ್ಯಕ್ಷರ ಭೇಟಿಯ ಬೆಂಬಲಾರ್ಥ ಬರುವ ಸಂದೇಶಗಳನ್ನು ರಿಟ್ವೀಟ್ ಮಾಡಲೆಂದೇ ಹೀಗೆ ಮಾಡುತ್ತಿರುವುದಾಗಿ ಅಲ್ಲಿನ ಆಡಳಿತ ತಿಳಿಸಿದೆ.

ಡೊನಾಲ್ಡ್ ಟ್ರಂಪ್ ಅವರು ಫೆಬ್ರವರಿ ಕೊನೆ ವಾರದಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭ ಶ್ವೇತಭವನದ ಅಧಿಕೃತ ಟ್ವಿಟರ್ ಹ್ಯಾಂಡಲ್  ಪ್ರಧಾನಿ ಮೋದಿ, ಪ್ರಧಾನಿ ಕಾರ್ಯಾಲಯ, ರಾಷ್ಟ್ರಪತಿ ರಾಮನಾಥ್ ಕೋವಿಂದ್, ಅಮೆರಿಕಾದಲ್ಲಿರುವ ಭಾರತದ ದೂತಾವಾಸ ಕಚೇರಿ, ಭಾರತದಲ್ಲಿರುವ ಅಮೆರಿಕಾ ದೂತಾವಾಸ ಕಚೇರಿ ಹಾಗೂ ಭಾರತದಲ್ಲಿನ ಅಮೆರಿಕಾ ರಾಯಭಾರಿ ಕೆನ್ ಜಸ್ಟರ್ ಅವರ ಟ್ವಿಟರ್ ಹ್ಯಾಂಡಲ್‍ಗಳನ್ನು ಫಾಲೋ ಮಾಡಿತ್ತು.

ಆದರೆ ಈ ವಾರ ಈ ಎಲ್ಲಾ ಹ್ಯಾಂಡಲ್‍ಗಳನ್ನು ಶ್ವೇತಭವನ ಅನ್‍ಫಾಲೋ ಮಾಡಿ ಅಚ್ಚರಿ ಮೂಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News