ಭಾರತ-ಕುವೈತ್ ನಡುವಿನ ಬಹುಮುಖ ಬಾಂಧವ್ಯಕ್ಕೆ ಇತಿಹಾಸದ ಬೇರುಗಳಿವೆ: ಪ್ರಧಾನಿ ಮೋದಿ

Update: 2024-12-22 10:01 GMT

ಪ್ರಧಾನಿ ನರೇಂದ್ರ ಮೋದಿ (Photo: X/@narendramodi)

ಹೊಸದಿಲ್ಲಿ: ಭಾರತ-ಕುವೈತ್ ನಡುವಿನ ಬಹುಮುಖ ಬಾಂಧವ್ಯವು ಇತಿಹಾಸ, ಸಂಸ್ಕೃತಿ ಹಾಗೂ ಪರಸ್ಪರ ಗೌರವದ ಬೇರುಗಳನ್ನು ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಕುವೈತ್ ಸುದ್ದಿ ಸಂಸ್ಥೆಯೊಂದಕ್ಕೆ ತಾವು ನೀಡಿದ ಸಂದರ್ಶನದ ಮುಖ್ಯಾಂಶಗಳನ್ನು ಎಕ್ಸ್ ನಲ್ಲಿ ಹಂಚಿಕೊಂಡಿರುವ ಪ್ರಧಾನಿ ಮೋದಿ, “ಭಾರತ ಮತ್ತು ಕುವೈತ್ ನಡುವಿನ ಬಹುಮುಖ ಬಾಂಧವ್ಯವು ಇತಿಹಾಸ, ಸಂಸ್ಕೃತಿ ಹಾಗೂ ಪರಸ್ಪರ ಗೌರವದ ಬೇರುಗಳನ್ನು ಹೊಂದಿವೆ. ನಮ್ಮ ಬಲಿಷ್ಠವಾದ ಸಂಬಂಧಗಳು ಇಂಧನ, ವ್ಯಾಪಾರ ಮತ್ತು ಹೂಡಿಕೆಯವರೆಗೆ ವಿಸ್ತರಿಸಿವೆ. ನಮ್ಮ ಸ್ನೇಹವನ್ನು ಮತ್ತಷ್ಟು ಬಲಗೊಳಿಸಲು ನಮ್ಮ ಬಳಿ ಚಲನಶೀಲ ಭಾರತೀಯ ಮೂಲದ ಜನರಿದ್ದಾರೆ. ಈ ಸಂಗತಿ ಸೇರಿದಂತೆ ಇನ್ನಿತರ ಹಲವಾರು ವಿಷಯಗಳ ಮೇಲೆ ಕುವೈತ್ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಬೆಳಕು ಚೆಲ್ಲಿದೆ” ಎಂದು ಬರೆದುಕೊಂಡಿದ್ದಾರೆ.

43 ವರ್ಷಗಳ ನಂತರ ಇದೇ ಪ್ರಥಮ ಬಾರಿಗೆ ಭಾರತದ ಪ್ರಧಾನಿಯೊಬ್ಬರು ಕುವೈತ್ ಗೆ ಭೇಟಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News