ಉತ್ತರ ಪ್ರದೇಶ: ಮರಳು ಮಾಫಿಯಾ ವಿರುದ್ಧ ವರದಿ ಮಾಡಿದ್ದ ಪತ್ರಕರ್ತನ ಗುಂಡಿಕ್ಕಿ ಕೊಲೆ

Update: 2020-06-24 13:04 GMT
ಶುಭಂ ಮಣಿ ತ್ರಿಪಾಠಿ (Photo: Facebook)

ಹೊಸದಿಲ್ಲಿ: ಮರಳು ಮಾಫಿಯಾ ಕುರಿತು ವರದಿ ಮಾಡಿದ್ದ ಕಾನ್ಪುರ್ ನ ಕಂಪು ಮೈಲ್ ಎಂಬ ಹೆಸರಿನ ಪತ್ರಿಕೆಯ ಪತ್ರಕರ್ತ ಶುಭಂ ಮಣಿ ತ್ರಿಪಾಠಿ (25) ಎಂಬವರನ್ನು ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ ಜೂನ್ 19ರಂದು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಸಾಯಿಸಿದ್ದಾರೆ. ಆ ಪ್ರದೇಶದಲ್ಲಿ ಸಕ್ರಿಯವಾಗಿದ್ದ ಮರಳು ಮಾಫಿಯಾ ಹಾಗೂ ಅಕ್ರಮ ಭೂಕಬಳಿಕೆದಾರರ ಆಜ್ಞೆಯಂತೆ ಈ ಕೊಲೆ ನಡೆದಿದೆ ಎಂದು ಆರೋಪಿಸಲಾಗಿದೆ.

ಶುಭಂ ಅವರು ಗಂಗಾಘಾಟ್ ಪ್ರದೇಶದ ಸಮೀಪ ತಮ್ಮ ಸ್ನೇಹಿತನೊಬ್ಬನ ಮೋಟಾರ್‍ಸೈಕಲ್‍ನಲ್ಲಿ ಸಾಗುತ್ತಿದ್ದಾಗ ಈ ಕೊಲೆ ನಡೆದಿದೆ. ಗುಂಡೇಟಿನಿಂದ ತೀವ್ರ ಗಾಯಗೊಂಡ ಶುಭಂ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಅಲ್ಲಿ ಮೃತಪಟ್ಟಿದ್ದಾರೆ.

ತಾವು ಮಾಡಿದ್ದ ವರದಿಯಿಂದಾಗಿ ಭೂ ಮಾಫಿಯಾ ಒಂದು ನಿರ್ಮಿಸಿದ್ದ ಅಕ್ರಮ ಕಟ್ಟಡವನ್ನು ನೆಲಸಮಗೊಳಿಸಲಾಗಿದೆ ಎಂದು ಜೂನ್ 14ರಂದು ತ್ರಿಪಾಠಿ ತಮ್ಮ ಫೇಸ್ ಬುಕ್ ಪುಟದಲ್ಲಿ ಬರೆದಿದ್ದರಲ್ಲದೆ ತಮ್ಮ ವರದಿಯಿಂದ ಮಾಫಿಯಾ ಸಿಟ್ಟಿನಿಂದ ಜಿಲ್ಲಾ ಮ್ಯಾಜಿಸ್ಟ್ರೇಟ್ ಬಳಿ ಸುಳ್ಳು ದೂರು ನೀಡಿದೆ ಎಂದೂ ಅವರು ಹೇಳಿದ್ದರು.

ಕೊಲೆ ಸಂಬಂಧ ಪೊಲೀಸರು ಮೂವರನ್ನು ಬಂಧಿಸಿದ್ದು ಇನ್ನೂ ಇತರ ಇಬ್ಬರಿಗಾಗಿ ಶೋಧ ಮುಂದುವರಿದಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News