ಅಮೆರಿಕದ ಕಪ್ಪು ಜನಾಂಗ ಮತ್ತು ಭಾರತದ ಅಸ್ಪೃಶ್ಯತೆ
ಕಪ್ಪು ಜನಾಂಗಗಳ ಶ್ರಮದಿಂದಲೇ ಸಕಲಸಂಪತ್ತನ್ನು ಪಡೆದುಕೊಂಡ ಈ ದೇಶ ಯಾವತ್ತೂ ಅವರನ್ನು ತಮ್ಮಂತೆ ಮನುಷ್ಯರು ಎಂಬ ಸಮಭಾವದಿಂದ ಕಾಣಲೇ ಇಲ್ಲ. ಬದಲಿಗೆ ಅತೀ ನಿಕೃಷ್ಟವಾಗಿ ಕನಿಷ್ಠ ದರ್ಜೆಯ ಪ್ರಜೆಗಳಾಗಿಯೇ ಕಾಣುತ್ತಾ ಕಪ್ಪು ಜನಾಂಗಗಳು ಮನುಷ್ಯರೇ ಅಲ್ಲ ಎಂಬಂತೆ ಪ್ರಾಣಿಗಳಂತೆ ನಡೆಸಿಕೊಂಡಿದೆ. ಜೊತೆಗೆ ಕಪ್ಪು ಜನರ ವಿವಾಹಗಳನ್ನು ಕಾನೂನು ಎಂದೂ ಸಮ್ಮತಿಸುತ್ತಿರಲಿಲ್ಲ. ಒಬ್ಬ ಕಪ್ಪು ಪುರುಷನಿಗೆ ತನ್ನ ಹೆಂಡತಿ ಮಕ್ಕಳ ಮೇಲೆ ಯಾವುದೇ ರೀತಿಯ ಹಕ್ಕು ಪ್ರತಿಪಾದಿಸುವ ಅಧಿಕಾರವೇ ಇರಲಿಲ್ಲ. 20ನೇ ಶತಮಾನದಲ್ಲಿ ಬಿಳಿಯರ ಶ್ರೇಷ್ಠತೆಯ ವ್ಯಸನ ಯಾವ ಮಟ್ಟಿಗೆ ಇತ್ತು ಎಂದರೆ ‘ಒನ್ ಡ್ರಾಪ್ ರೂಲ್’ ಅಥವಾ ‘ಒನ್ ಡ್ರಾಪ್ ಆಫ್ ಬ್ಲ್ಯಾಕ್ ಬ್ಲಡ್’ ಎಂಬ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿತ್ತು.
ಅಮೆರಿಕದ ಪ್ರಸಿದ್ಧ ಕುಕ್ಕಾಂಟಿ ಆಸ್ಪತ್ರೆಯಲ್ಲಿ ಯುರಾಲಜಿ ಸರ್ಜನ್ ಆಗಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿ, ಪ್ರಸ್ತುತ ಅಮೆರಿಕದ ವರ್ಜೀನಿಯಾದಲ್ಲಿ ನೆಲೆಸಿರುವ ಡಾ. ಅಮರ್ ಕುಮಾರ್ ತಮ್ಮ ನಿವೃತ್ತ ಜೀವನವನ್ನು ಸಾಹಿತ್ಯ ಓದು, ಜನಪರ ಚಿಂತನೆಗೆ ಹಾಗೂ ಸಾಮಾಜಿಕ ಚಟುವಟಿಕೆಗಳಿಗೆ ಮುಡುಪಾಗಿಟ್ಟಿದ್ದಾರೆ. ಕನ್ನಡ ಭಾಷೆ ಮತ್ತು ಸಂಸ್ಕೃತಿಗಳ ಬಗೆಗೆ ಅಪಾರ ಪ್ರೀತಿಯನ್ನು ಇಟ್ಟುಕೊಂಡಿದ್ದು, ಮೈಸೂರಿನ ಬಳಿಯ ಮುಳ್ಳೂರು ಗ್ರಾಮದಲ್ಲಿ ಸುಮಾರು 500 ವಿದ್ಯಾರ್ಥಿಗಳು ವ್ಯಾಸಂಗ ಮಾಡುವ ಕನ್ನಡ ಮಾದ್ಯಮ ಶಾಲೆಯನ್ನು ನಡೆಸುತ್ತಿದ್ದಾರೆ. ಹಾಗೆಯೇ ಮೈಸೂರಿನಲ್ಲಿ ಭಾರತ್ ಕ್ಯಾನ್ಸರ್ ಆಸ್ಪತ್ರೆಯನ್ನು ಸ್ಥಾಪಿಸಿ ತಮ್ಮ ವೈದ್ಯಕೀಯ ಸೇವೆಯನ್ನು ಮುಂದುವರಿಸಿದ್ದಾರೆ. ಕನ್ನಡದ ಖ್ಯಾತ ನಟ ಮತ್ತು ಸಾಮಾಜಿಕ ಹೋರಾಟಗಾರ ಚೇತನ್ ಇವರ ಸುಪುತ್ರ. ಅಮೆರಿಕದ ಕಪ್ಪು ಸಮಸ್ಯೆ ಮತ್ತು ಭಾರತದ ಅಸ್ಪಶ್ಯತೆಯ ಬಗ್ಗೆ ಅವರ ಜೊತೆಗಿನ ಸಂವಾದದ ಸಂಗತಿಗಳನ್ನು ಬೆಂಗಳೂರು ಸೆಂಟ್ರಲ್ ವಿಶ್ವವಿದ್ಯಾನಿಲಯದ ಕನ್ನಡ ಉಪನ್ಯಾಸಕ ಡಾ. ನಾರಾಯಣ ಕ್ಯಾಸಂಬಳ್ಳಿ ಅಕ್ಷರ ರೂಪಕ್ಕೆ ಇಳಿಸಿದ್ದಾರೆ.
ಅಮೆರಿಕದ ಕಪ್ಪು ಜನಾಂಗ ಮತ್ತು ಭಾರತದ ಅಸ್ಪಶ್ಯ ಸಮುದಾಯಗಳ ನಡುವೆ ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಹಲವು ಸಾಮ್ಯತೆಗಳು ಇರುವುದನ್ನು ಗಮನಿಸಬಹುದು. ಮೂಲತಃ ಅಮೆರಿಕ ರೆಡ್‌ಇಂಡಿಯನ್ನರ ದೇಶವಾಗಿತ್ತು. ಈಗ ಅದೊಂದು ವಲಸಿಗರ ದೇಶ. ಆದರೆ ಯೂರೋಪ್‌ನ ಬೇರೆ ಬೇರೆ ಭಾಗಗಳಿಂದ ಬಂದ ಬಿಳಿಯರು ಲಕ್ಷಾಂತರ ರೆಡ್ ಇಂಡಿಯನ್ನರನ್ನು ಕೊಂದು ಇಲ್ಲಿನ ಭೂಪ್ರದೇಶಗಳನ್ನು ದೋಚಿ; ಆಫ್ರಿಕದಿಂದ ಲಕ್ಷಾಂತರ ಕಪ್ಪುಜನಾಂಗಗಳನ್ನು ಎಳೆತಂದು ಗುಲಾಮರಾಗಿಸಿಕೊಂಡು ಅವರ ಮೇಲೆ ದೌರ್ಜನ್ಯ ಮತ್ತು ದಬ್ಬಾಳಿಕೆಗಳನ್ನು ನಡೆಸಿ ಈ ದೇಶವನ್ನು ಒಂದು ಬಿಳಿಯರ ದೇಶವನ್ನಾಗಿ ಮಾಡಿದ ಕತೆಗಳನ್ನು ಅಮೆರಿಕವು ತನ್ನ ಇತಿಹಾಸದಲ್ಲಿ ಬಚ್ಚಿಟ್ಟುಕೊಂಡಿದೆ. ಅದೇ ರೀತಿ ಅಸ್ಪಶ್ಯ ಸಮುದಾಯಗಳೇ ಭಾರತದ ಮೂಲನಿವಾಸಿಗಳಾದರೂ ಹೊರಗಿನಿಂದ ಬಂದಂತಹ ಆರ್ಯರಾದ ಪುರೋಹಿತಶಾಹಿಗಳು ಇಲ್ಲಿನ ಮೂಲನಿವಾಸಿಗಳ ಮೇಲೆ ಹಲವು ಕಟ್ಟುಪಾಡುಗಳನ್ನು ಹೇರಿ ಶೂದ್ರ ಮತ್ತು ಅಸ್ಪಶ್ಯರನ್ನಾಗಿಸಿದರು.
ಸುಮಾರು 1619ರಲ್ಲಿ ಅಮೆರಿಕದ ವರ್ಜಿನಿಯಾಗೆ ಕಪ್ಪು ಜನರನ್ನು ಮೊದಲ ಬಾರಿಗೆ ಗುಲಾಮರಾಗಿ ಕರೆತರಲಾಯಿತು. ಆ ನಂತರ ಬೇರೆ ಬೇರೆ ಭತ್ತ, ಹತ್ತಿ ಬೆಳೆಯಲು, ಪ್ಲಾಂಟೇಷನ್‌ಗಳಲ್ಲಿನ ಕೆಲಸಗಳಿಗಾಗಿ ಬಲವಂತವಾಗಿ ಆಫ್ರಿಕ ಖಂಡದಿಂದ ಕಪ್ಪು ಜನರನ್ನು ಪ್ರಾಣಿಗಳಂತೆ ಹಡಗುಗಳಲ್ಲಿ ತುಂಬಿ ತರಲಾಗುತ್ತಿತ್ತು. ಈ ಸಮಯದಲ್ಲಿ ಕಪ್ಪು ಜನರು ಹೆದರಿ, ಆತಂಕಗೊಂಡು ಹಡಗುಗಳಿಂದ ಸಮುದ್ರಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುತ್ತಿದುದ್ದು ಸರ್ವೇ ಸಾಮಾನ್ಯವಾಗಿರುತ್ತಿತ್ತು. ಜೊತೆಗೆ ಈ ಆತ್ಮಹತ್ಯೆಗಳ ಬಗೆಗೆ ಬಂಧಿತ ಕಪ್ಪುಜನರಿಗೆ ಇದ್ದ ನಂಬಿಕೆ ಏನೆಂದರೆ, ತಾವು ಆತ್ಮಹತ್ಯೆ ಮಾಡಿಕೊಂಡರೆ ಈ ಗುಲಾಮಗಿರಿಯ ಬಂಧನದಿಂದ ಮುಕ್ತಿ ಪಡೆದು ತಮ್ಮ ಜನ್ಮ ಭೂಮಿಗೆ ವಾಪಸ್ ಮರಳಿ ಸಂಬಂಧಿಗಳನ್ನು, ಸ್ನೇಹಿತರನ್ನು ಸೇರಿಕೊಳ್ಳಬಹುದು ಎಂಬುದು.
ಗುಲಾಮರು ಹೀಗೆ ಆತ್ಮಹತ್ಯೆಗೆ ಶರಣಾಗುವುದರಿಂದ ಬಿಳಿಯರು ತಮಗೆ ಆಗುವ ನಷ್ಟವನ್ನು ತಪ್ಪಿಸಲು, ಆತ್ಮಹತ್ಯೆಗೆ ಶರಣಾದ ಕರಿಯರ ತಲೆಗಳನ್ನು ತುಂಡರಿಸಿ, ಹಡಗುಗಳಿಗೆ ನೇತುಹಾಕಿ; ನೋಡಿ ಇವರು ತಮ್ಮ ಪೂರ್ವ ಜಾಗಗಳಿಗೆ ಮರಳುವಾಗ ಅವರಿಗೆ ತಲೆಗಳೇ ಇರುವುದಿಲ್ಲ ಎಂದು ಹೆದರಿಸಿ ಕಪ್ಪುಜನರು ಸಾಯದಂತೆ ಜೀವಂತವಾಗಿ ಕರೆದೊಯ್ದು ಮಾರಾಟ ಮಾಡುವ ಅಮಾನವೀಯ ಘಟನೆಗಳು ನಡೆಯುತ್ತಿದ್ದವು. ಆ ಕಾರಣಕ್ಕೆ ಕಪ್ಪು ಜನರು ಆರಂಭದಿಂದ ಇವತ್ತಿನವರೆಗೂ ನಿರಂತರವಾದ ಒಂದಲ್ಲಾ ಒಂದು ಭಯ ಮತ್ತು ಹೆದರಿಕೆಯಲ್ಲೇ ಬಾಳುವಂತಾಗಿರುವುದು ಚಾರಿತ್ರಿಕ ದುರಂತ. ಆದರೆ ಅಂತರ್ ಯುದ್ಧದ (Civil war) ನಂತರ; ಅಮೆರಿಕ 1863ರಲ್ಲಿ ಗುಲಾಮಗಿರಿಯನ್ನು ಕಾನೂನಾತ್ಮಕವಾಗಿ ನಿಷೇಧಿಸಿದ ನಂತರವೂ ಕರಿಯರ ಮೇಲಿನ ತಾರತಮ್ಯ, ದಬ್ಬಾಳಿಕೆ, ದೌರ್ಜನ್ಯಗಳು ಕೊನೆಯಾಗಿವೆಯೇ ಎಂಬುದು ಮಾತ್ರ ಇವತ್ತಿಗೂ ಕಾಡುವ ಪ್ರಶ್ನೆ. ಯಾವಾಗಲೂ ಅಮೆರಿಕ ತಾನೊಂದು ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶವೆಂದು ಹೇಳಿಕೊಳ್ಳುತ್ತದೆ. ಆದರೆ ಅಮೆರಿಕದ ಬಿಳಿಯ ಹೆಂಗಸರಿಗೂ 1919ರ ತನಕ ಮತಚಲಾಯಿಸುವ ಹಕ್ಕು ಇರಲಿಲ್ಲ ಅನ್ನುವುದಾದರೆ, ಇನ್ನು ಕರಿಯರ ಪರಿಸ್ಥಿತಿ ಯಾವರೀತಿ ಇದ್ದಿರಬಹುದು ಎಂಬುದನ್ನು ಊಹಿಸುವುದು ಅಸಾಧ್ಯ.
ಕಪ್ಪು ಜನಾಂಗಗಳ ಶ್ರಮದಿಂದಲೇ ಸಕಲಸಂಪತ್ತನ್ನು ಪಡೆದುಕೊಂಡ ಈ ದೇಶ ಯಾವತ್ತೂ ಅವರನ್ನು ತಮ್ಮಂತೆ ಮನುಷ್ಯರು ಎಂಬ ಸಮಭಾವದಿಂದ ಕಾಣಲೇ ಇಲ್ಲ. ಬದಲಿಗೆ ಅತೀ ನಿಕೃಷ್ಟವಾಗಿ ಕನಿಷ್ಠ ದರ್ಜೆಯ ಪ್ರಜೆಗಳಾಗಿಯೇ ಕಾಣುತ್ತಾ ಕಪ್ಪು ಜನಾಂಗಗಳು ಮನುಷ್ಯರೇ ಅಲ್ಲ ಎಂಬಂತೆ ಪ್ರಾಣಿಗಳಂತೆ ನಡೆಸಿಕೊಂಡಿದೆ. ಜೊತೆಗೆ ಕಪ್ಪು ಜನರ ವಿವಾಹಗಳನ್ನು ಕಾನೂನು ಎಂದೂ ಸಮ್ಮತಿಸುತ್ತಿರಲಿಲ್ಲ. ಒಬ್ಬ ಕಪ್ಪು ಪುರುಷನಿಗೆ ತನ್ನ ಹೆಂಡತಿ ಮಕ್ಕಳ ಮೇಲೆ ಯಾವುದೇ ರೀತಿಯ ಹಕ್ಕು ಪ್ರತಿಪಾದಿಸುವ ಅಧಿಕಾರವೇ ಇರಲಿಲ್ಲ. 20ನೇ ಶತಮಾನದಲ್ಲಿ ಬಿಳಿಯರ ಶ್ರೇಷ್ಠತೆಯ ವ್ಯಸನ ಯಾವ ಮಟ್ಟಿಗೆ ಇತ್ತು ಎಂದರೆ ‘ಒನ್ ಡ್ರಾಪ್ ರೂಲ್’ (one drop rule) ಅಥವಾ ಒನ್ ಡ್ರಾಪ್ ಆಫ್ ಬ್ಲ್ಯಾಕ್ ಬ್ಲಡ್ (one drop of black blood) ಎಂಬ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿತ್ತು. ಈ ನಿಯಮದ ಪ್ರಕಾರ ಯಾವರೀತಿಯಲ್ಲೇ ಆಗಲಿ ಕಪ್ಪು ಹಾಗೂ ಬಿಳಿಯರ ಸೇರುವಿಕೆಯಿಂದ ಹುಟ್ಟುವ ಆಥವಾ ಕಪ್ಪು ಹೆಣ್ಣುಮಕ್ಕಳ ಮೇಲೆ ಬಿಳಿಯ ವ್ಯಕ್ತಿ ಅಥವಾ ಮಾಲಕ ನಡೆಸುವ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಮುಂತಾದ ಕಾರಣಗಳಿಗೆ ಹುಟ್ಟುವ ಯಾವುದೇ ಮಗುವು ಅಂತಿಮವಾಗಿ ಅದು ಕಪ್ಪು ಜನಾಂಗಕ್ಕೇ ಸೇರಬೇಕು ಹಾಗೂ ಎಲ್ಲಾ ಕರಿಯರಂತೆ ಗುಲಾಮನೇ ಆಗಬೇಕು ಎಂಬ ಅಮಾನವೀಯ ಕಾನೂನುಗಳು ಜಾರಿಯಲ್ಲಿತ್ತು. ಅಂದರೆ ಕಪ್ಪು ಜನರ ರಕ್ತ ಒಂದು ತೊಟ್ಟು ಬೆರೆತರೂ ಅದು ಅಶುದ್ಧ ಅಥವಾ ಮಲಿನಗೊಂಡಿದ್ದು ಎಂಬುದು ಜನಾಂಗೀಯವಾದಿ ಬಿಳಿಯರ ಭಾವನೆ.
ಈ ಮನಸ್ಥಿತಿ ಅಮೆರಿಕದ ಪೊಲೀಸ್ ವ್ಯವಸ್ಥೆಯಲ್ಲಿ ಇವತ್ತಿಗೂ ಎದ್ದುಕಾಣುತ್ತದೆ. ಈ ದೇಶದಲ್ಲಿ ಪೊಲೀಸ್ ಇಲಾಖೆ ಶುರುವಾಗಿದ್ದೇ ಬಿಳಿಯರನ್ನು ಹಾಗೂ ಅವರ ಸಂಪತ್ತನ್ನು ರಕ್ಷಿಸಲು ಮತ್ತು ಕಪ್ಪು ಜನರನ್ನು ನಿಯಂತ್ರಿಸಲು. ಆ ಕಾರಣಕ್ಕೆ ಅಮೆರಿಕದಲ್ಲಿ ಒಬ್ಬ ಬಿಳಿಯ ಹುಡುಗನಿಗೆ ತೊಂದರೆಯಾದರೆ ಧೈರ್ಯವಾಗಿ ಪೊಲೀಸ್ ಬಳಿ ಹೋಗುತ್ತಾನೆ. ಅದೇ ಕಪ್ಪು ಹುಡುಗನಿಗೆ ಪೊಲೀಸರೇ ತೊಂದರೆ. ಹಾಗಾಗಿ ಪೊಲೀಸರ ಬಳಿ ಹೋಗುವುದಿರಲಿ ಅವರನ್ನು ಕಂಡರೆ ಹೆದರಿ ಓಡಿಹೋಗುತ್ತಾನೆ. ಕಾನೂನಾತ್ಮಕವಾಗಿ ಕಪ್ಪು ಜನರಿಗೆ ಗುಲಾಮಗಿರಿಯಿಂದ ಸ್ವಾತಂತ್ರ್ಯ ಇದ್ದರೂ ಕರಿಯರ ಬಗೆಗೆ ಇರುವ ಅಲಿಖಿತವಾದ ತಾರತಮ್ಯ ನಿರಂತರವಾಗಿ ಇವತ್ತಿಗೂ ವಿವಿಧ ರೀತಿಗಳಲ್ಲಿ ನಡೆಯುತ್ತಲೇ ಇದೆ. ಅಮೆರಿಕದ ಪೊಲೀಸ್ ವ್ಯವಸ್ಥೆ ಕರಿಯರ ಬಗ್ಗೆ ಹೇಗೆಲ್ಲಾ ನಡೆದುಕೊಳ್ಳುತ್ತದೆ ಎಂಬುದಕ್ಕೆ ಇನ್ನೂ ಕೆಲವು ಉದಾಹರಣೆಗಳನ್ನು ನೋಡಬಹುದು. ಜುಲೈ 20, 2012ರಲ್ಲಿ ‘ಜೇಮ್ಸ್ ಈಗನ್ ಹೋಮ್ಸ್’ ಎಂಬ ಬಿಳಿಯ ವ್ಯಕ್ತಿ ಕ್ಯಾಲಿಫೋರ್ನಿಯಾದ ಒಂದು ಸಿನೆಮಾ ಮಂದಿರದಲ್ಲಿ ಮಿಷನ್‌ಗನ್‌ನಿಂದ ಮನಸೊ ಇಚ್ಛೆ ಗುಂಡುಹಾರಿಸಿದ ಕಾರಣ 12 ಜನರು ಸತ್ತು ಸುಮಾರು 70ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡರು.
ಆ ಸಮಯದಲ್ಲಿ ಈ ಕೊಲೆ ಮಾಡಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ಬಹಳ ಗೌರವಯುತವಾಗಿ ನಡೆಸಿಕೊಳ್ಳುತ್ತಾರೆ. ನಂತರ ಅವನು ಮಾನಸಿಕ ಅಸ್ವಸ್ಥ ಎಂಬ ಕಥೆಗಳನ್ನು ಸೃಷ್ಟಿಸಲಾಯಿತು. ಇದೇ ಪ್ರದೇಶದಲ್ಲಿ 30 ಆಗಸ್ಟ್ 2019ರಲ್ಲಿ ಮತ್ತೊಂದು ಘಟನೆ ನಡೆಯುತ್ತದೆ. ‘ಎಲಿಜಾ ಮೆಕ್ಲಿನ್’ ಎಂಬ 23 ವರ್ಷದ ಕಪ್ಪು ಯುವಕ ತನ್ನ ಕಿವಿಗೆ ಸಿಕ್ಕಿಸಿಕೊಂಡ ಹೆಡ್‌ಫೋನ್ ಸಂಗೀತಕ್ಕೆ ನೃತ್ಯ ಮಾಡಿಕೊಂಡು ರಸ್ತೆಯಲ್ಲಿ ಹೋಗುತ್ತಿರುತ್ತಾನೆ. ಅದು ಬಿಳಿಯರು ವಾಸ ಮಾಡುವ ಪ್ರದೇಶ. ಈ ಸಂದರ್ಭದಲ್ಲಿ ಪೊಲೀಸರಿಗೆ ನಮ್ಮ ರಸ್ತೆಯಲ್ಲಿ ಒಬ್ಬ ಅನುಮಾನಾಸ್ಪದ ಕಪ್ಪು ವ್ಯಕ್ತಿ ಓಡಾಡುತ್ತಿದ್ದಾನೆ ಎಂಬುದಾಗಿ ಕರೆ ಬರುತ್ತದೆ. ತಕ್ಷಣ ಅಲ್ಲಿಗೆ ಬಂದ ಪೊಲೀಸರು ಯಾವುದೇ ಪೂರ್ವಾಪರಗಳನ್ನು ಪರಿಶೀಲಿಸದೆ ನೇರವಾಗಿ ಅವನ ಮೇಲೆ ಗುಂಡು ಹಾರಿಸಿ ಬಿಡುತ್ತಾರೆ. ತೀವ್ರವಾಗಿ ಗಾಯಗೊಂಡ ಮೆಕ್ಲಿನ್ ನಂತರ ಆಸ್ಪತ್ರೆಗೆ ಸಾಗಿಸುವಾಗ ಸಾವನ್ನಪ್ಪುತ್ತಾನೆ. ಈ ಎರಡು ಘಟನೆಗಳನ್ನು ಗಮನಿಸಿದಾಗ ನಮಗೆ ತಿಳಿಯುವ ಸಂಗತಿ ಏನೆಂದರೆ, ಕಪ್ಪುಜನರು ಎಂದರೆ, ಅವರು ಕ್ರಿಮಿನಲ್‌ಗಳು ಎಂಬುದಾಗಿ ಬಿಳಿಯರಲ್ಲಿ ಹಾಗೂ ಬಿಳಿಯ ಪೊಲೀಸರ ಮನಸ್ಸಿನಲ್ಲಿ ಇರುವ ಕಲ್ಪಿತ ಪೂರ್ವಗ್ರಹ. ಬಿಳಿಯವನು ಕೊಲೆಗಾರನಾದರೂ ಕಾನೂನು ಗೌರವಗಳಿಗೆ ಪಾತ್ರನಾಗುತ್ತಾನೆ. ಆದರೆ ಕಪ್ಪುವ್ಯಕ್ತಿ ಕೇವಲ ಅವನ ದೇಹದ ಬಣ್ಣದ ಕಾರಣಕ್ಕೆ ಅಪರಾಧಿಯಾಗಿ ಪೊಲೀಸರಿಂದ ಕೊಲೆಯಾಗುತ್ತಾನೆ. ಇನ್ನು ‘ಅಪಾರ್ಥೈಡ್’ ಎಂಬ ವರ್ಣಭೇದ ನೀತಿಯನ್ನು ಸೃಷ್ಟಿಸಿ ದಕ್ಷಿಣ ಆಫ್ರಿಕ ಸೇರಿದಂತೆ ಇಡೀ ಜಗತ್ತಿಗೆ ಹಬ್ಬಿಸಿದವರೇ ಅಮೆರಿಕದ ಬಿಳಿಯರು.
ಚರಿತ್ರೆಯಲ್ಲಿ ಅಮೆರಿಕ ಕಪ್ಪು ಜನರನ್ನು ಹೇಗೆಲ್ಲ ನಡೆಸಿಕೊಂಡಿದೆ ಎಂದರೆ; ಮೊದಲನೇ ಮಹಾಯುದ್ಧದಲ್ಲಿ ಪಾಲ್ಗೊಂಡ ಮಾಜಿ ಕಪ್ಪುಸೈನಿಕರು ಸಾರ್ವಜನಿಕವಾಗಿ ಸಮವಸ್ತ್ರಗಳನ್ನು ತೊಟ್ಟು ಹೋರಾಡಿದಕ್ಕಾಗಿ ಬಿಳಿಯರು ಹೊಡೆದು ಸಾಯಿಸಿರುವ ಉದಾಹರಣೆಗಳು ಸಾಕಷ್ಟಿವೆ. ಹಾಗೆಯೇ ಅಂತರ್‌ಯುದ್ಧ(Civil war)ದಲ್ಲಿ ಪಾಲ್ಗೊಂಡ ಪ್ರತಿ ಕಪ್ಪು ಸೈನಿಕನಿಗೆ, 40 ಎಕರೆ ಭೂಮಿಯ ಜೊತೆಗೆ ಒಂದು ಹೇಸರಗತ್ತೆಯನ್ನು ಉಚಿತವಾಗಿ ಕೊಡಬೇಕು ಎಂಬ ಒಪ್ಪಂದ ಇತ್ತು. ಆದರೆ ಅಮೆರಿಕದ ಬಿಳಿಯ ಸರಕಾರ ಇದ್ಯಾವುದನ್ನೂ ಪೂರೈಸಲಿಲ್ಲ. ಬದಲಿಗೆ ಕಪ್ಪು ಜನಸಮುದಾಯಗಳು ವಾಸಮಾಡುವ ಪ್ರದೇಶಗಳನ್ನೇ ರೆಡ್‌ಲೈನಿಂಗ್ಸ್ (Red linings) ಎಂದು ಘೋಷಣೆ ಮಾಡಿ ಹಲವು ರೀತಿಯ ನಿರ್ಬಂಧಗಳನ್ನು ಮಾಡಿ, ಸಣ್ಣ ಪುಟ್ಟ ಅಪರಾಧಗಳಿಗೂ ಲಕ್ಷಾಂತರ ಕಪ್ಪು ಪುರುಷರನ್ನು ಜೈಲುಗಳಿಗೆ ಕಳಿಸಿ ಕ್ರೂರವಾದ ಶಿಕ್ಷೆಗಳನ್ನು ನೀಡಿದೆ. ಹೀಗೆ ಕರಿಯರು ಬಿಳಿಯರಿಗೆ ಯಾವ ರೀತಿಯಲ್ಲೂ ಸಮನಾಗಿ ಇರುವುದನ್ನು ಅಮೆರಿಕದ ಬಿಳಿಯರು ಎಂದಿಗೂ ಸಹಿಸುತ್ತಿರಲಿಲ್ಲ. ಜೊತೆಗೆ ಅಮೆರಿಕದಲ್ಲಿ ಸಾಂಸ್ಥಿಕ ವರ್ಣಭೇದ(Institutional racism) ಅತಿ ಹೆಚ್ಚು ಪ್ರಮಾಣದಲ್ಲಿ ಇದೆ ಎಂಬುದಕ್ಕೆ ಅಮೆರಿಕ ಪೊಲೀಸ್ ಇಲಾಖೆ ಕಪ್ಪು ಜನರ ಮೇಲೆ ನಡೆಸಿರುವ ದೌರ್ಜನ್ಯ ಮತ್ತು ದಾಳಿಗಳೇ ಸಾಕ್ಷಿ. ಆ ಕಾರಣಕ್ಕೆ ಅಮೆರಿಕದ ಕಪ್ಪು ಪುರುಷರು ಶಾಲಾ-ಕಾಲೇಜುಗಳಲ್ಲಿ ಇರುವುದಕ್ಕಿಂತ ಜೈಲುಗಳಲ್ಲಿರುವುದೇ ಹೆಚ್ಚು. ದುರಂತದ ಸಂಗತಿಯೆಂದರೆ ಜೈಲಿನಲ್ಲಿ ಇರುವವರ ಸಂಖ್ಯೆ ಭಾರತದಲ್ಲಿ 4 ಲಕ್ಷ ಆದರೆ ಅಮೆರಿಕದ ಜೈಲುಗಳಲ್ಲಿ ಇರುವವರ ಸಂಖ್ಯೆ 23 ಲಕ್ಷ. ಇದರಲ್ಲಿ ಬಹುತೇಕರು ಕಪ್ಪು ಜನಾಂಗಕ್ಕೆ ಸೇರಿದವರು. ಈ ದೇಶ ಬಿಳಿಯರ ದೇಶ ಇಲ್ಲಿ ಬಿಳಿಯರು ಯಾವತ್ತೂ ಸರ್ವಶ್ರೇಷ್ಠರು ಇಲ್ಲಿನ ಸಂಪತ್ತೆಲ್ಲಾ ಅವರಿಗೆ ಸೇರಿದ್ದು ಎಂಬ ಭಾವನೆ ಸಾಂಪ್ರದಾಯಿಕ ಜನಾಂಗೀಯವಾದಿ ಬಿಳಿಯರಲ್ಲಿ ಗಾಢವಾಗಿ ಬೇರೂರಿದೆ.
ಅಮೆರಿಕ ದೇಶವು 1776ರಲ್ಲಿ ಸ್ವಾತಂತ್ರ್ಯವನ್ನು ಪಡೆದುಕೊಂಡಾಗ ಅಲ್ಲಿನ ಬಿಳಿಯ ಗಂಡಸರಿಗೆ ಮತ್ತು ಶ್ರೀಮಂತರಿಗೆ ಮಾತ್ರ ರಾಜಕೀಯ ಹಕ್ಕುಗಳು ದೊರೆತವು. ವಿಚಿತ್ರವೆಂದರೆ ಅಮೆರಿಕದ ಬಿಳಿಯ ಮಹಿಳೆಯರಿಗೂ ಕೂಡ ಸಮಾನವಾದ ಯಾವುದೇ ರಾಜಕೀಯ ಹಕ್ಕುಗಳು ದೊರೆಯಲಿಲ್ಲ.
ಇನ್ನು ಕರಿಯರಿಗೆ, ಗುಲಾಮರಿಗೆ, ಬಡವರಿಗೆ ಯಾವ ರೀತಿಯ ರಾಜಕೀಯ ಹಕ್ಕುಗಳೂ ಇತ್ತೀಚಿನವರೆಗೆ ಸಿಕ್ಕಿರಲಿಲ್ಲ. ಸಾಮಾನ್ಯವಾಗಿ ಯಾವುದೇ ಸಮಾಜದಲ್ಲಿ ಆರ್ಥಿಕ ಸಮಾನತೆ ಇಲ್ಲದಿದ್ದರೂ ಸಹ ರಾಜಕೀಯ ಸಮಾನತೆಯು ಒಂದು ವ್ಯವಸ್ಥೆ ಸಬಲೀಕರಣವಾಗಲು ಸಹಕಾರಿಯಾಗುತ್ತದೆ. ಆದರೆ ಯಾವುದೇ ಜನ ಸಮುದಾಯಗಳಿಗೆ ಕನಿಷ್ಠ ಮೂಲಭೂತ ಹಕ್ಕುಗಳೇ ಇಲ್ಲದಿದ್ದರೆ ಅಂತಹ ಜನ ಸಮುದಾಯಗಳು ಒಂದು ವ್ಯವಸ್ಥೆಯಲ್ಲಿ ಬದುಕುವುದು ತುಂಬಾ ಕಷ್ಟ. ಈ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ನೋಡುವುದಾದರೆ ಅಮೆರಿಕದ ಬಿಳಿಯ ಹೆಂಗಸರಿಗೂ ಕೂಡ ರಾಜಕೀಯ ಹಕ್ಕುಗಳು ದೊರೆತದ್ದು 1919ರ ನಂತರವೇ. ಹಾಗೇ ಕಪ್ಪು ಸಮುದಾಯಗಳಿಗೂ ಅಮೆರಿಕದ ಸಿವಿಲ್ ವಾರ್ ನಂತರ ಕೆಲವು ಪ್ರದೇಶಗಳಲ್ಲಿ ಕೆಲವು ಹಕ್ಕುಗಳನ್ನು ಮಾತ್ರ ನೀಡಲಾಯಿತು. ಆದರೆ ಇತರ ಎಷ್ಟೋ ಪ್ರದೇಶಗಳಲ್ಲಿ ಕಪ್ಪು ಸಮುದಾಯದ ಜನರಿಗೆ ಎಲ್ಲ ಸಾಮಾಜಿಕ, ರಾಜಕೀಯ, ಆರ್ಥಿಕ ಹಕ್ಕುಗಳನ್ನು ಇತ್ತೀಚಿನ ತನಕ ನಿರಾಕರಿಸಲಾಗಿತ್ತು ಮತ್ತು ಅದು ಇಂದಿಗೂ ಬೇರೆ ಬೇರೆ ಸ್ವರೂಪದಲ್ಲಿ ಮುಂದುವರಿದಿದೆ.
ಅಮೆರಿಕದಲ್ಲಿರುವ ಇನ್ನೊಂದು ವಿಚಿತ್ರ ಸಂಗತಿ ಎಂದರೆ ಎಲ್ಲಾ ಜನ ಸಮುದಾಯಗಳಿಗೂ ಮತ್ತು ಆ ದೇಶದ ಎಲ್ಲಾ ಪ್ರದೇಶಗಳಿಗೂ ಅನ್ವಯವಾಗುವಂತಹ ಸಮಾನವಾದ ಕಾನೂನುಗಳಿಲ್ಲ ಎಂಬುದು. ಇಲ್ಲಿನ ಪ್ರತಿ ಪ್ರದೇಶಕ್ಕೂ ಪ್ರತ್ಯೇಕವಾದ ಕಾನೂನುಗಳು ಮತ್ತು ನಿಬಂಧನೆಗಳಿವೆ.
ಈ ಭಿನ್ನ ಕಾನೂನು ಮತ್ತು ನಿಬಂಧನೆಗಳನ್ನು ಬಳಸಿ ಯಾವ ಯಾವ ಪ್ರದೇಶಗಳಲ್ಲಿ ಕಪ್ಪು ಸಮುದಾಯದ ಜನರು ಇರುವರೋ ಆ ಪ್ರದೇಶಗಳಲ್ಲಿ ಇವರ ಹಕ್ಕುಗಳನ್ನು ಕಸಿಯಲಾಗಿದೆ.ಹಾಗೆ ಅಮೆರಿಕದ ಮೂಲ ನಿವಾಸಿಗಳಾದ ರೆಡ್ ಇಂಡಿಯನ್‌ಗೆ 1924ರ ತನಕ ಯಾವುದೇ ರೀತಿಯ ಕಾನೂನಾತ್ಮಕ ಹಕ್ಕುಗಳನ್ನು ಅಮೆರಿಕ ನೀಡಿರಲಿಲ್ಲ. ಈ ಕಾರಣಕ್ಕಾಗಿಯೇ ಮುಂದೆ 1965ರ ನಂತರ ಮಾರ್ಟಿನ್ ಲೂಥರ್ ಕಿಂಗ್ ಮುಂತಾದವರು ಅಮೆರಿಕದ ಎಲ್ಲಾ ನಾಗರಿಕರಿಗೂ ಸಮಾನವಾದ ಮತ್ತು ಕಾನೂನಾತ್ಮಕವಾದ ಹಕ್ಕುಗಳಿಗಾಗಿ ದೊಡ್ಡ ಹೋರಾಟವನ್ನೇ ಮಾಡಿದರು. ಇದರ ಫಲವಾಗಿಯೇ ಅಮೆರಿಕದಲ್ಲಿ ‘‘1965ರ ವೋಟಿಂಗ್ ರೈಟ್ಸ್ ಆ್ಯಕ್ಟ್’’ ಅಸ್ತಿತ್ವಕ್ಕೆ ಬಂತು. ಹೀಗೆ ನಿರಂತರವಾದ ಹೋರಾಟಗಳ ಮೂಲಕ ಕಪ್ಪು ಜನರಿಗೆ ರಾಜಕೀಯ ಹಕ್ಕುಗಳು ದೊರೆತಿದೆಯಾದರೂ ಮುಂದೆ ಸಣ್ಣ-ಪುಟ್ಟ ಅಪರಾಧಗಳಿಗೂ ಈ ಸಮುದಾಯದ ಜನರನ್ನು ಬಂದಿಖಾನೆಗಳಿಗೆ ದೂಡುವುದರ ಮೂಲಕ ನಿರಂತರವಾದ ದೌರ್ಜನ್ಯಗಳು ಪ್ರಾರಂಭವಾದವು.
ಚರಿತ್ರೆಯಲ್ಲಿ ಅಮೆರಿಕ ಕಪ್ಪು ಜನರನ್ನು ಹೇಗೆಲ್ಲ ನಡೆಸಿಕೊಂಡಿದೆ ಎಂದರೆ; ಮೊದಲನೇ ಮಹಾಯುದ್ಧದಲ್ಲಿ ಪಾಲ್ಗೊಂಡ ಮಾಜಿ ಕಪ್ಪುಸೈನಿಕರು ಸಾರ್ವಜನಿಕವಾಗಿ ಸಮವಸ್ತ್ರಗಳನ್ನು ತೊಟ್ಟು ಹೋರಾಡಿದಕ್ಕಾಗಿ ಬಿಳಿಯರು ಹೊಡೆದು ಸಾಯಿಸಿರುವ ಉದಾಹರಣೆಗಳು ಸಾಕಷ್ಟಿವೆ. ಹಾಗೆಯೇ ಅಂತರ್‌ಯುದ್ಧ(Civil war)ದಲ್ಲಿ ಪಾಲ್ಗೊಂಡ ಪ್ರತಿ ಕಪ್ಪು ಸೈನಿಕನಿಗೆ, 40 ಎಕರೆ ಭೂಮಿಯ ಜೊತೆಗೆ ಒಂದು ಹೇಸರಗತ್ತೆಯನ್ನು ಉಚಿತವಾಗಿ ಕೊಡಬೇಕು ಎಂಬ ಒಪ್ಪಂದ ಇತ್ತು. ಆದರೆ ಅಮೆರಿಕದ ಬಿಳಿಯ ಸರಕಾರ ಇದ್ಯಾವುದನ್ನೂ ಪೂರೈಸಲಿಲ್ಲ. ಬದಲಿಗೆ ಕಪ್ಪು ಜನಸಮುದಾಯಗಳು ವಾಸಮಾಡುವ ಪ್ರದೇಶಗಳನ್ನೇ ರೆಡ್‌ಲೈನಿಂಗ್ಸ್ (Red linings) ಎಂದು ಘೋಷಣೆ ಮಾಡಿ ಹಲವು ರೀತಿಯ ನಿರ್ಬಂಧಗಳನ್ನು ಮಾಡಿ, ಸಣ್ಣ ಪುಟ್ಟ ಅಪರಾಧಗಳಿಗೂ ಲಕ್ಷಾಂತರ ಕಪ್ಪು ಪುರುಷರನ್ನು ಜೈಲುಗಳಿಗೆ ಕಳಿಸಿ ಕ್ರೂರವಾದ ಶಿಕ್ಷೆಗಳನ್ನು ನೀಡಿದೆ.
ಇನ್ನೊಂದು ದುರಂತದ ಸಂಗತಿ ಎಂದರೆ ಇಡೀ ಪ್ರಪಂಚದಲ್ಲಿ ಬಂದಿಖಾನೆಗಳಲ್ಲಿ ಬಂಧಿಸಲ್ಪಟ್ಟವರ ಸಂಖ್ಯೆ 90 ಲಕ್ಷ ಜನರಷ್ಟಿದ್ದರೆ, ಅಮೆರಿಕದ ಬಂದಿಖಾನೆಗಳಲ್ಲೇ 23 ಲಕ್ಷ ಜನರನ್ನು ಬಂಧಿಸಿಡಲಾಗಿದೆ. ಇವರಲ್ಲಿ ಹೆಚ್ಚಿನವರು ಕಪ್ಪು, ಕೆಂಪು ಮತ್ತು ಕಂದು ಬಣ್ಣಕ್ಕೆ ಸೇರಿದವರು ಎಂಬುದು ಆಘಾತಕಾರಿ ಸಂಗತಿ.
ಅಮೆರಿಕ ದೇಶದಲ್ಲಿ ಇಷ್ಟೆಲ್ಲಾ ಆಂತರಿಕ ಅಸಮಾನತೆ, ಕಪ್ಪು ಜನರ ಮೇಲಿನ ದೌರ್ಜನ್ಯ ಮತ್ತು ವರ್ಣ ತಾರತಮ್ಯಗಳಂತಹ ಅನೇಕ ಬಿಕ್ಕಟ್ಟುಗಳಿದ್ದರೂ ಅಮೆರಿಕ ದೇಶವೂ ತನ್ನ ಬಗೆಗೆ ಸ್ವಾರಸ್ಯಕರವಾದ ಕಥೆಗಳನ್ನು ಸೃಷ್ಟಿಸಿಕೊಂಡು ಜಗತ್ತಿನ ಮುಂದೆ ತಾನು ಶ್ರೇಷ್ಠ ಎಂಬ ಮುಖವಾಡವನ್ನು ಧರಿಸಿಕೊಂಡಿದೆ.
ಇವತ್ತಿಗೂ ಅಮೆರಿಕದಲ್ಲಿ ಕಪ್ಪು ಜನರಿಗೆ ಸಮಾನವಾದ ಸಾಮಾಜಿಕ ಹಕ್ಕುಗಳು ದೊರೆತಿಲ್ಲ. ಆದರೂ ಅಮೆರಿಕದ ಕೆಲವು ಬಿಳಿಯರು ಇಂದಿಗೂ ತಮ್ಮದು ಜಗತ್ತಿನ ಶ್ರೇಷ್ಠವಾದ ದೇಶವೆಂದೇ ಬೊಬ್ಬೆ ಹೊಡೆದುಕೊಳ್ಳುತ್ತಾರೆ. ಆದರೆ ಯಾವ ಕರಿಯನ ಬಾಯಲ್ಲೂ ಅಮೆರಿಕ ಶ್ರೇಷ್ಠ ದೇಶ ಎಂಬ ಮಾತು ಕೇಳಿಬರುವುದಿಲ್ಲ. ಅದೇ ರೀತಿ ಭಾರತದಲ್ಲೂ ಹಿಂದೂ ಧರ್ಮವೇ ಶ್ರೇಷ್ಠವಾದ ಧರ್ಮ ಎಂದು ಸಾಮಾನ್ಯವಾಗಿ ಮೇಲ್ವರ್ಗದವರು ಹೇಳುವುದನ್ನು ಕೇಳುತ್ತೇವೆ. ಆದರೆ ಈ ಧರ್ಮದಿಂದ ಇವರ ದೌರ್ಜನ್ಯಕ್ಕೆ, ಶೋಷಣೆಗೆ ಒಳಗಾದ ಪ್ರಜ್ಞಾವಂತ ಯಾವ ಅಸ್ಪೃಶ್ಯನ ಬಾಯಲ್ಲೂ ಈ ಮಾತುಗಳನ್ನು ಕೇಳಲು ಸಾಧ್ಯವಿಲ್ಲ. ಧರ್ಮದಿಂದ ಯಾರಿಗೆ ಅನುಕೂಲ ಆಗಿರುತ್ತೋ ಅವರಿಗೆ ಅದು ಶ್ರೇಷ್ಠವಾಗಿಯೇ ಕಾಣುತ್ತೆ. ತಾರತಮ್ಯಕ್ಕೆ ಒಳಗಾದವರು ಆ ಧರ್ಮವನ್ನು ಹೇಗೆತಾನೆ ಶ್ರೇಷ್ಠವೆಂದು ಹೇಳಲು ಸಾಧ್ಯ?
ಅಮೆರಿಕ ದೇಶವು ತಾನು ಏಕೆ ಜಗತ್ತಿನ ಅತ್ಯಂತ ಶ್ರೇಷ್ಠ ದೇಶ ಎಂಬುದರ ಕುರಿತು ದಂತಕತೆಗಳನ್ನು ಸೃಷ್ಟಿಸಿಕೊಂಡು ಇದನ್ನೇ ಸತ್ಯ ಎಂಬಂತೆ ಇಡೀ ಜಗತ್ತನ್ನು ನಂಬಿಸುತ್ತಿದೆ. ಆ ಕಟ್ಟು ಕತೆಗಳು ಯಾವುವೆಂದರೆ;
ಅಮೆರಿಕ ಇಡೀ ಪ್ರಪಂಚಕ್ಕೆ ಸಹಾಯ ಮಾಡುತ್ತಿದೆ.
ಅಮೆರಿಕದಲ್ಲಿ ಕಷ್ಟ ಪಟ್ಟರೆ ಯಾರು ಬೇಕಾದರೂ ಶ್ರೀಮಂತರಾಗಬಹುದು.
ಅಮೆರಿಕ ದೇಶದಲ್ಲಿರುವಷ್ಟು ವ್ಯಕ್ತಿ ಸ್ವಾತಂತ್ರ್ಯ ಜಗತ್ತಿನ ಬೇರೆ ಯಾವ ದೇಶಗಳಲ್ಲೂ ಇಲ್ಲ ಎಂಬ ಕಥೆಗಳು.
ಈ ರೀತಿಯ ಕಥೆಗಳನ್ನು ಸೃಷ್ಟಿಸಿಕೊಂಡ ಅಮೆರಿಕ ಇದೇ ಸತ್ಯವೆಂದು ಜಗತ್ತಿಗೆ ಸಾರಿಕೊಳ್ಳುವುದರ ಮೂಲಕ ತನ್ನ ವ್ಯಕ್ತಿತ್ವ ಮತ್ತು ಗುಣಗಳನ್ನು ಜಾಗತಿಕ ಮಟ್ಟದಲ್ಲಿ ಬೆಳೆಸಿಕೊಳ್ಳುತ್ತಲೇ ಬಂದಿದೆ.
ವಿಚಿತ್ರವೆಂದರೆ ಅಮೆರಿಕ ತನ್ನ ಸ್ವಾರ್ಥಕ್ಕಾಗಿ ಜಗತ್ತಿನ ಮಹಾನ್ ನಾಯಕರನ್ನು ಶತ್ರುಗಳೆಂದು ಬಿಂಬಿಸಿ ಕೊಂದುಹಾಕಿರುವುದನ್ನು, ಅದೇ ರೀತಿ ಅನೇಕ ದೇಶಗಳ ಮೇಲೆ ಯುದ್ಧಗಳನ್ನು ಮಾಡಿ ದೌರ್ಜನ್ಯಗಳನ್ನು ಎಸಗಿ ತನ್ನ ಕ್ರೌರ್ಯ ಮೊದಿರುವುದನ�