ದೇಶದಲ್ಲಿ ಸಕ್ರಿಯ ಕೋವಿಡ್-19 ಪ್ರಕರಣಗಳ ಸಂಖ್ಯೆ ಎಷ್ಟು ಗೊತ್ತೆ?

Update: 2020-11-14 14:38 GMT

ಹೊಸದಿಲ್ಲಿ,ನ.14: ಭಾರತದಲ್ಲಿ ಸಕ್ರಿಯ ಕೊರೋನ ವೈರಸ್ ಪ್ರಕರಣಗಳ ಸಂಖ್ಯೆ 4,80,719ಕ್ಕೆ ತಗ್ಗಿದ್ದು,ಸತತ ನಾಲ್ಕು ದಿನಗಳಿಂದಲೂ ಸಕ್ರಿಯ ಪ್ರಕರಣಗಳ ಸಂಖ್ಯೆ ಐದು ಲಕ್ಷಕ್ಕಿಂತ ಕೆಳಗೇ ಇದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಶನಿವಾರ ತಿಳಿಸಿದೆ.

ಒಟ್ಟು ಪಾಸಿಟಿವ್ ಪ್ರಕರಣಗಳ ಪೈಕಿ ಸಕ್ರಿಯ ಪ್ರಕರಣಗಳ ಪ್ರಮಾಣ ಶೇ.5.48ಕ್ಕೆ ಇಳಿದಿದೆ. ಪ್ರತಿದಿನ ಹೊಸದಾಗಿ ವರದಿಯಾಗುತ್ತಿರುವ ಕೊರೋನ ವೈರಸ್ ಪ್ರಕರಣಗಳ ಪ್ರಮಾಣ ಕಳೆದ ಐದು ವಾರಗಳಿಂದ ಇಳಿಕೆಯ ಹಾದಿಯಲ್ಲಿದೆ. ಒಟ್ಟು ಚೇತರಿಸಿಕೊಂಡಿರುವ ಪ್ರಕರಣಗಳ ಸಂಖ್ಯೆ 81,63,572ಕ್ಕೇರಿದೆ. ಚೇತರಿಸಿಕೊಂಡ ಪ್ರಕರಣಗಳು ಮತ್ತು ಸಕ್ರಿಯ ಪ್ರಕರಣಗಳ ನಡುವಿನ ಅಂತರ ಕ್ರಮೇಣ ಹೆಚ್ಚುತ್ತಿದ್ದು,ಅದೀಗ 76,72,853 ರಷ್ಟಿದೆ ಎಂದು ಸಚಿವಾಲಯವು ತಿಳಿಸಿದೆ.

ಶನಿವಾರ ಬೆಳಿಗ್ಗೆ ಅಂತ್ಯಗೊಂಡ 24 ಗಂಟೆಗಳ ಅವಧಿಯಲ್ಲಿ ಒಟ್ಟು 47,992 ರೋಗಿಗಳು ಗುಣಮುಖರಾಗಿದ್ದಾರೆ. 6,498 ರೋಗಿಗಳು ಸೋಂಕಿನಿಂದ ಚೇತರಿಸಿಕೊಳ್ಳುವುದರೊಂದಿಗೆ ದಿಲ್ಲಿ ಅಗ್ರಸ್ಥಾನದಲ್ಲಿದೆ. ಕೇರಳದಲ್ಲಿ 6,201 ಮತ್ತು ಮಹಾರಾಷ್ಟ್ರದಲ್ಲಿ 4,543 ಚೇತರಿಕೆ ಪ್ರಕರಣಗಳು ವರದಿಯಾಗಿವೆ.

ಈ ಅವಧಿಯಲ್ಲಿ ದೇಶಾದ್ಯಂತ 44,684 ಹೊಸ ಕೊರೋನ ವೈರಸ್ ಪ್ರಕರಣಗಳು ವರದಿಯಾಗಿದ್ದು,ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 87,73,479ಕ್ಕೇರಿದೆ. 520 ಜನರು ಸೋಂಕಿನಿಂದ ಸಾವನ್ನಪ್ಪಿದ್ದು,ಇದರೊಂದಿಗೆ ಒಟ್ಟು ಸಾವುಗಳ ಸಂಖ್ಯೆ 1,29,188ಕ್ಕೇರಿದೆ.

ಹೊಸ ಪ್ರಕರಣಗಳ ಪೈಕಿ ಶೇ.76.38 ಹತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ವರದಿಯಾಗಿವೆ. 7,802 ಪ್ರಕರಣಗಳೊಂದಿಗೆ ದಿಲ್ಲಿ ಅಗ್ರಸ್ಥಾನದಲ್ಲಿದ್ದು, ಕೇರಳ (5,804) ಮತ್ತು ಮಹಾರಾಷ್ಟ್ರ (4,132) ನಂತರದ ಸ್ಥಾನಗಳಲ್ಲಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News