ಡಿ.29ರಂದು ಅಬುಧಾಬಿಯಲ್ಲಿ ಕೆಸಿಎಫ್ ಬ್ಲಡ್ ಸೈಬೊ
Update: 2024-12-28 15:08 GMT
ಅಬುಧಾಬಿ: ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಇದರ ವತಿಯಿಂದ ಬ್ಲಡ್ ಸೈಬೊ ಅಭಿಯಾನದ ಅಂಗವಾಗಿ ರಕ್ತದಾನ ಶಿಬಿರವನ್ನು ಡಿ.29ರಂದು ನಗರದ ಖಾಲಿದಿಯಾ ಬ್ಲಡ್ ಬ್ಯಾಂಕ್ ನಲ್ಲಿ ಆಯೋಜಿಸಲಾಗಿದ್ದು, ರಕ್ತದಾನಿಗಳು ಸದುಪಯೋಗ ಪಡಿಸಿಕೊಳ್ಳುವಂತೆ ಕೋರಲಾಗಿದೆ.
ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಸಕ್ರಿಯ ಅನಿವಾಸಿ ಕನ್ನಡಿಗರ ಸಂಘಟನೆಯಾಗಿರುವ ಕೆಸಿಎಫ್ ಕಳೆದ ಒಂದು ದಶಕದಿಂದ ಸಾಮಾಜಿಕ ಶೈಕ್ಷಣಿಕ ಕ್ಷೇತ್ರಗಳಲ್ಲಿ ಗಣನೀಯ ಸೇವೆಯನ್ನು ಸಲ್ಲಿಸುತ್ತಿದೆ. ಈ ಹಿಂದೆ ಯುಎಇಯ ಹಲವೆಡೆ ಸೇರಿದಂತೆ ಹಲವು ಗಲ್ಫ್ ರಾಜ್ಯಗಳಲ್ಲಿ ಯಶಸ್ವಿಯಾಗಿ ರಕ್ತದಾನ ಶಿಬಿರವನ್ನು ಕೆಸಿಎಫ್ ಆಯೋಜಿಸಿದೆ ಎಂದು ಪ್ರಕಟನೆ ತಿಳಿಸಿದೆ.