ಕೆಲಸದ ವೀಸಾ ನಿಯಮಗಳನ್ನು ಬಿಗಿಗೊಳಿಸಿದ ಸೌದಿ ಅರೇಬಿಯಾ: ಜನವರಿ 14ರಿಂದಲೇ ಕಾರ್ಯರೂಪಕ್ಕೆ ಬರಲಿರುವ ಪರಿಷ್ಕೃತ ನಿಯಮ; ವರದಿ

Update: 2025-01-13 10:00 GMT

ಸಾಂದರ್ಭಿಕ ಚಿತ್ರ (credit: freepik.com/ TravelScape)

ಹೊಸದಿಲ್ಲಿ: ಸೌದಿ ಅರೇಬಿಯಾಕ್ಕೆ ಕೆಲಸದ ವೀಸಾಕ್ಕೆ ಅರ್ಜಿ ಸಲ್ಲಿಸಲು ಯೋಜಿಸುತ್ತಿರುವ ಭಾರತೀಯರು ವೃತ್ತಿಪರ ಮತ್ತು ಶೈಕ್ಷಣಿಕ ಅರ್ಹತೆಗಳ ಪೂರ್ವ ಪರಿಶೀಲನೆಗೆ ಒಳಪಡಬೇಕಾಗುತ್ತದೆ. ಜನವರಿ 14ರಿಂದ ಎಲ್ಲಾ ಕೆಲಸದ ವೀಸಾಗಳಿಗೆ ಅರ್ಜಿ ಸಲ್ಲಿಸುವ ಉದ್ಯೋಗಾಕಾಕ್ಷಿಗಳ ವೃತ್ತಿಪರ ಮತ್ತು ಶೈಕ್ಷಣಿಕ ಅರ್ಹತೆಗಳನ್ನು ಪೂರ್ವ ಪರಿಶೀಲನೆಗೆ ಒಳಪಡಿಸಬೇಕೆಂದು ಸೌದಿ ಅರೇಬಿಯಾ ಸುತ್ತೋಲೆಯನ್ನು ಹೊರಡಿಸಿದೆ ಎಂದು The New Indian Express ವರದಿ ಮಾಡಿದೆ.

ಸೌದಿ ಅರೇಬಿಯಾದಲ್ಲಿ ಪ್ರಸ್ತುತ 24 ಲಕ್ಷಕಿಂತ ಹೆಚ್ಚು ಭಾರತೀಯ ಕಾರ್ಮಿಕರು ವಾಸಿಸುತ್ತಿದ್ದಾರೆ. ಬಾಂಗ್ಲಾದೇಶಿಯನ್ನರ ಬಳಿಕ ಭಾರತೀಯರು ಸೌದಿ ಅರೇಬಿಯಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮಹಿಳೆಯರು ಸೇರಿದಂತೆ ಭಾರತೀಯ ಕಾರ್ಮಿಕರು ಸೌದಿ ಅರೇಬಿಯಾದ ಉದ್ಯೋಗ ಮಾರುಕಟ್ಟೆಯ ನಿರ್ಣಾಯಕ ಭಾಗವಾಗಿದ್ದಾರೆ ಮತ್ತು ಭಾರತಕ್ಕೆ ಹಣದ ಒಳ ಹರಿವಿಗೆ ಕಾರಣರಾಗಿದ್ದಾರೆ.

ಆರು ತಿಂಗಳ ಹಿಂದೆ ಈ ನಿಯಮಾವಳಿಗಳನ್ನು ಪ್ರಸ್ತಾಪಿಸಲಾಗಿತ್ತು. ಸೌದಿ ಅರೇಬಿಯಾದ ವಿಷನ್ 2030 ಮತ್ತು ತನ್ನ ಪ್ರಜೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಿಗಳಾಗಿ ನೇಮಿಸಿಕೊಳ್ಳುವ ಪ್ರಯತ್ನಗಳ ಭಾಗವಾಗಿ, ಸೌದಿ ಅರೇಬಿಯಾ ಈ ಬದಲಾವಣೆಗಳಿಗೆ ಮುಂದಾಗಿದೆ ಎಂದು ವರದಿಯಾಗಿದೆ.

ವಲಸಿಗ ಉದ್ಯೋಗಿಗಳು ಒದಗಿಸಿದ ಪ್ರಮಾಣಪತ್ರಗಳು ಮತ್ತು ಮಾಹಿತಿಯನ್ನು ಪರಿಶೀಲಿಸಲು ಸಂಸ್ಥೆಗಳ ಮಾಲಕರು ಮತ್ತು HRಗಳಿಗೆ ಸೂಚಿಸಲಾಗಿದೆ. ಈ ಕ್ರಮವು ನೇಮಕಾತಿಯನ್ನು ಸುಗಮಗೊಳಿಸುತ್ತದೆ ಮತ್ತು ರಾಜ್ಯದಲ್ಲಿ ಕಾರ್ಮಿಕರ ಗುಣಮಟ್ಟವನ್ನು ಹೆಚ್ಚಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

ಇದಲ್ಲದೆ ವಲಸಿಗರ ನಿರ್ಗಮನ ಮತ್ತು ಮರು ಪ್ರವೇಶ ವೀಸಾಗಳ ವಿಸ್ತರಣೆಯಲ್ಲದೆ, ವಲಸಿಗರಿಗೆ ತಮ್ಮ ಇಕಾಮವನ್ನು ನವೀಕರಿಸುವ ನಿಯಮಗಳನ್ನು ನವೀಕರಿಸಿದೆ. ಸೌದಿ ಅರೇಬಿಯಾದ ಪಾಸ್ ಪೋರ್ಟ್ ಜನರಲ್ ಡೈರೆಕ್ಟರೇಟ್ ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ವಲಸಿಗರು ಮತ್ತು ರಾಜ್ಯದ ಹೊರಗೆ ಇರುವ ಕಾರ್ಮಿಕರು ಈಗ ತಮ್ಮ ಇಕಾಮವನ್ನು ನವೀಕರಿಸಬಹುದು ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News