ದುಬೈ: ಸಾಗರ ಹಾಜಿಗೆ 'ಮುಈನುಸ್ಸುನ್ನ ಅಕ್ಷರ ಸಂಗಾತಿ' ಪುರಸ್ಕಾರ

Update: 2024-12-18 15:25 GMT

ದುಬೈ: ಮುಈನುಸ್ಸುನ್ನಃ ಅಕಾಡೆಮಿ ಹಾವೇರಿ ಇದರ ಯುಎಇ ರಾಷ್ಟ್ರೀಯ ಸಮಿತಿ ವತಿಯಿಂದ ಶಿಕ್ಷಣ ಪ್ರೇಮಿ, ಸಮಾಜ ಸೇವಕ ಸಾಗರ ಮುಹಮ್ಮದ್ ಹಾಜಿ ಅವರಿಗೆ 'ಅಕ್ಷರ ಸಂಗಾತಿ' ಪುರಸ್ಕಾರವನ್ನು ಪ್ರದಾನ ಮಾಡಲಾಯಿತು.

ದುಬೈಯ ದೇರಾ ಪರ್ಲ್ ಕ್ರೀಕ್‌ನಲ್ಲಿ ನಡೆದ 'ಅಕ್ಷರ ಸಂಚಾರ' ಸಮಾವೇಶದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ನೀಡುತ್ತಿರುವ ಸೇವೆಯನ್ನು ಪರಿಗಣಿಸಿ 'ಅಕ್ಷರ ಸಂಗಾತಿ' ಪುರಸ್ಕಾರವನ್ನು ಅವರಿಗೆ ನೀಡಲಾಯಿತು.

ಕಲ್ಲಿಕೋಟೆ ಜಾಮಿಅ ಮರ್ಕಝ್ ಉಪಾಧ್ಯಕ್ಷ ಸಯ್ಯಿದ್ ಶಿಹಾಬುದ್ದೀನ್ ಅಹ್ದಲ್ ಮುತ್ತನೂರ್ ತಂಙಳ್ ಪ್ರಶಸ್ತಿ ಪ್ರದಾನ ಮಾಡಿದರು.

ಮುಈನುಸ್ಸುನ್ನಃ ದುಬೈ ಘಟಕಾಧ್ಯಕ್ಷ ಹಾಜಿ ಅಶ್ರಫ್ ಅಡ್ಯಾರ್ ಅಧ್ಯಕ್ಷತೆಯಲ್ಲಿ ಕರ್ನಾಟಕ ಕಲ್ಚರಲ್ ಫೌಂಡೇಶನ್ ರಾಷ್ಟ್ರೀಯ ಕೋಶಾಧಿಕಾರಿ ಹಾಜಿ ಝೈನುದ್ದೀನ್ ಬೆಳ್ಳಾರೆ ಉದ್ಘಾಟಿಸಿದರು. ಹಾವೇರಿ ಮುಈನುಸ್ಸುನ್ನಃ ಅಕಾಡೆಮಿಯ ಉಪಾಧ್ಯಕ್ಷ ಕೆ ಎಂ ಅಬೂಬಕರ್ ಸಿದ್ದೀಕ್ ಮೊಂಟುಗೋಳಿ ಅಭಿನಂದನಾ ಭಾಷಣ ಮಾಡಿದರು. ಪ್ರಧಾನ ಕಾರ್ಯದರ್ಶಿ ಮುಸ್ತಫಾ ನಈಮಿ ಹಾವೇರಿ ಮುಖ್ಯ ಭಾಷಣ ಮಾಡಿದರು.

ಮೇಕ್ ಫೌಂಡೇಶನ್ ಯುಎಇ ಸಲಹೆಗಾರ ಹಾಜಿ ಅಶ್ರಫ್ ಶಾ ಮಾಂತೂರು, ಬ್ಯಾರಿ ಚೇಂಬರ್ ಅಧ್ಯಕ್ಷ ಹಿದಾಯತ್ ಅಡ್ಡೂರು ಶುಭ ಹಾರೈಸಿದರು. ಇಬ್ರಾಹೀಂ ಮದನಿ ಸಾಮಣಿಗೆ ಪ್ರಾರ್ಥನೆ ನಡೆಸಿದರು.

ಮುಈನುಸ್ಸುನ್ನಃ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮೂಸಾ ಬಸರ, ಡಿಕೆಎಸ್ಸಿ ನಾಯಕರಾದ ಯೂಸುಫ್ ಆರ್ಲಪದವು, ಇ.ಕೆ. ಇಬ್ರಾಹೀಂ ಹಾಜಿ ಕಿನ್ಯಾ, ಕೆಸಿಎಫ್ ನಾಯಕರಾದ ನವಾಝ್ ಕೋಟೆಕಾರ್, ಇಸ್ಮಾಯಿಲ್ ಮದನಿ ನಗದ, ಬರ್ಶಾ ಮದನಿ ದುಬೈ, ಶುಕೂರ್ ಮನಿಲ, ಉದ್ಯಮಿ ಮುಹಮ್ಮದ್ ಹಾಜಿ ಪರಪ್ಪು ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

ಸ್ವಾಗತ ಸಮಿತಿ ಅಧ್ಯಕ್ಷ ದಾವೂದ್ ಮಾಸ್ಟರ್ ಬೆಳ್ಳಾರೆ ಸ್ವಾಗತಿಸಿ, ಕಾರ್ಯದರ್ಶಿ ಕಲಂದರ್ ಕಬಕ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News