ರೈತರಿಗೆ ಪ್ರತಿಭಟನೆ ನಡೆಸುವ ಹಕ್ಕಿದೆ: ಸುಪ್ರೀಂಕೋರ್ಟ್

Update: 2020-12-17 08:28 GMT

  ಹೊಸದಿಲ್ಲಿ: ರೈತರ ಪ್ರತಿಭಟನೆಯು ಮುಂದುವರಿಯಬೇಕು. ದಿಲ್ಲಿಯ ಗಡಿಯನ್ನು ಮುಚ್ಚಬಾರದು. ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುವ ಹಕ್ಕು ರೈತರಿಗೆ ಇದೆ. ಆದರೆ ಇದು ಇತರರ ಮೂಲಭೂತ ಹಕ್ಕುಗಳು ಅಥವಾ ಇತರರಿಗೆ ಜೀವಿಸುವ ಹಕ್ಕುಗಳ ಮೇಲೆ ಪರಿಣಾಮಬೀರಬಾರದು.ಇತರರ ಹಕ್ಕುಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಲು ಪ್ರತಿಭಟನೆಯ ಸ್ವರೂಪವನ್ನು ಬದಲಾಯಿಸಲು ಏನು ಮಾಡಬಹುದು ಎಂದು ನಾವು ಯೂನಿಯನ್‌ಗಳನ್ನು ಕೇಳುತ್ತೇವೆ ಎಂದು ಸುಪ್ರೀಂಕೋರ್ಟ್ ಗುರುವಾರ ತನ್ನ ತೀರ್ಪಿನಲ್ಲಿ ತಿಳಿಸಿದೆ.

 ದಿಲ್ಲಿ ಗಡಿಭಾಗಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ತೆರವುಗೊಳಿಸಬೇಕೆಂದು  ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎಸ್‌ಎಸ್ ಬೋಬ್ಡೆ ಅವರಿದ್ದ ನ್ಯಾಯಪೀಠ ಆಲಿಸುತ್ತಿದೆ.

  ರೈತರ ಪ್ರತಿಭಟನೆಯ ವಿಚಾರವನ್ನು ಸಮಿತಿಗೆ ವರ್ಗಾಯಿಸಬೇಕು. ಸಮಿತಿಯಲ್ಲಿ ಕೃಷಿ ಬಗ್ಗೆ ಜ್ಞಾನವಿರುವ ಸ್ವತಂತ್ರ ಸದಸ್ಯರುಗಳು ಇರಬೇಕು. ಅವರು ಎರಡೂಕಡೆಯವರ ಮಾತನ್ನು ಆಲಿಸಬೇಕು. ಏನು ಮಾಡಬೇಕೆಂಬ ಕುರಿತು ವರದಿಸಲ್ಲಿಸಬೇಕು ಎಂದು ನಿನ್ನೆಯ ತೀರ್ಪಿನಲ್ಲಿ ಸುಪ್ರೀಂಕೋರ್ಟ್ ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News