ಕೊರೋನ ಸೋಂಕಿತರ ಸಾವಿನಲ್ಲಿ ಮಹಾರಾಷ್ಟ್ರ ಮತ್ತೆ ನಂ.1

Update: 2020-12-15 16:00 GMT

ಮುಂಬೈ, ಡಿ. 15: ದೇಶದಲ್ಲಿ ಕೊರೋನ ಸೋಂಕಿನಿಂದ ಅತ್ಯಧಿಕ ಸಾವು ಸಂಭವಿಸಿದ ರಾಜ್ಯಗಳಲ್ಲಿ ರವಿವಾರ ಮಹಾರಾಷ್ಟ್ರ ಮತ್ತೊಮ್ಮೆ ಮೊದಲ ಸ್ಥಾನಕ್ಕೇರಿದೆ. ಕೊರೋನ ಸೋಂಕಿನಿಂದ ರವಿವಾರ ಮಹಾರಾಷ್ಟ್ರದಲ್ಲಿ 70, ಪಶ್ಚಿಮಬಂಗಾಳದಲ್ಲಿ 47 ಹಾಗೂ ಹೊಸದಿಲ್ಲಿಯಲ್ಲಿ 33 ಮಂದಿ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ದತ್ತಾಂಶ ಹೇಳಿದೆ.

ಕೊರೋನ ಸೋಂಕಿನಿಂದ ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಒಟ್ಟು 336 ಮಂದಿ ಸಾವನ್ನಪ್ಪಿದ್ದಾರೆ. ಮರಣ ಪ್ರಮಾಣ ಶೇ. 1.4 ದಾಖಲಾಗಿದೆ. ಆದರೆ, ಮಹಾರಾಷ್ಟ್ರದಲ್ಲಿ ಮರಣ ಪ್ರಮಾಣ ಶೇ. 2.5 ಮುಂದುವರಿದಿದೆ. ಡಿಸೆಂಬರ್ 1ರಂದು ದಿಲ್ಲಿಯಲ್ಲಿ ಮಹಾರಾಷ್ಟ್ರಕ್ಕಿಂತ ಹೆಚ್ಚು ಸಾವು ದಾಖಲಾಗಿತ್ತು. ದಿಲ್ಲಿಯಲ್ಲಿ 108 ಸಾವು ಸಂಭವಿಸಿದ್ದರೆ, ಮಹಾರಾಷ್ಟ್ರದಲ್ಲಿ 80 ಸಾವು ಸಂಭವಿಸಿತ್ತು. ಡಿಸೆಂಬರ್ 8ರಂದು ಮಹಾರಾಷ್ಟ್ರದಲ್ಲಿ 40 ಮಂದಿ ಸಾವನ್ನಪ್ಪಿ ಮೂರನೇ ಸ್ಥಾನಕ್ಕೆ ಇಳಿದಿತ್ತು. ದಿಲ್ಲಿಯಲ್ಲಿ 63 ಮಂದಿ ಸಾವನ್ನಪ್ಪಿದ್ದರೆ, ಪಶ್ಚಿಮಬಂಗಾಳದಲ್ಲಿ 48 ಮಂದಿ ಮೃತಪಟ್ಟಿದ್ದರು.

ಡಿಸೆಂಬರ್ 9ರಂದು ಸಾವಿನ ಸಂಖ್ಯೆಯಲ್ಲಿ ದಿಲ್ಲಿ, ಮಹಾರಾಷ್ಟ್ರವನ್ನು ಹಿಂದಿಕ್ಕಿತ್ತು. ಕೂತೂಹಲವೆಂದರೆ, ದಿನಂಪ್ರತಿ ಅತ್ಯಧಿಕ ಹೊಸ ಪ್ರಕರಣಗಳು ವರದಿಯಾಗುತ್ತಿರುವ ಕೇರಳದಲ್ಲಿ ಸಾವಿನ ಸಂಖ್ಯೆ ನಿಯಂತ್ರಣದಲ್ಲಿದೆ. ಇಲ್ಲಿ ಡಿಸೆಂಬರ್‌ನಲ್ಲಿ 29ರಿಂದ 35 ಸಾವು ವರದಿಯಾಗಿದೆ ಹಾಗೂ ಮರಣ ಪ್ರಮಾಣದಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News