ಮಾ.9: ದುಬೈಯಲ್ಲಿ ದಾರುನ್ನೂರ್ ಇಫ್ತಾರ್ ವಿದ್ ಖಾಝಿಯಾರ್
Update: 2025-03-03 21:58 IST
ದುಬೈ: ದಾರುನ್ನೂರ್ ಎಜುಕೇಷನ್ ಸೆಂಟರ್ ಕಾಶಿಪಟ್ಣ ಇದರ ವತಿಯಿಂದ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಗ್ರಾಂಡ್ ಇಫ್ತಾರ್ ಕಾರ್ಯಕ್ರಮವು ಮಾ.9ರಂದು ದುಬೈಯ ಅಲ್‌ರಾಶಿದಿಯದಲ್ಲಿರುವ ಪೇಸ್ ಬ್ರಿಟಿಷ್ ಸ್ಕೂಲ್‌ನಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅಗಮಿಸಿದ ದ.ಕ. ಜಿಲ್ಲಾ ಖಾಝಿ, ಸಮಸ್ತ ಕೇಂದ್ರ ಮುಶಾವರ ಸದಸ್ಯ, ದಾರುನ್ನೂರ್ ವಿದ್ಯಾ ಸಂಸ್ಥೆಯ ರುವಾರಿ ಶೈಖುನಾ ತ್ವಾಕಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್‌ಹರಿ ಅವರನ್ನು ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಾರುನ್ನೂರಿನ ಪ್ರಮುಖರು ಬರಮಾಡಿಕೊಂಡರು.
ಮಾ.9ರಂದು ಸಂಜೆ ೪ಕ್ಕೆ ಸಯ್ಯದ್ ಆಸ್ಕರ್ ಅಲಿ ತಂಳ್‌ರ ನೇತೃತ್ವದಲ್ಲಿ ಮಾಸಿಕ ಮಜ್ಲಿಸುನ್ನೂರ್‌ನೊಂದಿಗೆ ಆರಂಭ ಗೊಳ್ಳಲಿದೆ. ಬಳಿಕ ಉಸ್ತಾದ್ ಸಲ್ಮಾನ್ ಅಲ್ ಅಝ್‌ಹರಿ ಅವರಿಂದ ರಮಝಾನ್ ಪ್ರಭಾಷಣ ನಡೆಯಲಿದೆ ಕಾರ್ಯಕ್ರಮದ ಚೇರ್ಮೆನ್ ಶಂಸುದ್ದೀನ್ ಕಲ್ಕಾರ್‌ತಿಳಿಸಿದ್ದಾರೆ.