ನಾರಾಯಣ ಗುರು ಜೀವನಚರಿತ್ರೆ ಅರೇಬಿಕ್‌ಗೆ: ಮಲಪ್ಪುರಂನ ಯುವ ವಿದ್ವಾಂಸನ ಸಾಹಿತ್ಯ ಸಾಧನೆ

Update: 2020-12-18 18:12 GMT

ಕೋಝಿಕ್ಕೋಡ್:ಡಿ,19: ಮಲಪ್ಪುರಂನಯುವ ವಿದ್ವಾಂಸ ಕೆ.ಎಂ ಅಲಾವುದ್ದೀನ್ ಹುದವಿ ಅರೇಬಿಕ್ ಭಾಷೆಯಲ್ಲಿ     ಕ್ರಾಂತಿಕಾರಿ ಸಮಾಜ ಸುಧಾರಕ ಶ್ರೀ ನಾರಾಯಣ ಗುರು ಕುರಿತಾಗಿ ಪುಸ್ತಕ ಕೃತಿಯೊಂದನ್ನು ರಚಿಸಿದ್ದಾರೆ. ಸಾಮಾಜಿಕ ಕ್ರಾಂತಿಯ ಹರಿಕಾರ ನಾರಾಯಣ ಗುರುಗಳು ಹಾಗೂ ಅವರ ಆಧ್ಯಾತ್ಮಿಕ ವ್ಯಕ್ತಿತ್ವವನ್ನು ಹೊರಜಗತ್ತಿಗೆ ಅದರಲ್ಲೂ ವಿಶೇಷವಾಗಿ ಗಲ್ಪ್ ಪ್ರದೇಶದ ಜನತೆಗೆ ಪರಿಚಯಿಸಲು ಈ ಕೃತಿಯನ್ನು ರಚಿಸುತ್ತಿರುವುದಾಗಿ ಕರುವರಕ್ಕುಂಡ ನಿವಾಸಿ ಅರೇಬಿಕ್ ಭಾಷಾ ವಿದ್ವಾಂಸ ಕೆ.ಎಂ. ಅಲಾವುದ್ದೀನ್ ಹುದವಿ ಹೇಳಿದ್ದಾರೆ.

 ‘‘ಮೂಲಭೂತವಾಗಿ ಇದೊಂದು ನಾರಾಯಣ ಗುರುಗಳ ಜೀವನಚರಿತ್ರೆ ಆಧರಿಸಿದ ಕೃತಿಯಾಗಿದೆ. ಈ ಪುಸ್ತಕಕ್ಕಾಗಿ ಅವರ ಕುರಿತಾಗಿ ಲಭ್ಯವಿರುವ ಹಲವಾರು ಪುಸ್ತಕಗಳ ಅಧ್ಯಯನ ಮಾಡಿದ್ದೇನೆ. ನಾರಾಯಣ ಗುರುಗಳು ಎಲ್ಲ ಧರ್ಮಗಳವರು ಗೌರವಿಸುವಂತಹ ವ್ಯಕ್ತಿಯಾಗಿದ್ದಾರೆ. ಅವರ ಜೀವನಚರಿತ್ರೆಯು ಕೇರಳದ ಶಿಕ್ಷಣ ಸಂಸ್ಥೆಗಳಲ್ಲಿ ಅರೇಬಿಕ್ ಭಾಷಾ ವಿದ್ಯಾರ್ಥಿಗಳ ಪಠ್ಯದ ಭಾಗವಾಗಲಿದೆ ಎಂದು ನಾನು ಆಶಿಸುತ್ತೇನೆ’’ ಎಂದವರು ಆಂಗ್ಲ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

 ಹುದವಿ ಅವರು ಈ ಮೊದಲ, ಮಲಯಾಳಂನ ಖ್ಯಾತ ಸಾಹಿತಿ ಎಂ. ಮುಕುಂದನ್ ಅವರ ‘ಮಯ್ಯಾಳಿಪ್ಪುಳಯುಡೆ ತೀರಂಗಳಿಲ್’ ಮೇರುಕೃತಿಯನ್ನು ಅನುವಾದಿಸಿದ್ದರು. ಯುಎಇನ ಸುಪ್ರೀಂ ಕೌನ್ಸಿಲ್‌ನ ಸದಸ್ಯ ಹಾಗೂ ಶಾರ್ಜಾದ ಆಡಳಿತಗಾರ ಸುಲ್ತಾನ್ ಮುಹಮ್ಮದ್‌ಬಿನ್ ಅಲ್ ಖಾಸಿಮಿ ಅವರ ಕುರಿತಾಗಿಯೂ ಎರಡು ಪುಸ್ತಕಗಳನ್ನು ಬರೆದಿದ್ದು, ಅದು ಶಾರ್ಜಾ ಅಂತಾರಾಷ್ಟ್ರೀಯ ಪುಸ್ತಕೋತ್ಸವದಲ್ಲಿ ಬಿಡುಗಡೆಗೊಂಡಿತ್ತು. ಒಮನ್‌ನ ಮಾಜಿ ಆಡಳಿತಗಾರರ ಸುಲ್ತಾನ್ ಖಬೂಸ್ ಬಗ್ಗೆ ಪುಸ್ತಕವನ್ನು ಬರೆದಿದ್ದರು ದಿವಂಗತ ಪಾಣಕ್ಕಾಡ್ ಸೈಯದ್ ಮುಹಮ್ಮದ್ ಅಲಿ ಶಿಹಾಬ್ ತಂಙಳ್ ಅವರ ಜೀವನಚರಿತ್ರೆಯನ್ನು ಕೂಡಾ ಅರೇಬಿಕ್‌ಗೆ ಹಾಗೂ ಯುಎಇನ ಕವಿ ಶಿಹಾಬ್ ಘಾನಮ್ ಅವರ ಜೀವನಚರಿತ್ರೆಯನ್ನು ಮಲಯಾಳಂಗೆ ಭಾಷಾಂತರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News