ಕೇಂದ್ರ ಸರಕಾರದ 20 ಲಕ್ಷ ಕೋಟಿ ರೂ. ಪ್ಯಾಕೇಜ್ ಕೇವಲ 13 ಸೊನ್ನೆಗಳು ಎಂದ ಕಾಂಗ್ರೆಸ್

Update: 2020-05-16 05:00 GMT

ಹೊಸದಿಲ್ಲಿ, ಮೇ 16: ಕೊರೋನ ವೈರಸ್‌ನಿಂದ ಉಂಟಾಗಿರುವ ಆರ್ಥಿಕ ಪರಿಣಾಮವನ್ನು ಕಡಿಮೆಗೊಳಿಸಲು ಕೇಂದ್ರ ಸರಕಾರ ಘೋಷಿಸಿರುವ 20 ಲಕ್ಷ ಕೋಟಿ ರೂ. ಉತ್ತೇಜನ ಪ್ಯಾಕೇಜ್ ಕೇವಲ 13 ಸೊನ್ನೆಗಳು ಎನ್ನುವುದು ಸಾಬೀತಾಗಿದೆ ಎಂದು ಕಾಂಗ್ರೆಸ್ ಪಕ್ಷ ಟೀಕಿಸಿದೆ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ 20 ಲಕ್ಷ ಕೋಟಿ ರೂ. ಪ್ಯಾಕೇಜ್‌ನ ಮೂರನೇ ಹಂತದ ಘೋಷಣೆಯ ಬಳಿಕ ಕಾಂಗ್ರೆಸ್ ಪ್ರತಿಕ್ರಿಯೆ ನೀಡಿತು.

ಕೇಂದ್ರ ಘೋಷಿಸಿರುವ ಪ್ಯಾಕೇಜ್‌ನ ಮೂಲಕ ರೈತರು ಹಾಗೂ ಕಾರ್ಮಿಕರು ಒಂದು ಪೈಸೆಯನ್ನು ಪಡೆದಿಲ್ಲ. 20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್ 'ಜುಮ್ಲಾ ಪ್ಯಾಕೇಜ್' ಎನ್ನುವ ಅಂಶ ಸ್ಪಷ್ಟವಾಗಿದೆ. ಪ್ಯಾಕೇಜ್ ಕೇವಲ 13 ಸೊನ್ನೆಗಳು ಎನ್ನುವುದು ಸಾಬೀತಾಗಿದೆ. ಇದು ಪ್ರಧಾನಮಂತ್ರಿ(ನರೇಂದ್ರ ಮೋದಿ) ಹಾಗೂ ವಿತ್ತ ಸಚಿವರು ಅನುಸರಿಸುತ್ತಿರುವ ವೂಡೂ ಅರ್ಥ ಶಾಸ್ತ್ರವನ್ನು ಪ್ರತಿಬಿಂಬಿಸುತ್ತದೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಹೇಳಿದ್ದಾರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News