ತಮಿಳು ನಟ ಅಜಿತ್ ಕುಮಾರ್ ಕಾರು ಅಪಘಾತ : ಹೈ-ಸ್ಪೀಡ್‌ ರೇಸಿಂಗ್‌ ಅಭ್ಯಾಸದ ವೇಳೆ ಘಟನೆ

Update: 2025-01-07 14:56 GMT

Photo | Instagram/@AjithKumarRacing

ಯುಎಇ: ದುಬೈನಲ್ಲಿ ನಡೆಯಲಿರುವ 24 ಎಚ್ ದುಬೈ 2025 ಕಾರ್ ರೇಸಿಂಗ್ ಗೆ ತಯಾರಿ ನಡೆಸುತ್ತಿದ್ದ ವೇಳೆ ತಮಿಳು ನಟ ಅಜಿತ್ ಕುಮಾರ್ ಡ್ರೈವ್ ಮಾಡುತ್ತಿದ್ದ ರೇಸಿಂಗ್ ಕಾರು ಅಪಘಾತಕ್ಕೀಡಾಗಿದ್ದು, ನಟ ಅಜಿತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಅಪಘಾತದ ಕುರಿತ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೊದಲ್ಲಿ ಕಾರು ನಿಲ್ಲುವ ಮೊದಲು ಏಳು ಸುತ್ತು ತಿರುಗುತ್ತಿರುವುದು ಕಂಡು ಬಂದಿದೆ. ದುಬೈ ಆಟೋಡ್ರೋಮ್‌ ನಲ್ಲಿ ಅಭ್ಯಾಸದ ವೇಳೆ ಹೆಚ್ಚಿನ ವೇಗದಲ್ಲಿದ್ದ Porsche 992 ಕಾರು ತಡೆಗೋಡೆಗೆ ಢಿಕ್ಕಿಯಾಗಿದೆ. ಅಜಿತ್ ಹೆಲ್ಮೆಟ್ ಹಾಗೂ ರೈಡಿಂಗ್ ಜಾಕೆಟ್ ಹಾಕಿದ್ದ ಹಿನ್ನಲೆ ಯಾವುದೇ ಗಾಯಗಳಾಗಿಲ್ಲ. ಅವರನ್ನು ಆರೋಗ್ಯ ತಪಾಸಣೆಗಾಗಿ ಆಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.


Tags:    

Writer - ವಾರ್ತಾಭಾರತಿ

contributor

Editor - siddik

contributor

Byline - ವಾರ್ತಾಭಾರತಿ

contributor

Similar News