ಟಿಆರ್ ಪಿಯಲ್ಲಿ ಕೈಚಳಕ: ರಿಪಬ್ಲಿಕ್ ಟಿವಿ ಸಹಿತ ಮೂರು ಚಾನೆಲ್ ಗಳಿಗೆ ಸಮನ್ಸ್

Update: 2020-10-08 17:27 GMT

ಮುಂಬೈ: ಜಾಹೀರಾತು ಆದಾಯಕ್ಕಾಗಿ ಟಿ ಆರ್ ಪಿಯಲ್ಲಿ ಕೈಚಳಕ ಹಾಗೂ ನಕಲಿ ನಿರೂಪಣೆಗಾಗಿ ರಿಪಬ್ಲಿಕ್ ಟಿವಿ ಸಹಿತ ಮೂರು ಚಾನೆಲ್ ಗಳನ್ನು ತನಿಖೆಗೆ ಒಳಪಡಿಸಲಾಗುವುದು ಎಂದು ಮುಂಬೈ ಪೊಲೀಸ್ ಆಯುಕ್ತರಾದ ಪರಮ್ ಬೀರ್ ಸಿಂಗ್ ಇಂದು ತಿಳಿಸಿದ್ದಾರೆ.

ಈ ಸಂಬಂಧ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದ್ದು, ಇದರಲ್ಲಿ ಒಬ್ಬರು ರೇಟಿಂಗ್ ನ್ನು ನಿರ್ಣಯಿಸಲು ಪೀಪಲ್ ಮೀಟರ್ ಅನ್ನು ಸ್ಥಾಪಿಸಿದ ಏಜೆನ್ಸಿಯ ಮಾಜಿ ಉದ್ಯೋಗಿ .ರಿಪಬ್ಲಿಕ್ ಟಿವಿ ಪ್ರೊಮೋಟರ್ ಗಳು ಹಾಗೂ ಡೈರೆಕ್ಟರ್ ಗಳಿಗೆ ಶೀಘ್ರವೇ ಸಮನ್ಸ್ ನೀಡಲಾಗುವುದು ಎಂದು ಮುಂಬೈ ಪೊಲೀಸ್ ಮುಖ್ಯಸ್ಥ ಪರಮ್ ಬೀರ್ ಸಿಂಗ್ ಹೇಳಿದ್ದಾರೆ.

ಬಂಧಿತ ಇಬ್ಬರನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುವುದು ಹಾಗೂ ಮುಂಬೈ ಪೊಲೀಸರು ತಮ್ಮ ಕಸ್ಟಡಿಗೆ ಪಡೆಯಲಿದ್ದಾರೆ.  ಓರ್ವ ಆರೋಪಿಯನ್ನು 20 ಲಕ್ಷ ರೂ. ಜೊತೆಗೆ ಬಂಧಿಸಲಾಗಿದ್ದರೆ, ಬ್ಯಾಂಕ್ ಲಾಕರ್ ನಲ್ಲಿ 8.5 ಲಕ್ಷ ರೂ. ಪತ್ತೆಯಾಗಿದೆ ಎಂದು ಕಮಿಷನರ್ ಸಿಂಗ್ ಮಾಧ್ಯಮಗಳಿಗೆ ತಿಳಿಸಿದರು.

"ಚಾನೆಲ್ ಗಳ ಬ್ಯಾಂಕ್ ಖಾತೆಗಳ ಬಗ್ಗೆ ತನಿಖೆ ನಡೆಸಲಾಗುವುದು. ಜಾಹೀರಾತುದಾರರಿಂದ ಅವರು ಪಡೆಯುವ ಹಣ ಹಾಗೂ ಅದು ಅಪರಾಧಗಳ ಆದಾಯದಿಂದ ಬಂದಿರುವುದೇ ಎನ್ನುವುದರ ಬಗ್ಗೆ ತನಿಖೆ ನಡೆಸಲಾಗುವುದು.  ಚಾನೆಲ್ ನಲ್ಲಿ ಭಾಗಿಯಾಗಿರುವ ಯಾರೇ ಆಗಲಿ, ಎಷ್ಟೇ ಉನ್ನತ ನಿರ್ವಹಣೆ, ಎಷ್ಟೇ ಹಿರಿಯರಾಗಿದ್ದರೂ ಅವರನ್ನು ಪ್ರಶ್ನಿಸಲಾಗುವುದು. ಒಂದುವೇಳೆ ಅವರು ಭಾಗಿಯಾಗಿದ್ದರೆ ಅವರನ್ನು ತನಿಖೆ ಮಾಡಲಾಗುವುದು. ಯಾವುದೇ ಅಪರಾಧ ಬಹಿರಂಗವಾದರೆ ಖಾತೆಗಳನ್ನು ಜಪ್ತಿ ಮಾಡಲಾಗುವುದು ಹಾಗೂ ಹೆಚ್ಚಿನ ಕ್ರಮ ಕೈಗೊಳ್ಳಲಾಗುವುದು  ಎಂದು ಆಯುಕ್ತರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News