ಭಾರತಕ್ಕೆ ಆಕ್ಸಿಜನ್‌ ಮತ್ತು ಪರಿಹಾರ ಸಾಮಗ್ರಿಗಳನ್ನು ಕಳುಹಿಸಲು ನಿರ್ಧರಿಸಿದ ಕುವೈತ್‌

Update: 2021-04-27 07:41 GMT
ಭಾರತಕ್ಕೆ ಆಕ್ಸಿಜನ್‌ ಮತ್ತು ಪರಿಹಾರ ಸಾಮಗ್ರಿಗಳನ್ನು ಕಳುಹಿಸಲು ನಿರ್ಧರಿಸಿದ ಕುವೈತ್‌
ಸಾಂದರ್ಭಿಕ ಚಿತ್ರ
  • whatsapp icon

ಕುವೈತ್:‌ ಸೋಮವಾರದಂದು ನಡೆದ ಕುವೈತ್‌ ಕ್ಯಾಬಿನೆಟ್‌ ಸಭೆಯಲ್ಲಿ ಕೋವಿಡ್‌ ನಿಂದ ಸಂಕಷ್ಟಕ್ಕೊಳಗಾಗಿರುವ ಭಾರತಕ್ಕೆ ಅಗತ್ಯ ಆಕ್ಸಿಜನ್‌ ಪೂರೈಕೆ ಹಾಗೂ ಪರಿಹಾರ ಸಾಮಗ್ರಿಗಳನ್ನು ಕಳುಹಿಸಲು ಕುವೈತ್‌ ನಿರ್ಧರಿಸಿದೆ ಎಂದು ತಿಳಿದು ಬಂದಿದೆ. 

ಭಾರತ ಮತ್ತು ಕುವೈತ್‌ ನಡುವಿನ ಸ್ನೇಹ ಸಂಬಂಧವನ್ನು ಗಮನದಲ್ಲಿಟ್ಟುಕೊಂಡು ಮತ್ತು ದೇಶದ ಸಂಕಷ್ಟದ ಸಂದರ್ಭದಲ್ಲಿ ನಾವು ಜೊತೆಗಿದ್ದೇವೆ ಎನ್ನುವ ಒಗ್ಗಟ್ಟನ್ನು ಸಾರುವ ಸಲುವಾಗಿ ಕುವೈತ್‌ ಈ ನಿರ್ಧಾರ ಕೈಗೊಂಡಿದೆ. ಕೊರೋನ ವೈರಸ್‌ ನ ಎರಡನೇ ಅಲೆಯ ಸಂದರ್ಭದಲ್ಲಿ ಅನಿಯಂತ್ರಿತ ಸೋಂಕು ಹರಡುವಿಕೆಯಿಂದಾಗಿ ಭಾರತದಲ್ಲಿ ಹದಗೆಡುತ್ತಿರುವ ಆರೋಗ್ಯ ಪರಿಸ್ಥಿತಿಯ ಕುರಿತು ಕ್ಯಾಬಿನೆಟ್‌ ತನ್ನ ಆಳವಾದ ಕಳವಳ ಮತ್ತು ವಿಷಾದ ವ್ಯಕ್ತಪಡಿಸಿದೆ.

ಇದರೊಂದಿಗೆ ಅರಬ್ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ರಾಜಕೀಯ ರಂಗದ ಇತ್ತೀಚಿನ ಬೆಳವಣಿಗೆಗಳಿಗೆ ಸಂಬಂಧಿಸಿದ ವರದಿಯ ಕುರಿತು ಸಚಿವರು ರಾಜಕೀಯ ವ್ಯವಹಾರಗಳ ಬಗ್ಗೆ ಚರ್ಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News