ಬಾಲಿವುಡ್‌ನ ಹಿರಿಯ ಕೊರಿಯೊಗ್ರಾಫರ್ ಸರೋಜ್ ಖಾನ್ ಆಸ್ಪತ್ರೆಗೆ ದಾಖಲು

Update: 2020-06-24 05:34 GMT

ಮುಂಬೈ, ಜೂ.24: ಬಾಲಿವುಡ್‌ನ ಹಿರಿಯ ಕೊರಿಯೊಗ್ರಾಫರ್ ಸರೋಜ್ ಖಾನ್ ಉಸಿರಾಟದ ಸಮಸ್ಯೆಯ ಕಾರಣಕ್ಕೆ ಮುಂಬೈನ ಗುರುನಾನಕ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

71ರ ಹರೆಯದ ರಾಷ್ಟ್ರೀಯ ಪ್ರಶಸ್ತಿ ವಿಜೇತೆ ನೃತ್ಯ ಗುರು ಸರೋಜ್ ಖಾನ್ ಶನಿವಾರ ಆಸ್ಪತ್ರೆಗೆ ದಾಖಲಾಗಿದ್ದು, ಕೊರೋನ ವೈರಸ್ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿತ್ತು ಎಂದು ಕುಟುಂಬ ಸದಸ್ಯರ ಮೂಲಗಳು ತಿಳಿಸಿವೆ.

ಸರೋಜ್ ಖಾನ್ ಉಸಿರಾಟದ ಸಮಸ್ಯೆಯ ಕಾರಣಕ್ಕೆ ಬಾಂದ್ರಾ ಪೂರ್ವದ ಗುರುನಾನಕ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದೀಗ ಅವರು ಚೇತರಿಸಿಕೊಂಡಿದ್ದಾರೆ. ಇನ್ನೆರಡು ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ. ಸರೋಜ್‌ರಲ್ಲಿ ಕೋವಿಡ್-19 ಸೋಂಕು ಲಕ್ಷಣ ಕಾಣಿಸಿಕೊಂಡಿಲ್ಲ. ಅವರು ವರದಿ ನೆಗೆಟಿವ್ ಬಂದಿದೆ ಎಂದು ಸರೋಜ್ ಖಾನ್‌ರ ಸಂಬಂಧಿಕರು ತಿಳಿಸಿದ್ದಾರೆ.

ಸರೋಜ್ ಖಾನ್ ಭಾರತದ ಓರ್ವ ಖ್ಯಾತ ಸೆಲೆಬ್ರಿಟಿ ಕೊರಿಯೋಗ್ರಾಫರ್ ಆಗಿದ್ದು ಏಕ್ ದೋ ತೀನ್, ಹಮ್ ಕೋ ಆಜ್ ಕಲ್ ಹೈ ಇಂತಿಝಾರ್, ಧಡ್ಕ್ ಧಡ್ಕ್ ಕರನೆ ಲಗಾ, ಚೋಲಿ ಪೆ ಪೀಚೆ ಕ್ಯಾ ಹೈ ,ನಿಮುಡಾ ಹಾಗೂ ಡೋಲಾ ರೆ ಡೋಲಾರಂತಹ ಸಿನೆಮಾ ನೃತ್ಯಕ್ಕೆ ನಿರ್ದೇಶನ ನೀಡಿದ ಶ್ರೇಯಸ್ಸು ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News