ಜೀವವನ್ನು ಅಪಾಯಕ್ಕಿಟ್ಟು ಹಬ್ಬ ಆಚರಿಸಿ ಎಂದು ಯಾವ ಧರ್ಮವೂ ಹೇಳುವುದಿಲ್ಲ: ಡಾ. ಹರ್ಷ ವರ್ಧನ್

Update: 2020-10-11 13:15 GMT

ಹೊಸದಿಲ್ಲಿ: ಹಬ್ಬದ ಋತುವಿಗಾಗಿ ಈಗಾಗಲೇ ಸಿದ್ಧತೆಗಳು ನಡೆಯುತ್ತಿರುವಾಗ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷ ವರ್ಧನ್ ಅವರು ಇಂದು ದೇಶದ ಜನತೆಗೆ ರಿಯಾಲಿಟಿ ಚೆಕ್ ನೀಡಿದರು.

ಯಾವುದೇ ಧರ್ಮದ ಯಾವುದೇ ಧಾರ್ಮಿಕ ಮುಖಂಡರು ಜೀವಗಳನ್ನು ಅಪಾಯಕ್ಕೆ ತಳ್ಳುವ ಮೂಲಕ ಹ ಬ್ಬ ಗಳನ್ನುಆಚರಿಸಬೇಕೆಂದು ಹೇಳುವುದಿಲ್ಲ. ಪ್ರಾರ್ಥನೆ ಮಾಡಲು ದೊಡ್ಡ ಪೆಂಡಾಲ್ ಗಳಿಗೆ ಹೋಗಬೇಕು ಎಂದು ಯಾವುದೇ ದೇವರುಗಳು ಹೇಳುತ್ತಿಲ್ಲ.ಹೊರಗೆ ಬೆಂಕಿ ಇದೆ ಗೊತ್ತಿದ್ದರೂ ಧರ್ಮದ ಹೆಸರಿನಲ್ಲೂ ಬೆಂಕಿಯೊಂದಿಗೆ ಆಡಿದರೆ ಅಂತಹ ಹಬ್ಬಗಳ ಅರ್ಥಏನು ಎಂದು ವರ್ಧನ್ ಪ್ರಶ್ನಿಸಿದರು.

ನಿಮ್ಮ ನಂಬಿಕೆಯನ್ನು ಅಥವಾ ನಿಮ್ಮ ಧರ್ಮವನ್ನು ಸಾಬೀತುಪಡಿಸಲು ಹೆಚ್ಚಿನ ಸಂಖ್ಯೆಯಲ್ಲಿ ಗುಂಪುಗೂಡುವ ಅಗತ್ಯವಿಲ್ಲ. .. ನಿಮ್ಮ ಮನೆಗಳಲ್ಲಿ ನಿಮ್ಮ ದೇವರುಗಳನ್ನು ಪ್ರಾರ್ಥಿಸಬಹುದು. ನೀವೆಲ್ಲರೂ ನಿಮ್ಮ ಕುಟುಂಬಗಳೊಂದಿಗೆ ಹಬ್ಬಗಳನ್ನು ಆಚರಿಸಬೇಕೆಂದು ನಾನು ಸಲಹೆ ನೀಡುತ್ತೇನೆ  ಎಂದು ಹೇಳಿದರು.

ದೇಶದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆಯು ಇಂದು 70 ಲಕ್ಷ ಗಡಿ ದಾಟಿದೆ. ಅಮೆರಿಕಗಿಂತ ಸ್ವಲ್ಪ ಹಿಂದಿದೆ.

ದುರ್ಗಾ ಪೂಜಾ, ದಸರಾ,ದೀಪಾವಳಿ ಹಾಗೂ ಛತ್ ಪೂಜೆಗಳಂತಹ ಹಬ್ಬಗಳು ಹತ್ತಿರ ಬರುತ್ತಿದ್ದು, ಜನರು ಎಲ್ಲ ಸುರಕ್ಷತಾ ನಿಯಮಗಳನ್ನು ಕೈಬಿಡುವುದರಿಂಧ ಕೋವಿಡ್ ಪ್ರಕರಣಗಳಸಂಖ್ಯೆ ಹೆಚ್ಚಾಗುವ ಭೀತಿ ಎದುರಾಗಿದೆ

ಕೇರಳದಲ್ಲಿ ಕಳೆದ ಕೆಲವು ದಿನಗಳಿಂದ ಕೋವಿಡ್ ಕೇಸ್ ಗಳು ಹೆಚ್ಚಾಗುತ್ತಿದ್ದು, ಓಣಂ ಹಬ್ಬದಲ್ಲಿ ಇದು ಹೆಚ್ಚಳವಾಗಿದೆ ಎಂದು ಅ.6ರಂದು ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದ್ದರು..

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News