ಅಜ್ಮಾನ್ : ಜ. 19 ರಂದು ಬಿಸಿಎಫ್- ತುಂಬೆ ಮೆಡಿಸಿಟಿ ಸ್ಪೋರ್ಟ್ಸ್ ಮೀಟ್- 2025
ಅಜ್ಮಾನ್: ಬ್ಯಾರೀಸ್ ಕಲ್ಬರಲ್ ಫೋರಮ್ (ಬಿ ಸಿ ಎಫ್) ವತಿಯಿಂದ “ಬಿ ಸಿ ಎಫ್ ಸ್ಪೋರ್ಟ್ಸ್ ಮೀಟ್- 2025” ತುಂಬೆ ಮೆಡಿಸಿಟಿ ಸಹಭಾಗಿತ್ವದಲ್ಲಿ ಜ. 19 ರವಿವಾರ ತುಂಬೆ ಮೆಡಿಸಿಟಿ, ಅಜ್ಮಾನ್ ನಲ್ಲಿ ನಡೆಯಲಿದೆ.
BCF ಅಧ್ಯಕ್ಷ ಡಾ. ಬಿ ಕೆ ಯೂಸುಫ್ ಮತ್ತು ತುಂಬೆ ಗ್ರೂಪ್ ಸ್ಥಾಪಕಾಧ್ಯಕ್ಷ ಡಾ. ತುಂಬೆ ಮೊಯ್ದೀನ್ ಇವರ ಮುಂದಾಳುತ್ವದಲ್ಲಿ ನಡೆಯುತ್ತಿರುವ ಈ ಸ್ಪೋರ್ಟ್ಸ್ ಮೀಟ್, ಬಿ ಸಿ ಎಫ್ ನ ಪ್ರಧಾನ ಪೋಷಕರಾಗಿದ್ದ ದಿವಂಗತ ಮುಮ್ತಾಝ್ ಅಲಿ ಯವರ ಸ್ಮರಣಾರ್ಥ ಬಿ ಎಂ ಮುಮ್ತಾಝ್ ಅಲಿ ಬಿ ಸಿ ಎಫ್ ವೇದಿಕೆಯಲ್ಲಿ ಜರುಗಲಿದೆ.
ಈ ಸಮಾರಂಭದಲ್ಲಿ ಕರ್ನಾಟಕ ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, state allied and Health Care Council ನ ಚೇರ್ಮನ್ ಯು ಟಿ ಇಫಿಕಾರ್, ಕರ್ನಾಟಕ ವಿಧಾನ ಪರಿಷತ್ ಸದಸ್ಯ ಬಿ ಎಂ ಫಾರೂಖ್, ಬಿ ಸಿ ಎಫ್ ನ ನೂತನ ಪೋಷಕ ಮಾಜಿ ಶಾಸಕ ಮೊಯ್ದೀನ್ ಬಾವ, ಕರ್ನಾಟಕದ ಹಲವು ವಿಶೇಷ ಅತಿಥಿಗಳು ಮತ್ತು UAE ಯ ಹಲವಾರು ಗಣ್ಯರು, ಉಧ್ಯಮಿಗಳು, ಅನಿವಾಸಿ ಕನ್ನಡಿಗರ ವಿವಿಧ ಸಂಸ್ಕೃತಿ, ಜಾತಿ ಮತ್ತು ಪಂಗಡಗಳ ಸಾಮಾಜಿಕ ಸಂಸ್ಥೆಗಳ ಪ್ರತಿನಿಧಿಗಳು ಅತಿಥಿಗಳಾಗಿ ಭಾಗವಹಿಸುವ ನಿರೀಕ್ಷೆ ಇದೆ.
ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅನಿವಾಸಿ ಭಾರತೀಯ ಉದ್ಯಮಿ ಡಾ. ತುಂಬೆ ಮೊಯ್ದೀನ್ ರವರನ್ನು ಈ ಸಂಧರ್ಭದಲ್ಲಿ ಸನ್ಮಾನಿಸಲಾಗುವುದು.
ಬೆಳಿಗ್ಗೆ 8 ಘಂಟೆಯಿಂದ ಸಂಜೆ 8 ಘಂಟೆಯವರೆಗೆ ನಡೆಯುವ ಈ ಕ್ರೀಡಾ ಕೂಟದಲ್ಲಿ ಮಕ್ಕಳು, ಮಹಿಳೆಯರಿಗೂ ಹಲವಾರು ರೀತಿಯ ಕ್ರೀಡೆಗಳು, ದೈಹಿಕ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿದೆ.
ಮುಖ್ಯವಾಗಿ ಕ್ರಿಕೆಟ್, ಕಬಡ್ಡಿ, ವಾಲಿಬಾಲ್, ಫುಟ್ ಬಾಲ್, ಟೇಬಲ್ ಟೆನಿಸ್, ಹಗ್ಗ ಜಗ್ಗಾಟ, ಮಹಿಳೆಯರಿಗಾಗಿ ಪಾಕ ಸ್ಪರ್ಧೆ, ಮೆಹಂದಿ ಡಿಸೈನಿಂಗ್ ಒಳಗೊಂಡಂತೆ ವಿವಿಧ ಇತರ ಸ್ಪರ್ಧೆಗಳು, ಇಸ್ಲಾಮಿಕ್ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿವೆ.
ಊಟೋಪಚಾರ ಮತ್ತು ಲಘು ತಿಂಡಿ ಪಾನೀಯದ ಏರ್ಪಾಡು ಮಾಡಲಾಗಿದ್ದು, UAE ಮತ್ತು ಇತರ GCC ಯ ಅನಿವಾಸಿ ಕನ್ನಡಿಗರು ಮತ್ತು ಊರಿನ ಕನ್ನಡಿಗರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ BCF ಸ್ಪೋರ್ಟ್ಸ್ ಸಮಿತಿಯ ಚೇರ್ಮನ್ ಜನಾಬ್ ಅಸ್ಲಾಂ ಕಾರಾಜೆ, ಉಪ ಚಯರ್ ಮ್ಯಾನ್ ಜನಾಬ್ ಅಫೀಕ್ ಹುಸೈನ್, BCF ಸಮಿತಿಯ ಸದಸ್ಯರು, BCF ಮಹಿಳಾ ವಿಂಗ್ ಸದಸ್ಯರು ಮತ್ತು ಬಿ ಸಿ ಎಫ್ ಪದಾಧಿಕಾರಿಗಳು ವಿನಂತಿಸಿದ್ದಾರೆ.