ಹತ್ರಸ್ ಪ್ರಕರಣ: ಸಂತ್ರಸ್ತ ಯುವತಿಯ ಹಳ್ಳಿಗೆ ವಿಶೇಷ ತಂಡ ಸಿಟ್ ಭೇಟಿ

Update: 2020-10-06 05:33 GMT

ಹತ್ರಸ್(ಉ.ಪ್ರ.), ಅ.6: ಉತ್ತರಪ್ರದೇಶದ ಹತ್ರಸ್ ಜಿಲ್ಲೆಯ ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ ಹಾಗೂ ಚಿತ್ರಹಿಂಸೆಯಿಂದಾಗಿ ಕಳೆದ ವಾರ ಮೃತಪಟ್ಟಿರುವ ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಅಥವಾ ಸಿಟ್ ಇಂದು ಬೆಳಗ್ಗೆ ಸಂತ್ರಸ್ತ ಯುವತಿಯ ಗ್ರಾಮಕ್ಕೆ ತಲುಪಿದೆ.

ಯೋಗಿ ಆದಿತ್ಯನಾಥ ಸರಕಾರದಿಂದ ರಚಿಸಲ್ಪಟ್ಟಿರುವ ತನಿಖಾ ಸಮಿತಿಯು ಕೃತ್ಯ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದು, ನಾಳೆ ತನ್ನ ವರದಿಯನ್ನು ಸರಕಾರಕ್ಕೆ ಸಲ್ಲಿಸಲಿದೆ. ಹತ್ರಸ್ ಪ್ರಕರಣವನ್ನು ಉತ್ತರಪ್ರದೇಶ ಪೊಲೀಸರು ನಿಭಾಯಿಸಿದ ರೀತಿಗೆ ಭಾರೀ ಟೀಕೆ ವ್ಯಕ್ತವಾದ ಬಳಿಕ ರಾಜ್ಯ ಸರಕಾರವು ಮೂವರು ಸದಸ್ಯರ ಸಮಿತಿ ರಚಿಸಿತ್ತು. ತನಿಖಾ ತಂಡಕ್ಕೆ ಉತ್ತರಪ್ರದೇಶದ ಗೃಹ ಕಾರ್ಯದರ್ಶಿ ಭಗವಾನ್ ಸ್ವರೂಪ್ ನೇತೃತ್ವವಹಿಸಿದ್ದಾರೆ.

20ರ ಹರೆಯದ ದಲಿತ ಯುವತಿಯನ್ನು ಮೇಲ್ಜಾತಿಗೆ ಸೇರಿದವರೆನ್ನಲಾದ ನಾಲ್ವರು ದುಷ್ಕರ್ಮಿಗಳು ಸೆ.14ರಂದು ದೌರ್ಜನ್ಯ ಎಸೆಗಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News