ಡಿ.ಕೆ.ಎಸ್.ಸಿ (ಯು.ಎ.ಇ) ಸಿಲ್ವರ್ ಜುಬಿಲಿ ಸಮಾರೋಪ ಸಮಾರಂಭ, ಕರಾವಳಿ ಗ್ರ್ಯಾಂಡ್ ಫ್ಯಾಮಿಲಿ ಮುಲಾಖಾತ್
ಅಜ್ಮಾನ್: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ರಿ) ಮಂಗಳೂರು ಇದರ ಯು.ಎ.ಇ ರಾಷ್ಟೀಯ ಸಮಿತಿಯ ಸಿಲ್ವರ್ ಜುಬಿಲಿ ಸಮಾರೋಪ ಸಮಾರಂಭ ಹಾಗು ಡಿ.ಕೆ.ಎಸ್.ಸಿ ಯು.ಎ.ಇ ಕರಾವಳಿ ಗ್ರ್ಯಾಂಡ್ ಫ್ಯಾಮಿಲಿ ಮುಲಾಖಾತ್ ಜನವರಿ 12 ಆದಿತ್ಯವಾರ ಬೆಳಿಗ್ಗೆ ಗಂಟೆ 10 ರಿಂದ ಸಾಯಂಕಾಲ 7 . 30 ರವರಿಗೆ ಧಾರ್ಮಿಕ ಚೌಕಟ್ಟಿನಲ್ಲಿ ವಿವಿಧ ಕಾರ್ಯಕ್ರಮ ಗಳೊಂದಿಗೆ ಅಜ್ಮಾನ್ ನ ವುಡ್ ಲೆಮ್ ಪಾರ್ಕ್ ಸ್ಕೂಲ್ ನಲ್ಲಿ ನಡೆಯಲಿದೆ.
ವಿಶೇಷವಾಗಿ ಮಕ್ಕಳಿಗೆ ಇಸ್ಲಾಮಿಕ್ ಕ್ವಿಝ್ , ಭಾಷಣ, ಹಾಡು, ಕಲರಿಂಗ್ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಮಹಿಳೆಯರಿಗಾಗಿ ಮದುರಂಗಿ ಸ್ಪರ್ಧೆ, ಅಡುಗೆ ಸ್ಪರ್ಧೆ (Dessert or Sweets ), ಕ್ವಿಝ್ ಇನ್ನಿತರ ಸ್ಪರ್ಧೆಗಳು ಹಾಗೂ ಪುರುಷರಿಗಾಗಿ ಹಗ್ಗ ಜಗ್ಗಾಟ ಇನ್ನಿತರ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ವಿಶೇಷವಾಗಿ ಆಕರ್ಷಕ ವಿವಿಧ ತಂಡಗಳ ಪಥ ಸಂಚಲನ ನಡೆಯಲಿದೆ.
ಕಾರ್ಯಕ್ರಮವು ಸಯ್ಯದ್ ತ್ವಾಹ ಬಾಫಖಿ ತಂಘಳ್ ರವರ ದುಆದೊಂದಿಗೆ ನಡೆಯಲಿದ್ದು, ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರಕಾರದ ಘನವೆತ್ತ ಸಭಾಧ್ಯಕ್ಷರಾದ ಯು.ಟಿ.ಖಾದರ್, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತರಾದ ಡಾ. ತುಂಬೆ ಮೊಯ್ದೀನ್, ಡಾ. ಬಿ.ಎಂ.ಉಮ್ಮರ್ ಹಾಜಿ, ಝಕರಿಯಾ ಹಾಜಿ ಜೋಕಟ್ಟೆ, ಅಕ್ರಮ್ ಶೇಕ್, ಅಡ್ವಕೇಟ್ ಖಲೀಲ್, ಇಬ್ರಾಹಿಂ ಗಡಿಯಾರ್, ಡಾ ಬಿ ಕೆ ಯೂಸುಫ್ , ಅಶ್ರಫ್ ಮಾಂತೂರ್, ಜಾಫರ್ ಬಿ ಎಂ , ಇನ್ನಿತರ ಯು.ಎ.ಇ ಉದ್ಯಮಿಗಳು ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಡಿ.ಕೆ.ಎಸ್.ಸಿ ಸೆಂಟ್ರಲ್ ಕಮಿಟಿ ಮತ್ತು ವಿವಿಧ ರಾಷ್ಟ್ರೀಯ ನೇತಾರರು ಭಾಗವಹಿಸಲಿದ್ದಾರೆ.