ಪತ್ರಕರ್ತೆ ವಿರುದ್ಧ ಮಾಜಿ ಕೇಂದ್ರ ಸಚಿವ ಅಕ್ಬರ್ ಮಾನಹಾನಿ ಮೊಕದ್ದಮೆ: ವಿಚಾರಣೆ ನಡೆಸುತ್ತಿದ್ದ ನ್ಯಾಯಾಧೀಶರ ವರ್ಗಾವಣೆ

Update: 2020-11-19 13:43 GMT
ಎಂ.ಜೆ. ಅಕ್ಬರ್  / ಪ್ರಿಯಾ ರಮಣಿ

ಹೊಸದಿಲ್ಲಿ: ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಮಾಜಿ ಕೇಂದ್ರ ಸಚಿವ ಎಂ.ಜೆ. ಅಕ್ಬರ್ ಅವರು ದಾಖಲಿಸಿದ್ದ ಮಾನಹಾನಿ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಾಧೀಶರನ್ನು ದಿಲ್ಲಿ ಹೈಕೋರ್ಟ್ ಮತ್ತೊಂದು ನ್ಯಾಯಾಲಯಕ್ಕೆ ವರ್ಗಾಯಿಸಿದೆ.

ರೌಸ್ ಅವೆನ್ಯೂ ಜಿಲ್ಲಾ ನ್ಯಾಯಾಲಯದಲ್ಲಿರುವ ವಿಶೇಷ ಸಂಸದ/ಶಾಸಕ ನ್ಯಾಯಾಲಯದ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್‌ ವಿಶಾಲ್ ಪಹುಜಾ ಅವರನ್ನು ಈಗ ಹಿರಿಯ ಸಿವಿಲ್ ನ್ಯಾಯಾಧೀಶರಾಗಿ ಕಾರ್ಕಾರ್ಡೂಮಾ ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ.

ಇತ್ತೀಚೆಗೆ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶರು ಎಂ.ಜೆ. ಅಕ್ಬರ್ ಅವರ ಮಾನಹಾನಿ ಪ್ರಕರಣವನ್ನು ವಿಶೇಷ ಸಂಸದ/ಶಾಸಕ ನ್ಯಾಯಾಲಯದಿಂದ ವರ್ಗಾಯಿಸಲು ನಿರಾಕರಿಸಿದ್ದರು. ಈ ಪ್ರಕರಣವು ಈಗ ಅಂತಿಮ ವಿಚಾರಣೆಯ ಹಂತದಲ್ಲಿದೆ.

ಉಚ್ಚ ನ್ಯಾಯಾಲಯ ಬುಧವಾರ ಜಾರಿಗೊಳಿಸಿದ ನೋಟಿಸಿನಲ್ಲಿ ತತ್‌ಕ್ಷಣ ಜಾರಿಗೆ ಬರುವಂತೆ ವರ್ಗಾಯಿಸಲಾದ ಹಾಗೂ ನಿಯೋಜಿಸಲಾದ 215 ನ್ಯಾಯಾಂಗ ಅಧಿಕಾರಿಗಳಲ್ಲಿ ವಿಶಾಲ್ ಪಹುಜಾ ಕೂಡ ಸೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News