ಬ್ಯಾರೀಸ್ ವೆಲ್ಫೇರ್ ಫೋರಂ ಅಬುಧಾಬಿ ವತಿಯಿಂದ ಇಫ್ತಾರ್ ಕೂಟ

Update: 2025-03-10 09:30 IST
ಬ್ಯಾರೀಸ್ ವೆಲ್ಫೇರ್ ಫೋರಂ ಅಬುಧಾಬಿ ವತಿಯಿಂದ ಇಫ್ತಾರ್ ಕೂಟ
  • whatsapp icon

ಅಬುಧಾಬಿ: ಬ್ಯಾರೀಸ್ ವೆಲ್ಫೇರ್ ಫೋರಂ ಅಬುಧಾಬಿ ಇದರ ವತಿಯಂದ ಇಫ್ತಾರ್ ಕೂಟವು ಮಾ. 7 ರಂದು ಇಂಡಿಯಾ ಸೋಶಿಯಲ್ ಸೆಂಟರ್ ಇದರ ಸಭಾಂಗಣದಲ್ಲಿ ನಡೆಯಿತು.

ನೂಹ್  ಅವರು ಪಠಿಸಿದ ಖಿರಾಅತನ್ನು ಸಿರಾಜ್ ಪರ್ಲಡ್ಕ ಅವರು ಕನ್ನಡಕ್ಕೆ ಅನುವಾದಿಸಿದರು . ಮುಖ್ಯ ಅತಿಥಿ ಯಾಗಿ ಆಗಮಿಸಿದ್ದ ದಕ್ಷಿಣ ಕನ್ನಡ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರು ದುಆ ಮಾಡಿದರು.  ಮುಖ್ಯ ಪ್ರಭಾಷಣಕಾರರಾಗಿ ಆಗಮಿಸಿದ್ದ ಅಬೂಸುಫ್‌ಯಾನ್ ಇಬ್ರಾಹಿಂ ಮದನಿ ಅವರು ರಂಝಾನ್ ಮಹತ್ವವನ್ನು ವಿವರಿಸಿದರು.

ಹಂಝ ಕಣ್ಣಂಗಾರ್ ಅವರು ಸ್ವಾಗತಿಸಿದರು. ಜಲೀಲ್ ಗುರುಪುರ ಬಿಡಬ್ಲ್ಯೂ ಎಫ್ ನ ಕುರಿತಾದ ವಿಡಿಯೋ ಪ್ರೆಸೆಂಟೇಷನ್ ನೀಡಿದರು. ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್ ಪ್ರಾಸ್ತಾವಿಕ ಭಾಷಣದಲ್ಲಿ ಸಂಸ್ಥೆಯ ಕಾರ್ಯವೈಖರಿಗಳ ಬಗ್ಗೆ ವಿವರಿಸಿ ಸಂಸ್ಥೆಯ ಮುಂದಿನ ಯೋಜನೆಗಳಾದ ಸ್ಮರಣ ಸಂಚಿಕೆ ಮತ್ತು 20 ನೇ ವಾರ್ಷಿಕೋತ್ಸವ ಸಮಾರಂಭದ ವಿವರಣೆ ನೀಡಿದರು . ಬಿಸಿಸಿಐ ಯುಎಇ ಚಾಪ್ಟರ್ ಅಧ್ಯಕ್ಷ ಹಿದಾಯತ್ ಅಡ್ಡೂರ್ ರಂಝಾನ್ ಶುಭಾಶಯ ನೀಡಿದರು .

ಹಲವಾರು ಗಣ್ಯ ವ್ಯಕಿಗಳ ಸಹಿತ ಸುಮಾರು 750 ಹೆಚ್ಚು ಸಮುದಾಯದ ಪುರುಷರು, ಮಹಿಳೆಯರು ಮತ್ತು ಮಕ್ಕಳು ಈ ಇಫ್ತಾರ್ ಕೂಟದಲ್ಲಿ ಭಾಗಿಯಾದರು . ಉಪಾಧ್ಯಕ್ಷರಾದ ಅಬ್ದುಲ್ ರವೂಫ್ ಹಾಜಿ ಕೈಕಂಬ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಬಿ ಡಬ್ಲ್ಯೂ ಎಫ್ ಖಜಾಂಜಿ ಅಬ್ದುಲ್ ಮಜೀದ್ ಆತೂರ್ ಧನ್ಯವಾದ ಸಮರ್ಪಿಸಿದರು.

ಬ್ಯಾರೀಸ್ ವೆಲ್ಫೇರ್ ಫೋರಂ ಅಬುಧಾಬಿ (BWF) ಸಂಸ್ಥೆಯು ಊರಿನಲ್ಲಿ ಸಾಮೂಹಿಕ ವಿವಾಹ, ಅಶಕ್ತರ ಮನೆ ದುರಸ್ಥಿ, ಪ್ರತಿಭಾನ್ವಿತರ ವಿದ್ಯಾರ್ಜನೆಗೆ ಆರ್ಥಿಕ ಸಹಾಯಗಳಂತಹ ಸಾಮುದಾಯಿಕ ಸಾಮಾಜಿಕ ಕಾರ್ಯಗಳನ್ನು ದಶಕಗಳಿಂದ ಮಾಡುತ್ತಾ ಬಂದಿದೆ. ಈ ವರೆಗೆ 8 ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸುಮಾರು 126 ಜೋಡಿ ವಿವಾಹಗಳನ್ನು ನಡೆಸಿ ಕೊಟ್ಟ ಹಿರಿಮೆಯನ್ನು ತನ್ನಾದಾಗಿಸಿಕೊಂಡಿದೆ. ಬಡ ಹಾಗೂ ಅಶಕ್ತ ಕುಟುಂಬಗಳಿಗೆ 'BWF ಶೌಚಾಲಯ ಯೋಜನೆಯ' ಮೂಲಕ ಸುಮಾರು 175 ಕ್ಕೂ ಹೆಚ್ಚು ಶೌಚಾಲಯ ನಿರ್ಮಾಣ ಕಾರ್ಯವನ್ನು ಯಶಸ್ವಿಯಾಗಿ ಮಾಡಿಕೊಡಲಾಗಿದೆ.

ಈ ಇಫ್ತಾರ್ ಕೂಟದ ಯಶಸ್ವಿಗಾಗಿ ಮುಹಮ್ಮದ್‌ ಕಲ್ಲಾಪು, ಇಮ್ರಾನ್‌ ಕುದ್ರೋಳಿ, ನವಾಜ್‌ ಉಚ್ಚಿಲ್, ಮುಜೀಬ್‌ ಉಚ್ಚಿಲ್,  ಹಮೀದ್‌ ಗುರುಪುರ, ಮಜೀದ್‌ ಆಡಿಟರ್, ನಝೀರ್‌ ಉಬಾರ್‌, ಯಹ್ಯಾ, ಬಶೀರ್‌ ಉಚ್ಚಿಲ, ಹನೀಫ್‌ ಉಳ್ಳಾಲ, ಇಮ್ರಾನ್‌ ಕೃಷ್ಣಾಪುರ, ರಶೀದ್,ಇರ್ಫಾನ್ ಕುದ್ರೋಳಿ, ನಿಝಾಮ್‌ ವಿಟ್ಲ,  ಮುಈನುದ್ದೀನ್‌ ಹಂಡೇಲ್‌ ಅವರು ಕಾರ್ಯಕ್ರಮದ‌ ಯಶಸ್ಸಿಗಾಗಿ ಅವಿರತವಾಗಿ ಶ್ರಮಿಸಿದರು.

25 ಪ್ರತಿನಿಧಿಗಳನ್ನೊಳಗೊಂಡ ಬಿಡಬ್ಲ್ಯೂ ಫ್ ಸಂಸ್ಥೆಯು ಹಿರಿಯ ಸಾಮಾಜಿಕ ಧುರೀಣ ಮುಹಮ್ಮದ್ ಅಲಿ ಉಚ್ಚಿಲ್ ರ ನೇತೃತ್ವದಲ್ಲಿ ಹಲವಾರು ಸಮಾಜಮುಖಿ ಸಾಮುದಾಯಿಕ ಕಾರ್ಯಗಳೊಂದಿಗೆ ಯಶಸ್ವಿಯಾಗಿ ಮುನ್ನಡೆಯುತ್ತಿದೆ.




 





 


 

 

 

 




 


 




 












 


 


 


 


 


 

 

 

 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News