ತಬೂಕ್ | ಡೆಲ್ಟ ಕಿಂಗ್ಸ್ ವತಿಯಿಂದ ಕ್ರಿಕೆಟ್ ಪಂದ್ಯಾಟ : ಮಂಗಳೂರು ಫ್ರೆಂಡ್ಸ್ ತಂಡ ಚಾಂಪಿಯನ್
Update: 2024-12-22 10:09 GMT
ರಿಯಾದ್: ಡೆಲ್ಟ ಕಿಂಗ್ಸ್ ಇದರ ವತಿಯಿಂದ ಕ್ರಿಕೆಟ್ ಪಂದ್ಯಾಟವು ಸೌದಿ ಅರೇಬಿಯಾದ ತಬೂಕಿನಲ್ಲಿ ನ.29 ರಿಂದ ಡಿ.19 ರ ವರೆಗೆ ನಡೆಯಿತು.
16 ತಂಡಗಳ ಕ್ರಿಕೆಟ್ ಪಂದ್ಯಾಕೂಟದಲ್ಲಿ ಹಳೆಕೋಟೆಯ ಅಬ್ದುಲ್ ಕರೀಂ (ksa) ರವರ ಸಾರಥ್ಯದ ಮಂಗಳೂರು ಫ್ರೆಂಡ್ಸ್ (MFC)ತಂಡವು ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿತು.
ವಿಜೇತ ತಂಡಕ್ಕೆ ಟೆಸ್ಟ್ ಸ್ಪೋಟ್ಸ್ ಹಳೆಕೋಟೆ ಮತ್ತು ಡ್ರೀಮ್ಸ್ ಇಂಡಿಯಾ ಫೌ೦ಡೇಶನ್ ಹಳೆಕೋಟೆ ಅಭಿನಂದನೆ ಸಲ್ಲಿಸಿದೆ.