ಆರೆಸ್ಸೆಸ್ ಸಿದ್ಧಾಂತವಾದಿ ಎಂ.ಜಿ.ವೈದ್ಯ ನಿಧನ

Update: 2020-12-19 17:50 GMT
ಫೋಟೊ ಕೃಪೆ: twitter

ನಾಗ್ಪುರ,ಡಿ.19: ಆರೆಸ್ಸೆಸ್ ಸಿದ್ಧಾಂತವಾದಿ ಮತ್ತು ಸಂಘಟನೆಯ ಪ್ರಪ್ರಥಮ ವಕ್ತಾರ ಮಾಧವ ಗೋವಿಂದ ವೈದ್ಯ (97) ಅವರು ಅಲ್ಪಕಾಲದ ಅಸ್ವಾಸ್ಥದ ಬಳಿಕ ಶನಿವಾರ ಇಲ್ಲಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ.

ವೈದ್ಯ ಇತ್ತೀಚಿಗಷ್ಟೇ ಕೊರೋನ ವೈರಸ್ ಸೋಂಕಿನಿಂದ ಚೇತರಿಸಿಕೊಂಡಿದ್ದರು. ಅಂತ್ಯಸಂಸ್ಕಾರ ರವಿವಾರ ನಡೆಯಲಿದೆ ಎಂದು ಮೊಮ್ಮಗ ವಿಷ್ಣು ವೈದ್ಯ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ವೈದ್ಯ ಅವರು ಪತ್ನಿ,ಮೂವರು ಪುತ್ರಿಯರು ಮತ್ತು ಆರೆಸ್ಸೆಸ್‌ನ ಜಂಟಿ ಪ್ರಧಾನ ಕಾರ್ಯದರ್ಶಿ ಮನಮೋಹನ ವೈದ್ಯ ಸೇರಿದಂತೆ ಐವರು ಪುತ್ರರನ್ನು ಅಗಲಿದ್ದಾರೆ.

ಕಳೆದ ಎಂಟು ದಶಕಗಳಿಂದಲೂ ಆರೆಸ್ಸೆಸ್ ಜೊತೆ ಗುರುತಿಸಿಕೊಂಡಿದ್ದ ವೈದ್ಯ ಸಂಘಟನೆಯ ಪರ ಮರಾಠಿ ದೈನಿಕ ‘ತರುಣ ಭಾರತ್ ’ನ ಮುಖ್ಯ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದ್ದರು.

ಕಳೆದ ಜನವರಿಯಲ್ಲಿ ಮಹಾರಾಷ್ಟ್ರವನ್ನು ನಾಲ್ಕು ಭಾಗಗಳಾಗಿ ವಿಭಜಿಸಬೇಕೆಂಬ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಕ್ಕಾಗಿ ವೈದ್ಯ ಅವರು ವ್ಯಾಪಕ ಟೀಕೆಗಳಿಗೆ ಗುರಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News