ಪತ್ರಿಕಾಧರ್ಮ

Update: 2021-01-23 07:46 GMT

ಶರಣ ಸಂಸ್ಕೃತಿಯ ಕುರಿತಂತೆ ಆಳವಾಗಿ ಅಧ್ಯಯನ ಮಾಡಿರುವ ರಂಜಾನ್ ದರ್ಗಾ ವೈಚಾರಿಕ ಲೋಕದ ನಡೆದಾಡುವ ಶರಣ ಎಂದೇ ಗುರುತಿಸಲ್ಪಟ್ಟವರು. ತಮ್ಮ ವೃತ್ತಿ ಬದುಕಿನ ಸುದೀರ್ಘ ಅವಧಿಯನ್ನು ಪತ್ರಿಕಾಕ್ಷೇತ್ರದಲ್ಲಿ ಸವೆಸಿದ ದರ್ಗಾ, ಕಾವ್ಯವನ್ನು ಬೀದಿಗೆ ತಂದವರ ಸಾಲಿನಲ್ಲಿ ಮುಖ್ಯರು. ಇವರು 25ಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡಮಿ ಸದಸ್ಯರಾಗಿ, ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿ, ಅಂಕಣಕಾರರಾಗಿ ಗುರುತಿಸಿಕೊಂಡಿರುವ ದರ್ಗಾ ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದಾರೆ. ಇಲ್ಲಿ ತಮ್ಮ ಪತ್ರಿಕೋದ್ಯಮ ಬದುಕನ್ನು ಹಂಚಿಕೊಂಡಿದ್ದಾರೆ.

ಪತ್ರಕರ್ತನಾಗುವುದೆಂದರೆ ಸಿನೆಮಾಗಳಲ್ಲಿ ಮತ್ತು ಟಿವಿ ಧಾರಾವಾಹಿಗಳಲ್ಲಿ ಪತ್ರಕರ್ತರ ಪಾತ್ರದಲ್ಲಿ ತೋರಿಸುವ ನಾಯಕ, ನಾಯಕಿಯರಾಗುವುದಲ್ಲ. ಪತ್ರಕರ್ತನಾದವನು ಎಂದಿಗೂ ತಾನೊಬ್ಬ ಬೇರೆಯವರಿಗಿಂತ ದೊಡ್ಡ ಮನುಷ್ಯ ಎಂದು ಭಾವಿಸಬಾರದು. ಏಕೆಂದರೆ ಅದೇ ಅವನ ಅವನತಿಗೆ ಕಾರಣವಾಗುತ್ತದೆ. ತಾನು ಬೇರೆಯವರಿಗಿಂತ ಭಿನ್ನ ಎಂಬ ಮನೋರೋಗ ಪತ್ರಕರ್ತರಿಗೆ ಬಹುಬೇಗ ಬಡಿಯುತ್ತದೆ. ತಾನು ಇತರರಿಗಿಂತ ಬೇರೆ ಅಲ್ಲ ಎಂಬ ರೋಗನಿರೋಧಕ ಶಕ್ತಿಯನ್ನು ಪತ್ರಕರ್ತರು ಹೊಂದುವುದು ಅವಶ್ಯವಾಗಿದೆ. ಇದುವೆ ಪತ್ರಕರ್ತನ ಮೊದಲ ಸಾಧನೆ ಎಂದು ಪತ್ರಕರ್ತರು ಭಾವಿಸಬೇಕು.

 

ಭಾರತದಲ್ಲಿ ಯಾವುದೇ ವಿಚಾರ ಹೇಳಬೇಕೆಂದರೂ ಧರ್ಮ ಶಬ್ದ ನಮ್ಮ ಮುಂದೆ ಬಂದು ನಿಲ್ಲುತ್ತದೆ. ಧರ್ಮ ಎಂಬುದು ಗುಣಲಕ್ಷಣ, ಮೌಲ್ಯ, ದಯೆ, ದಾನಧರ್ಮ, ನ್ಯಾಯ, ಒಳ್ಳೆಯ ನಡವಳಿಕೆ, ಮಾಡಬೇಕಾದ ಕರ್ತವ್ಯ, ಜೀವನವಿಧಾನ, ಧಾರಣಶಕ್ತಿ, ನ್ಯಾಯ ಇತ್ಯಾದಿ ಅರ್ಥಗಳನ್ನೂ ಸ್ಫುರಿಸುತ್ತದೆ. ವಿಜ್ಞಾನದಲ್ಲಿ ಕೂಡ ವಸ್ತುವಿನ ಲಕ್ಷಣಗಳಿಗೆ ಸಂಬಂಧಿಸಿದಂತೆ ಗುಣಧರ್ಮ ಪದ ಬಳಸಲಾಗುತ್ತಿದೆ. ನೀರಿನ ಗುಣಧರ್ಮ, ಬೆಂಕಿಯ ಗುಣಧರ್ಮ ಇತ್ಯಾದಿ.

ಪತ್ರಿಕಾಧರ್ಮ ಎಂಬುದು ಪತ್ರಿಕೆಗಳಿಗೆ ಇರಬೇಕಾದ ಮೌಲ್ಯಗಳನ್ನು ಸೂಚಿಸುತ್ತದೆ. ಜನಸಮುದಾಯದ ಹಿತವನ್ನು ಕಾಪಾಡುವುದೇ ಪತ್ರಿಕೆಗಳ ಬಹುದೊಡ್ಡ ಮೌಲ್ಯವಾಗಿದೆ. ಜನಸಮುದಾಯ ಪದ ಎಲ್ಲ ಧರ್ಮಗಳನ್ನು, ಜನಾಂಗಗಳನ್ನು, ಪ್ರಾಂತೀಯ ವೈಶಿಷ್ಟ್ಯಗಳನ್ನು, ಭಾಷೆಗಳನ್ನು, ಜಾತಿ, ವರ್ಣ ಮತ್ತು ವರ್ಗಗಳನ್ನು ಮತ್ತು ಏನ್ನನ್ನು ಬರೆಯಬೇಕು, ಏನನ್ನು ಬರೆಯಬಾರದು, ಬರೆದರೆ ಹೇಗೆ ಬರೆಯಬೇಕು ಎಂಬುದನ್ನು ಒಳಗೊಂಡಿರುತ್ತದೆ.

ಹೀಗೆ ಪತ್ರಕರ್ತನಾದವನು ತನ್ನದು ಪತ್ರಿಕಾಧರ್ಮ ಎಂಬುದನ್ನು ಅರಿತುಕೊಂಡು ಆ ಧರ್ಮವನ್ನು ಪಾಲಿಸಲೇಬೇಕು ಎಂಬ ಛಲವನ್ನು ಹೊಂದಿದಾಗ ಮಾತ್ರ ಪತ್ರಿಕಾರಂಗ ತನ್ನ ಘನತೆಯನ್ನು ಉಳಿಸಿಕೊಳ್ಳಲು ಸಾಧ್ಯ.

ಓರ್ವ ಸುದ್ದಿಗಾರ: ವಿಜಯಪುರದಲ್ಲಿ ಕಾಲೇಜು ದಿನಗಳಲ್ಲಿ ನಡೆಯುವ ಚಳವಳಿಗಳ ಕುರಿತು ನಾನು ಸಂಯುಕ್ತ ಕರ್ನಾಟಕಕ್ಕೆ ವರದಿ ಕಳುಹಿಸುತ್ತಿದ್ದೆ. ಆಗಲೇ ನಾನು ಓ.ಸು. (ಓರ್ವ ಸುದ್ದಿಗಾರ) ಆಗಿ ನಮ್ಮ ಹೋರಾಟಗಳಿಗೆ ಸಂಬಂಧಿಸಿದ ಸುದ್ದಿಗಳನ್ನು ಕಳಿಸುವ ಮೂಲಕ ಪತ್ರಿಕಾರಂಗದಲ್ಲಿ ಆಸಕ್ತಿ ತಾಳಿದೆ. ನಾನು ಕಳುಹಿಸುವ ಸುದ್ದಿಗಳನ್ನು ಸಂಯುಕ್ತ ಕರ್ನಾಟಕದವರು ಪ್ರಕಟಿಸುವಾಗ ಸುದ್ದಿಯ ಡೇಟ್ ಲೈನ್‌ನಲ್ಲಿ (ಓ.ಸು.) ಎಂದು ಸೇರಿಸುತ್ತಿದ್ದರು.

ಪತ್ರಕರ್ತನಾಗುವುದೆಂದರೆ ಸಿನೆಮಾಗಳಲ್ಲಿ ಮತ್ತು ಟಿವಿ ಧಾರಾವಾಹಿಗಳಲ್ಲಿ ಪತ್ರಕರ್ತರ ಪಾತ್ರದಲ್ಲಿ ತೋರಿಸುವ ನಾಯಕ, ನಾಯಕಿಯರಾಗುವುದಲ್ಲ. ಪತ್ರಕರ್ತನಾದವನು ಎಂದಿಗೂ ತಾನೊಬ್ಬ ಬೇರೆಯವರಿಗಿಂತ ದೊಡ್ಡ ಮನುಷ್ಯ ಎಂದು ಭಾವಿಸಬಾರದು. ಏಕೆಂದರೆ ಅದೇ ಅವನ ಅವನತಿಗೆ ಕಾರಣವಾಗುತ್ತದೆ. ತಾನು ಬೇರೆಯವರಿಗಿಂತ ಭಿನ್ನ ಎಂಬ ಮನೋರೋಗ ಪತ್ರಕರ್ತರಿಗೆ ಬಹುಬೇಗ ಬಡಿಯುತ್ತದೆ. ತಾನು ಇತರರಿಗಿಂತ ಬೇರೆ ಅಲ್ಲ ಎಂಬ ರೋಗನಿರೋಧಕ ಶಕ್ತಿಯನ್ನು ಪತ್ರಕರ್ತರು ಹೊಂದುವುದು ಅವಶ್ಯವಾಗಿದೆ. ಇದುವೇ ಪತ್ರಕರ್ತನ ಮೊದಲ ಸಾಧನೆ ಎಂದು ಪತ್ರಕರ್ತರು ಭಾವಿಸಬೇಕು.

ಪತ್ರಿಕಾರಂಗದಲ್ಲಿ ಯಾವುದೇ ವೀರೋಚಿತ ಸಾಹಸ ಮಾಡಬೇಕಿಲ್ಲ. ಪತ್ರಕರ್ತನೊಬ್ಬನ ತನಿಖಾ ವರದಿಯೊಂದು ಪ್ರಕಟಗೊಂಡಾಗ ಜನ ಹಾಗೆ ಭಾವಿಸುವುದು ಸ್ವಾಭಾವಿಕವಾದರೂ ‘ಅದೇನು ಸಾಹಸವಲ್ಲ ಅದು ಸತ್ಯದ ಹುಡುಕಾಟ’ ಎಂಬ ಮನೋಭಾವವನ್ನು ಪತ್ರಕರ್ತ ಹೊಂದುವುದು ಆತನ ವೃತ್ತಿಪಾವಿತ್ರ್ಯದ ರಕ್ಷಣೆಗೆ ಅವಶ್ಯವಾಗಿದೆ.

ಉದಾತ್ತ ಮಾನವ: ಪತ್ರಕರ್ತ ಕೆಲವೊಂದು ಸಲ ತನ್ನ ಬದುಕನ್ನೇ ಪಣಕ್ಕಿಟ್ಟು ಸುದ್ದಿಯನ್ನು ಸಂಗ್ರಹಿಸಬೇಕಾಗುವುದು. ಅಂಥ ಪ್ರಸಂಗದಲ್ಲಿ ಪತ್ರಿಕಾ ಮಾಲಕರ ಮತ್ತು ಸಂಪಾದಕರ ಸಹಾಯ ಕೋರುತ್ತ ಕೂಡುವ ಸಮಯ ಅದಾಗಿರುವುದಿಲ್ಲ. ಹಾಗೆ ಸಹಾಯ ಬಯಸಿದರೂ ಸಿಗುವ ಸಾಧ್ಯತೆಗಳಿರುವುದಿಲ್ಲ. ವರದಿಗಾರ ಸುದ್ದಿಯ್ನು ತರುವ ಕೂಲಿಯಂತಾಗಬಾರದು. ರಾಜಕಾರಣಿಗಳು, ಅಧಿಕಾರಿಗಳು ಭಾಷಣಗಳಲ್ಲಿ ಪತ್ರಿಕಾಗೋಷ್ಠಿಯಲ್ಲಿ, ಹೇಳಿದರು, ಕೇಳಿದರು, ನುಡಿದರು, ಕರೆನೀಡಿದರು, ಅಭಿಪ್ರಾಯ ವ್ಯಕ್ತಪಡಿಸಿದರು ಎಂಬುದು ಮಾತ್ರ ವರದಿಗಾರಿಕೆಯಾಗುವುದಿಲ್ಲ. ಪತ್ರಿಕಾ ಪ್ರಕಟನೆಗಳ ಮೇಲೆಯೆ ಅವಲಂಬಿತವಾಗುವುದು ಸಲ್ಲದು. ಜನಸಮುದಾಯದೊಳಗಿನ ವೈವಿಧ್ಯ ಮತ್ತು ವೈರುಧ್ಯಗಳನ್ನು ಮಾನವೀಯ ದೃಷ್ಟಿಯಿಂದ ನೋಡುತ್ತಲೇ ಎಲ್ಲ ಜಾತಿ ಜನಾಂಗಗಳಲ್ಲಿ ಅನ್ಯಾಯಕ್ಕೊಳಗಾಗುವವರ, ಬಡವರ, ಅಸಹಾಯಕ ಹೆಣ್ಣುಮಕ್ಕಳ ಮತ್ತು ಮಕ್ಕಳ ಪಕ್ಷಪಾತಿಗಳಾಗುವುದು ಪತ್ರಿಕಾಧರ್ಮವನ್ನು ಎತ್ತಿಹಿಡಿಯುವ ಕ್ರಮವಾಗಿದೆ. ಆದ್ದರಿಂದ ನಿಜದ ನಿಲುವಿನಲ್ಲಿ ಆಸಕಿಯುಳ್ಳ ಪತ್ರಕರ್ತ ಸರಳ, ಸಹಜ ಮತ್ತು ಉದಾತ್ತ ಮೋಭಾವ ಹೊಂದದೆ ಬೇರೆ ದಾರಿಯಿಲ್ಲ.

ಜಾತಿ ಮತ್ತು ಕೋಮುಘರ್ಷಣೆ, ಧನಪಿಪಾಸು ರಾಜಕಾರಣಿಗಳು, ರಾಜಕೀಯ ಪಕ್ಷಗಳ ವೈರುಧ್ಯ, ಜಮೀನುದಾರರ ಅಟ್ಟಹಾಸ, ಉದ್ದಿಮೆಪತಿಗಳ ಭೂಕಬಳಿಕೆ, ಅವರ ಕಾರ್ಖಾನೆಗಳಿಂದಾಗುವ ಭೂ, ಜಲ ಹಾಗೂ ವಾಯುಮಾಲಿನ್ಯವು ಜನರ ಆರ್ಥಿಕ ಸ್ಥಿತಿಯ ಮೇಲೆ ಮತ್ತು ಅವರ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮ. ಒಂದು ಪ್ರದೇಶದ ಜನ ಅನುಭವಿಸುವ ಸಾಮೂಹಿಕ ಸಮಸ್ಯೆಗಳು ಮುಂತಾದ ಪ್ರಸಂಗಗಳಲ್ಲಿ ಪತ್ರಕರ್ತನಾದವನು ಸಾಮಾಜಿಕ ಹಿತವನ್ನು ದೃಷ್ಟಿಯಲ್ಲಿಟ್ಟುಕೊಂಡೇ ಬರೆಯಬೇಕಾಗುತ್ತದೆ. ಜನಹಿತದ ಸುದ್ದಿಯನ್ನು ಪ್ರಕಟಿಸುವುದು ಜವಾಬ್ದಾರಿಯುತವಾದುದು. ಆದರೆ ಜನರಿಗೆ ಮಾರಕವಾಗುವಂಥ ಸುದ್ದಿಯನ್ನು ಪ್ರಕಟಿಸದೆ ಇರುವುದು ಕೂಡ ಅಷ್ಟೇ ಜವಾಬ್ದಾರಿಯುತವಾಗಿರುತ್ತದೆ.

ಒಂದು ಪ್ರಾಯೋಗಿಕ ವಿಶ್ಲೇಷಣೆ: ಭಟ್ಕಳದಲ್ಲಿ 1993, ಎಪ್ರಿಲ್ 1ರಂದು ಆರಂಭವಾದ ಕೋಮುಗಲಭೆ ಒಂದು ವರ್ಷದ ವರೆಗೆ ಮುಂದುವರಿಯಿತು. ದೇಶದಲ್ಲಿ ಸ್ವಾತಂತ್ರ್ಯಾನಂತರ 35 ಸಾವಿರಕ್ಕೂ ಹೆಚ್ಚು ಕೋಮುಗಲಭೆಗಳಾಗಿವೆ. ಎಲ್ಲ ಕೋಮುಗಲಭೆಗಳಂತೆ ಇದು ಕೂಡ ಕ್ಷುಲ್ಲಕ ಕಾರಣಕ್ಕಾಗಿಯೇ ಆರಂಭವಾಯಿತು. ಅಂದು ಹನುಮಜಯಂತಿ ಪ್ರಯುಕ್ತ ರಥೋತ್ಸವ ನಡೆದ ವೇಳೆ ಮುಸ್ಲಿಮರೊಬ್ಬರ ಮನೆಯ ಹಿಂದಿನಿಂದ ಎಸೆದ ಮೂರು ಕಲ್ಲುಗಳು ರಥದ ಮೇಲೆ ಬಿದ್ದವು ಎಂಬ ನೆಪದೊಂದಿಗೆ ಗಲಭೆ ಆರಂಭವಾಯಿತು. ಅಂದು ರಾತ್ರಿ ಅಮಾಯಕರ ಮೇಲೆ ಹಲ್ಲೆಗಳು ನಡೆದವು. ಪ್ರಾರ್ಥನಾ ಸ್ಥಳಗಳು ಮತ್ತು ಪೂಜಾ ಸ್ಥಳಗಳ ಮೇಲೆಯೂ ದಾಳಿ ಮಾಡಲಾಯಿತು. ಈ ಗಲಭೆಯಿಂದಾಗಿ ಎರಡೂ ಕಡೆಗಳಲ್ಲಿ ಹತ್ತು ಹತ್ತು ಜನ ಬಡವರು ಸತ್ತರು. ಪ್ರಾರ್ಥನಾ ಸಮುದಾಯದವರ ನೂರಾರು ಎಕರೆ ತೆಂಗಿನ ತೋಟಗಳನ್ನು ನೆಲಸಮಗೊಳಿಸಲಾಯಿತು. ಒಂದೇ ಪಟ್ಟಣದ ಜನರ ಮಧ್ಯೆ ತಮ್ಮ ತಮ್ಮ ಜಾತಿ, ಧರ್ಮಗಳ ಹಿನ್ನೆಲೆಯಲ್ಲಿ ಅಪನಂಬಿಕೆ, ಭಯ, ಆತಂಕಗಳು ಮನೆ ಮಾಡಿದವು. ಪರದೆಯ ಹಿಂದಿರುವ ಮಹಿಳೆಯರ ಮೇಲೆ ಅತ್ಯಾಚಾರಗಳಾದವು. ಭಟ್ಕಳದ ಹೂವಿನ ಚೌಕದಲ್ಲಿ ಹಗಲು ಹೊತ್ತಿನಲ್ಲೇ ಖಡ್ಗಗಳನ್ನು ಝಳಪಿಸುತ್ತ ಬಂದ ಗುಂಪೊಂದು ಭಯೋತ್ಪಾದನೆಯ ವಾತಾವರಣ ಸೃಷ್ಟಿಸಿತು. ಪಟ್ಟಣದ ಹೊರವಲಯದಲ್ಲಿನ ಬಡವರ ಮನೆಗಳಿಗೆ ಬೆಂಕಿ ಹಚ್ಚಲಾಯಿತು. ಆ ಬಡವರು ಎಲ್ಲ ಧರ್ಮಗಳಿಗೆ ಸೇರಿದವರಾಗಿದ್ದರು. ಅವರ ಸುಟ್ಟ ಮನೆಗಳ ಗೋಡೆಗಳ ಮೆಲೆ ಲಕ್ಷ್ಮೀ, ಗಣಪತಿ, ಜೀಸಸ್, ಕಾಬಾ, ಅಜ್ಮೀರ್ ದರ್ಗಾ ಮುಂತಾದ ಕಾ್ಯಲೆಂಡರ್‌ಗಳು ನೇತಾಡುತ್ತಿದ್ದವು. ದುಷ್ಕರ್ಮಿಗಳ ಅಮಾನುಷ ಕೃತ್ಯದಿಂದಾಗಿ ಎಲ್ಲ ಧರ್ಮಗಳ ಬಡವರು ಎಲ್ಲವನ್ನೂ ಕೆದುಕೊಂಡು ಅಸಹಾಯಕರಾಗಿದ್ದರು.

ಜಾತಿ ಮತ್ತು ಕೋಮುಘರ್ಷಣೆ, ಧನಪಿಪಾಸು ರಾಜಕಾರಣಿಗಳು, ರಾಜಕೀಯ ಪಕ್ಷಗಳ ವೈರುಧ್ಯ, ಜಮೀನುದಾರರ ಅಟ್ಟಹಾಸ, ಉದ್ದಿಮೆಪತಿಗಳ ಭೂಕಬಳಿಕೆ, ಅವರ ಕಾರ್ಖಾನೆಗಳಿಂದಾಗುವ ಭೂ, ಜಲ ಹಾಗೂ ವಾಯುಮಾಲಿನ್ಯವು ಜನರ ಆರ್ಥಿಕ ಸ್ಥಿತಿಯ ಮೇಲೆ ಮತ್ತು ಅವರ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮ. ಒಂದು ಪ್ರದೇಶದ ಜನ ಅನುಭವಿಸುವ ಸಾಮೂಹಿಕ ಸಮಸ್ಯೆಗಳು ಮುಂತಾದ ಪ್ರಸಂಗಗಳಲ್ಲಿ ಪತ್ರಕರ್ತನಾದವನು ಸಾಮಾಜಿಕ ಹಿತವನ್ನು ದೃಷ್ಟಿಯಲ್ಲಿಟ್ಟುಕೊಂಡೇ ಬರೆಯಬೇಕಾಗುತ್ತದೆ. ಜನಹಿತದ ಸುದ್ದಿಯನ್ನು ಪ್ರಕಟಿಸುವುದು ಜವಾಬ್ದಾರಿಯುತವಾದುದು. ಆದರೆ ಜನರಿಗೆ ಮಾರಕವಾಗುವಂಥ ಸುದ್ದಿಯನ್ನು ಪ್ರಕಟಿಸದೆ ಇರುವುದು ಕೂಡ ಅಷ್ಟೇ ಜವಾಬ್ದಾರಿಯುತವಾಗಿರುತ್ತದೆ.

ಅಮಾಯಕರು: ಕೋಮುಗಲಭೆಗೆ ಕಾರಣರಾದ ಎರಡೂ ಕಡೆಯ ದುಷ್ಕರ್ಮಿಗಳ ಚಾಕು ಚೂರಿಗಳಿಗೆ ಅಮಾಯಕರು ಸಿಕ್ಕಿ ಗಾಯಾಳುಗಳಾದಾಗ ಅವರ ಸಂಬಂಧಿಕರು ಮಣಿಪಾಲ ಮತ್ತು ಮಂಗಳೂರು ಆಸ್ಪತ್ರೆಗಳಿಗೆ ಒಯ್ಯುತ್ತಿದ್ದರು. ‘ಗಾಯಾಳು ಮಣಿಪಾಲ್’ಗೆ ಎಂದು ಪತ್ರಿಕೆಯಲ್ಲಿ ಬಂದಾಗ ಪ್ರಜ್ಞಾವಂತರು ಆ ಗಾಯಾಳು ಹಿಂದೂ ಎಂದು ಅರ್ಥ ಮಾಡಿಕೊಳ್ಳುತ್ತಿದ್ದರು. ‘ಗಾಯಾಳು ಮಂಗಳೂರಿಗೆ’ ಎಂದು ಬರೆದಾಗ ಆ ಗಾಯಾಳು ಮುಸ್ಲಿಮ್ ಎಂದು ಅರ್ಥವಾಗುತ್ತಿತ್ತು. ಹಿಂದೂಗಳು ಮಣಿಪಾಲ್ ಆಸ್ಪತ್ರೆಗೆ ಹೋದ ಹಾಗೆ ಮುಸ್ಲಿಮರು ಮಂಗಳೂರಿನ ತಮ್ಮ ಧರ್ಮದವರು ಆರಂಭಿಸಿದ ದೊಡ್ಡ ಆಸ್ಪತ್ರೆಗೆ ಹೋಗುತ್ತಿದ್ದರು! ಹೀಗೆ ಕೋಮುಗಲಭೆಗಳು ಮನುಷ್ಯರನ್ನು ಎಲ್ಲ ಕ್ಷೇತ್ರಗಳಲ್ಲೂ ವಿಂಗಡಿಸಿ ಬಿಡುತ್ತವೆೆ. ಪೊಲೀಸ್ ಇಲಾಖೆಯಲ್ಲಿ ಈ ಸಮಸ್ಯೆಯೂ ತಲೆದೋರುತ್ತದೆ. ಭಟ್ಕಳದಲ್ಲಿ ಮೂಲಭೂತವಾದಿಯೊಬ್ಬ ಮಣ್ಣಿನ ಗಣಪತಿಯನ್ನು ಒಡೆದು ಹಾಕಿದಾಗ ಹಿಂದೂ ಪೊಲೀಸ್ ಪೇದೆಯೊಬ್ಬ ಉದ್ವೇಗಕ್ಕೊಳಗಾಗಿ ವರ್ತಿಸಿದ್ದು ಜನಸಾಮಾ್ಯರಲ್ಲಿ ಗಾಬರಿ ಹುಟ್ಟಿಸುವಂತಾಗಿತ್ತು.

ಇದೆಲ್ಲ ಮೇಲ್ನೋಟದ ವಿಚಾರ. ಆದರೆ ಪತ್ರಿಕಾಧರ್ಮವನ್ನು ಸ್ವೀಕರಿಸಿದ ಪತ್ರಕರ್ತ ಸಮಸ್ಯೆಯ ಆಳಕ್ಕೆ ಇಳಿದಾಗ, ಆ ರಥ ಹಿಂದೊಂದು ದಿನ ಮುಸ್ಲಿಮ್ ಪಟೇಲರೊಬ್ಬರ ಸಹಾಯದಿಂದ ದುರಸ್ತಿಗೆ ಒಳಗಾಯಿತು ಎಂಬುದು ತಿಳಿದು ಬಂದಿತು. ಪ್ರತಿವರ್ಷವೂ ರಥೋತ್ಸವದ ದಿನ ಪಂಚವಾದ್ಯಗಳೊಂದಿಗೆ ಆ ಪಟೇಲರ ಮನೆಗೆ ಹೋಗಿ ರಥೋತ್ಸವಕ್ಕೆ ಆಮಂತ್ರಣ ನೀಡುವ ವಿಚಾರವೂ ಬೆಳಕಿಗೆ ಬಂದಿತು. ರಥದ ಕಡೆಗೆ ಬಿದ್ದ ಕಲ್ಲುಗಳು ಕೋಮುವಾದಿಗಳ ದುಷ್ಕೃತ್ಯವಾಗಿತ್ತು. ಕೋಮುವಾದಿ ಮತ್ತು ಮೂಲಭೂತವಾದಿಗಳ ಈರ್ಷೆ ಹಿಂದೂ-ಮುಸ್ಲಿಮ್ ಗಲಭೆಗಳಾಗಿ ಪರಿವರ್ತನೆ ಹೊಂದುವುದು ಈ ದೇಶದ ದುರಂತವಾಗಿದೆ.

ಸಾಮಾಜಿಕ ಸಂಬಂಧಗಳಲ್ಲಿ ವ್ಯತ್ಯಾಸ: ಗಲಭೆ ನಡೆದಾಗ ಹಿಂದೂಗಳು ತಮ್ಮ ಮೊಹಲ್ಲಾಗಳಲ್ಲಿನ ಮುಸ್ಲಿಮರ ರಕ್ಷಣೆ ಮಾಡಿದರು. ಮುಸ್ಲಿಮರು ತಮ್ಮ ಮೊಹಲ್ಲಾಗಳಲ್ಲಿನ ಹಿಂದೂಗಳನ್ನು ರಕ್ಷಿಸಿದರು. ಭಟ್ಕಳದ ಇತಿಹಾಸದ ಪುಟಗಳನ್ನು ತಿರುವಿದಾಗ ಅಲ್ಲಿ ಹೀಗೆ ಕೋಮುಗಲಭೆಗಳಾದ ದಾಖಲೆಗಳೇ ಇರಲಿಲ್ಲ. ಈ ಗಲಭೆಗೆ ಕಾರಣಗಳಲ್ಲಿ ಮುಖ್ಯವಾದುದೆಂದರೆ ಹಿಂದೂ ಮತ್ತು ಮುಸ್ಲಿಮ್ ವ್ಯಾಪಾರಿ ಸಮುದಾಯಗಳಲ್ಲಿನ ಪೈಪೋಟಿ. ಹಿಂದೂ ಮತ್ತು ಮುಸ್ಲಿಮ್ ವಿದ್ಯಾರ್ಥಿಗಳಲ್ಲಿನ ಸ್ನೇಹ, ಪ್ರೇಮ ಮುಂತಾದ ಸಂಬಂಧಗಳು.

ಹಿಂದಿನ ಕಾಲದ ನವಾಯತ ಮುಸ್ಲಿಮರು ತಮ್ಮ ತೆಂಗಿನ ತೋಟಗಳಲ್ಲಿ ದುಡಿಯುವ ಹಿಂದುಳಿದ ನಾಮಧಾರಿ ಸಮಾಜದವರ ಜೊತೆಗೆ ಹೊಂದಿದ ಸಾಮಾಜಿಕ ಸಂಬಂಧ, ಅವರ ಮಕ್ಕಳು ಬೆಳೆದು ವಿದ್ಯಾವಂತರಾದ ವೇಳೆಗೆ ಕುಸಿಯತೊಡಗಿತು. ಏಕೆಂದರೆ ಕಲಿತ ನವಾಯತ ಮುಸ್ಲಿಮ್ ಯುವಕರು ಕಲಿತ ಮೇಲ್ಜಾತಿ ಯುವಕ, ಯುವತಿಯರ ಜೊತೆಗೆ ಗೆಳೆತನ ಬೆಳೆಸತೊಡಗಿದರು. ಈ ಎಲ್ಲ ಕಾರಣಗಳಿಂದ ಸಾಮಾಜಿಕ ಸಂಬಂಧಗಳಲ್ಲಾದ ಬದಲಾವಣೆಗಳು ಕೂಡ ಗಲಭೆಯ ಹಿಂದೆ ಸುಪ್ತವಾಗಿದ್ದವು. ಇಂಥ ಪ್ರಸಂಗಗಳಲ್ಲಿ ಮನುಷ್ಯತ್ವವನ್ನು ಎತ್ತಿ ಹಿಡಿಯುವುದು ಮಾತ್ರ ಪತ್ರಕರ್ತನ ಕೆಲಸವಾಗಿರುತ್ತದೆ. ತಾನು ಎಲ್ಲ ಧರ್ಮದವನು, ಎಲ್ಲ ಜನಾಂಗದವನು ಮತ್ತು ಎಲ್ಲರೂ ತನ್ನವರು ಎಂಬ ಭಾವಪೂರ್ಣತೆಯಿಂದ ಮಾತ್ರ ಆತ ತನ್ನ ಪತ್ರಿಕಾಧರ್ಮವನ್ನು ಪಾಲಿಸಲು ಸಾಧ್ಯ.

ಕೆಲವೊಂದು ಸಲ ಬಹಳ ಮಹತ್ವದ ಸುದ್ದಿಯೊಂದು ಗಮನಕ್ಕೆ ಬಂದರೂ ಬರೆಯಲಾಗದಂಥ ನೈತಿಕ ಪ್ರಜ್ಞೆ ಕಾಡತೊಡಗುತ್ತದೆ. ಭಟ್ಕಳ ಗಲಭೆ ವೇಳೆ ಒಂದು ರಾತ್ರಿ ಹೀಗಾಯಿತು. ಭಟ್ಕಳದ ಕೆಲ ಪೊಲೀಸರು ದುಷ್ಕರ್ಮಿಗಳ ಜೊತೆ ಸೇರಿಕೊಂಡು ಶ್ರೀಮಂತ ನವಾಯತರ ಮನೆಯೊಂದನ್ನು ಲೂಟಿ ಮಾಡಿದರು. ತಮ್ಮ ಹ್ಯಾಟುಗಳಲ್ಲಿ ಬಂಗಾರದ ಸರಗಳನ್ನು ತುಂಬಿಕೊಂಡು ಹೊರಬಂದರು. ಪೊಲೀಸ್ ವರಿಷ್ಠಾಧಿಕಾರಿಗೆ ಗೊತ್ತಾಗಿ ಆ ಪೊಲೀಸರನ್ನು ವಿಚಾರಣೆಗೆ ಒಳಪಡಿಸಿದರು ಮತ್ತು ಆ ಕುರಿತು ನನಗೆ ತಿಳಿಸಿದರು. ಆದರೆ ಅದನ್ನು ನಾನು ಪ್ರಕಟಿಸಲಿಲ್ಲ. ಬೇರೆ ಪತ್ರಕರ್ತರಿಗೆ ಹೇಳಬೇಡಿರೆೆಂದು ತಿಳಿಸಿ ಕಾರಣ ವಿವರಿಸಿದೆ. ಅವರು ಒಪ್ಪಿದರು. ಗಲಭೆಗಳ ಸಂದರ್ಭದಲ್ಲಿ ಅನ್ಯಾಯಕ್ಕೊಳಗಾದವರು ಖಾಕಿ ಸಮವಸ್ತ್ರದ ಮೇಲೆ ನಂಬಿಕೆ ಇಟ್ಟಿರುತ್ತಾರೆ. ಆ ನಂಬಿಕೆಯೂ ಹೋದಮೇಲೆ ಒಳ್ಳೆಯವರು ಹತಾಶರಾಗುತ್ತಾರೆ. ದುಡುಕಿನ ಸ್ವಭಾವವುಳ್ಳವರು ಕೊಲೆಗಡುಕರೂ ಆಗಬಹುದು. ಇದನ್ನೆಲ್ಲ ಅರಿತುಕೊಂಡು ಯಾವ ಸುದ್ದಿಯನ್ನು ಹೇಗೆ ಪ್ರಕಟಿಸಬೇಕು ಮತ್ತು ಯಾವ ಸುದ್ದಿಯನ್ನು ಪ್ರಕಟಿಸಬಾರದು ಎಂಬ ವಿವೇಚನೆ ಪತ್ರಕರ್ತರಿಗೆ ಇರಬೇಕಾಗುತ್ತದೆ. ಪತ್ರಕರ್ತನಿಗೆ ಸಾಮಾಜಿಕ ನ್ಯಾಯದ ಮುಂದೆ ಯಾವುದೂ ದೊಡ್ಡದಾಗಿ ಕಾಣಬಾರದು.

ಚಳವಳಿಗಳ ಅನುಭವ: ಪತ್ರಕರ್ತನಾಗಿ ಮೂರು ದಶಕಗಳಿಗಿಂತಲೂ ಹೆಚ್ಚಿನ ಸೇವೆಯಲ್ಲಿ ಇಂಥ ಅನೇಕ ಅನುಭವಗಳಾಗಿವೆ. ಪತ್ರಿಕಾರಂಗದಲ್ಲಿನ ಉದ್ವೇಗ, ಕೊರಗು, ತನಿಖಾ ಸುದ್ದಿಗಾಗಿ ಪಟ್ಟುಬಿಡದ ಛಲ, ಊಟ ನಿದ್ರೆ ಎನ್ನದೆ ಸುದ್ದಿಗಾಗಿ ಹರಸಾಹಸ ಇವೆಲ್ಲವುಗಳ ಜೊತೆಗಿನ ಆತ್ಮತೃಪ್ತಿ ಹೀಗೆ ಎಲ್ಲವೂ ಪತ್ರಿಕಾರಂಗದ ಬಗ್ಗೆ ಅಭಿಮಾನ ಮೂಡಿಸುತ್ತವೆ. ನಾನು ಪತ್ರಿಕಾರಂಗಕ್ಕೆ ಬರಲಿಕ್ಕೆ ಮುಖ್ಯ ಕಾರಣ ಮಾನವ ಘನತೆ ಮತ್ತು ಸಮಾನತೆಗಾಗಿ ನಡೆಯುವ ಚಳವಳಿಗಳ ಅನುಭವ.

ಪತ್ರಿಕಾರಂಗಕ್ಕೆ ಸೇರುವ ಸಂದರ್ಭದಲ್ಲಿ ಇಲೆಕ್ಟ್ರಾನಿಕ್ ಮೀಡಿಯಾ ಹಾವಳಿ ಇರಲಿಲ್ಲ. ಆಗಿನ ಪತ್ರಿಕಾಭಾಷೆ ಸೌಜನ್ಯದ ಎಲ್ಲೆ ಮೀರುತ್ತಿರಲಿಲ್ಲ. ಕೋಮುಪ್ರಚೋದನೆಗೆ ಅವಕಾಶವಾಗದಂತೆ ಭಾಷೆಯ ಬಳಕೆಯಾಗುತ್ತಿತ್ತು. ನಂತರ ಟ್ಯಾಬ್ಲೊಯ್ಡೊ ಪತ್ರಿಕೆಗಳು ಸೌಜನ್ಯವನ್ನು ಮೀರತೊಡಗಿದವು. ಇಲೆಕ್ಟ್ರಾನಿಕ್ ಮೀಡಿಯಾ ಮುಖ್ಯವಾಗಿ ದೃಶ್ಯಮಾಧ್ಯಮವಾಗಿರುವುದರಿಂದ ಕೋಮು ಉದ್ವಿಗ್ನತೆಗೆ ಎಡೆಮಾಡಿಕೊಟ್ಟಿತು. ಅಂಥ ದೃಶ್ಯಗಳನ್ನು ತೋರಿಸದೆ ಇರಬಹುದಾಗಿತ್ತು. ಆದರೆ ಅನೇಕ ಟಿವಿಗಳು ಪದೇ ಪದೇ ತೋರಿಸುವ ಮೂಲಕ ಸಾಮಾಜಿಕ ಸ್ವಾಸ್ಥವನ್ನು ಹದಗೆಡಿಸುತ್ತಿವೆ. ಲಾಂಗು, ಮಚ್ಚು, ಮಟಾಷ್, ಮಾಂಸದ ಅಡ್ಡಾ, ಢಗಾರ್, ಗಾಂಜಾಹುಲಿ, ಡ್ರಗ್ಸ್ ರಾಣಿ ಮುಂತಾದ ಶಬ್ದಗಳು ಟ್ಯಾಬ್ಲೊಯ್ಡೊ ಪತ್ರಿಕಾ ಭಾಷೆಯ ಭಾಗಗಳಾದವು! ಇನ್ನು ಟಿವಿಗಳಂತೂ ಹೇಳಲಸಾಧ್ಯವಾದಷ್ಟು ಸಾಮಾಜಿಕ ಸ್ವಾಸ್ಥ್ಯವನ್ನು ಕೆಡಿಸಿದವು. ಇವೆಲ್ಲ ಬರುವ ಮೊದಲು ಕೋಮುಗಲಭೆಗಳಲ್ಲಿ ‘ಮಸೀದಿಗೆ ಬೆಂಕಿ ಹಚ್ಚಿದರು’ ಎಂದು ಬರೆಯದೆ ‘‘ಪ್ರಾರ್ಥನಾ ಸ್ಥಳಕ್ಕೆ ಬೆಂಕಿ ಹಚ್ಚಿದರು’’ ಎಂದೂ ‘ಮಂದಿರಕ್ಕೆ ಬೆಂಕಿ ಹಚ್ಚಿದರು’ ಎಂದು ಬರೆಯದೆ ‘‘ಪೂಜಾ ಸ್ಥಳಕ್ಕೆ ಬೆಂಕಿ ಹಚ್ಚಿದರು’’ ಎಂದೂ ಬರೆಯುತ್ತಿದ್ದೆವು. ಕೋಮುಗಲಭೆಗಳಲ್ಲಿ ಹತ್ತು ಜನ ಹಿಂದೂಗಳು ಮತ್ತು ಹತ್ತು ಜನ ಮುಸ್ಲಿಮರು ಸತ್ತರು ಎಂದು ಬರೆಯದೆ ‘‘20 ಜನ ಅಮಾಯಕರು ಸತ್ತರು’’ ಎಂದು ಬರೆಯುತ್ತಿದ್ದೆವು. ಈಗ ಅದೆಲ್ಲ ಇಲ್ಲ. ಎಲ್ಲವೂ ನೇರ. ಹೀಗಾಗಿ ಜನ ಕೂಡಲೇ ಪ್ರಚೋದನೆಗೆ ಒಳಗಾಗುವಂಥ ವಾತಾವರಣ ಸೃಷ್ಟಿಯಾಗುತ್ತಿದೆ. ಹಿಂದಿನ ಪತ್ರಿಕಾ ಭಾಷೆಯಲ್ಲಿ ಜನರು ಯೋಚನೆ ಮಾಡಲಿಕ್ಕೆ ಹಚ್ಚುವಂಥ ಶಕ್ತಿಯಿತ್ತು. ಆದರೆ ಆ ದಿನಗಳೀಗ ಹೋದವು. ಮಾಧ್ಯಮದಲ್ಲಿ ಕೋಮುರಾಜಕೀಯ ಶಕ್ತಿಗಳು ಹಿಡಿತ ಸಾಧಿಸತೊಡಗಿದವು. ಇಂಥ ಅಹಿತಕರ ಸಂದರ್ಭದಲ್ಲಿ ಪತ್ರಿಕಾ ಮೌಲ್ಯಗಳ ಕುರಿತು ಸ್ವಾನುಭವದೊಂದಿೆ ಧ್ವನಿ ಎತ್ತುವುದು ಅವಶ್ಯವಾಗಿದೆ.

ಮೊದಲ ದಿನ:  ನಾನು ಪ್ರಜಾವಾಣಿ ಸೇರಿದ ಮೊದಲ ದಿನವೇ ಸಖೇದಾಶ್ಚರ್ಯವೊಂದು ಕಾದಿತ್ತು. ಸಾಯಂಕಾಲ 4 ಗಂಟೆ ಹೊತ್ತಿಗೆ ಬೆಂಗಳೂರಿನ ವಿಲ್ಸನ್ ಗಾರ್ಡನ್ ಕಡೆಯಿಂದ ಒಬ್ಬ ವ್ಯಕ್ತಿ ಬಂದ. ತನ್ನ ಮೂಕ ಮತ್ತು ಕಿವುಡ ಮಗ ಆಟವಾಡುವ ವೇಳೆ ಯಾರೋ ಅಪಹರಿಸಿದ್ದಾರೆ ಎಂದು ತಿಳಿಸಿ ಹುಡುಗನ ಫೋಟೊ, ಹೆಸರು, ವಿಳಾಸ ಮುಂತಾದ ವಿವರಗಳ ಚೀಟಿ ತೋರಿಸಿದ. ನಾನು ಅವರನ್ನು ಸುದ್ದಿ ಸಂಪಾದಕರ ಬಳಿ ಕರೆದುಕೊಂಡು ಹೋದೆ. ಅವರು ನಾಲ್ಕನೇ ಮಹಡಿಗೆ ಕರೆದುಕೊಂಡು ಹೋಗಲು ಯಾಂತ್ರಿಕವಾಗಿ ತಿಳಿಸಿದರು. ಅಲ್ಲಿಗೆ ಆ ಬಡ ವ್ಯಕ್ತಿಯನ್ನು ಕರೆದುಕೊಂಡು ಹೋದೆ. ಅದು ಜಾಹೀರಾತು ವಿಭಾಗ. ಈ ಜಾಹೀರಾತಿಗೆ ಇಂತಿಷ್ಟು ಹಣ ಕಟ್ಟಬೇಕಾಗುವುದು ಎಂದು ವಿವರಿಸಿದರು. ನಾನು ಮತ್ತೆ ಸುದ್ದಿ ಸಂಪಾದಕರ ಬಳಿ ಬಂದೆ. ಅಪರಾಧ ಸುದ್ದಿಯಲ್ಲಿ ಸರಗಳ್ಳನ ಫೋಟೊ ಹಾಕುತ್ತೇವೆ, ಆದರೆ ಅಪಹರಣಕ್ಕೊಳಗಾದ ಬಾಲಕನ ಫೋಟೊ ಜಾಹೀರಾತು ಆಗುವುದೇ? ಎಂದು ಕೇಳಿದೆ. ಅವರು ನಿರುತ್ತರರಾಗಿ ಸುಮ್ಮನಾದರು. ಆ ವ್ಯಕ್ತಿ ದುಃಖದಿಂದ ಹೊರಟುಹೋದರು. ನಾನು ಪತ್ರಕರ್ತನಾಗುವ ಬಯಕೆಯಿಂದ ಇದಕ್ಕಿಂತ ಹೆಚ್ಚಿನ ಸಂಬಳದ ನೌಕರಿ ಬಿಟ್ಟು ಬಂದಿದ್ದೆ. ಆದರೆ ಮೊದಲ ದಿನವೇ ಈ ನೋವನ್ನು ಅನುಭವಿಸಿದೆ!

ಬಾಲಭವನ: ರಘುರಾಮಶೆಟ್ಟರು ಪ್ರಜಾವಾಣಿಯ ಮುಖ್ಯ ವರದಿಗಾರರಾಗಿದ್ದರು. ಮಾನವ ಘನತೆಯನ್ನು ಎತ್ತಿಹಿಡಿಯುವಂಥ ಪತ್ರಕರ್ತರವರು. ಹೊಸದಾಗಿ ಸೇರಿದ ಕೆಲ ದಿನಗಳ ನಂತರ ನಾನೊಂದು ಲೇಖನ ಬರೆಯುವುದಾಗಿ ತಿಳಿಸಿದೆ. ಅವರು ಒಪ್ಪಿದರು. ಕಬ್ಬನ್ ಪಾರ್ಕ್‌ನಲ್ಲಿರುವ ಜವಾಹರ ಬಾಲಭವನದ ಬಗ್ಗೆ ಬರೆಯುವ ಯೋಚನೆ ಮಾಡಿದ್ದೆ. ಅಲ್ಲಿಯ ನೌಕರರು ದಿನಗೂಲಿ ಲೆಕ್ಕದಲ್ಲಿದ್ದರು. ಕೆಲವರು ಪೌಷ್ಟಿಕಾಂಶಗಳ ಕೊರತೆಯಿಂದ ಬಳಲುತ್ತಿದ್ದರು. ಅವರೆಲ್ಲರ ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗಿತ್ತು. ಅಲ್ಲಿನ ಮಕ್ಕಳ ರೈಲಿನ ಚಾಲಕನಿಗೆ ‘ನೀವು ಬೇರೆ ಕಡೆ ಹೋಗಿ ವಾಹನ ಚಾಲಕರಾದರೆ ಸಮಸ್ಯೆ ಬಗೆ ಹರಿಯುವುದಲ್ಲ’ ಎಂದಿದ್ದೆ. ಅದಕ್ಕೆ ಅವರು ಕೊಟ್ಟ ಉತ್ತರ ಅಗಾಧವಾಗಿತ್ತು. ಸರ್ ಹಾಗೆ ಅನಿಸುತ್ತದೆ. ಆದರೆ ಈ ಮಕ್ಕಳನ್ನು ಬಿಟ್ಟು ಇರಲಿಕ್ಕಾಗದು. ಅವರ ಸಂತೋಷದಲ್ಲಿ ಎಲ್ಲವನ್ನೂ ಮರೆಯುವೆ ಎಂದು ಅವರು ತಿಳಿಸಿದರು. ನಾನು ಒಂದು ಕ್ಷಣ ಸ್ತಂಭೀಭೂತನಾದೆ. ನಾನು ಪತ್ರಕರ್ತನಾಗಿದ್ದು ಸಾರ್ಥಕ ಎನಿಸಿತು. ಅಲ್ಲಿನ ಪ್ರತಿಯೊಬ್ಬ ನೌಕರರು ಹೆಚ್ಚುಕಡಿಮೆ ಇದೇ ರೀತಿಯ ಉತ್ತರ ನೀಡಿದರು. ಮಕ್ಕಳು ಯಾರೋ, ಇವರ�

Writer - ರಂಜಾನ್ ದರ್ಗಾ

contributor

Editor - ರಂಜಾನ್ ದರ್ಗಾ

contributor

Similar News