ಮಲೆನಾಡು ಸಾಂಸ್ಕೃತಿಕ, ಕ್ರೀಡಾ ಸಂಸ್ಥೆ (MGT-Jeddah)ಯ ಜಿದ್ದಾ ವಲಯದ ವಾರ್ಷಿಕ ಮಹಾಸಭೆ
ರಿಯಾದ್: ಮಲೆನಾಡು ಸಾಂಸ್ಕೃತಿಕ ಮತ್ತು ಕ್ರೀಡಾ ಸಂಸ್ಥೆ(MGT)ಯ ಜಿದ್ದಾ ವಲಯದ 2024ನೇ ಸಾಲಿನ ವಾರ್ಷಿಕ ಮಹಾಸಭೆಯು ಡಿ.20ರಂದು ಜಿದ್ದಾದ ದಿ ವಿಲೇಜ್ ರೆಸ್ಟೋ ರೆಂಟ್ ನಲ್ಲಿ ಜರುಗಿತು.
ಮಾಸ್ಟರ್ ಇಮಾದ್ ಇಕ್ಬಾಲ್ ಅವರ ಕಿರಾಅತ್ ಪಠಣದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮುಖ್ತಾರ್ ಜಾಮಿಯಾ MGT ಯ ಕಾರ್ಯಚಟುವಟಿಕೆ, ಸಾಮಾಜಿಕ ಸೇವಾ ಕಾರ್ಯಕ್ರಗಳ ಬಗ್ಗೆ ವಿವರಿಸಿದರು.
ನಾಸಿರ್ ಬಾಳೆಹೊನ್ನೂರು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಅದ್ನಾನ್ ಅಹ್ಮದ್ ವಂದಿಸಿದರು.
ಇದೇವೇಳೆ 2025ನೇ ಸಾಲಿನ ನೂತನ ಸಮಿತಿಯನ್ನು ರಚಿಸಲಾಯಿತು.
ಚುನಾವಣಾಧಿಕಾರಿಯಾಗಿ ಇಸ್ಮಾಯೀಲ್ ಹೈದ್ರೋಸ್ ಮತ್ತು ಹಸನ್ ಸಾಗರ್ ಅವರ ಮಾರ್ಗದರ್ಶನದಲ್ಲಿ ಹೊಸ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಜಲಾಲ್ ಬೇಗ್, ಸಕಲೇಶಪುರ, ಗೌರವಾಧ್ಯಕ್ಷರಾಗಿ ಇಕ್ಬಾಲ್ ಗಬ್ಗಲ್, ಉಪಾಧ್ಯಕ್ಷರುಗಳಾಗಿ ನಾಸಿರ್ ಬಾಳೆಹೊನ್ನೂರು, ಹಸನ್ ಯಡೂರು, ಜೀಶಾನ್ ಬಾಳೆಹೊನ್ನೂರು, ಪ್ರಧಾನ ಕಾರ್ಯದರ್ಶಿಯಾಗಿ ಅದ್ನಾನ್ ಅಹ್ಮದ್, ಖಜಾಂಚಿಯಾಗಿ ಹಾರಿಸ್ ಬಿಳಗುಳ, ಸಹ ಖಜಾಂಚಿಯಾಗಿ ಸಫ್ವಾನ್ ಉಮರ್ ಚಿಕ್ಕಮಗಳೂರು ಆಯ್ಕೆಯಾದರು.
ಸಹಕಾರ್ಯದರ್ಶಿಗಳಾಗಿ ಝಕರಿಯಾ ನೆಲ್ಯಾಡಿ, ಸಮೀರ್ ಕೊಡ್ಲಿಪೇಟೆ, ಹಿರಿಯ ಸಲಹೆಗಾರರಾಗಿ ಮುಸ್ತಾಕ್ ಗಬ್ಗಲ್, ಇಸ್ಮಾಯೀಲ್ ಹೈದ್ರೋಸ್, ಈವೆಂಟ್ ಮ್ಯಾನೇಜರ್ ಗಳಾಗಿ ಹಾರಿಸ್ ಉಪ್ಪಳ್ಳಿ, ತ್ವಾಹಾ ಕೊಡ್ಲಿಪೇಟೆ, ಮಸೂದ್ ಸಕಲೇಶಪುರ, ಜಸೀಂ ಕಲ್ಲಡ್ಕ, ವೈದ್ಯಕೀಯ ವಿಭಾಗದ ಉಸ್ತುವಾರಿಯಾಗಿ ಇಮ್ರಾನ್ ಅರಸೀಕೆರೆ, ಮಾಧ್ಯಮ ನಿರ್ವಾಹಕರಾಗಿ ಸೈಫುದ್ದೀನ್, ಆಚಂಗಿ, ಫಹದ್ ಕೊಡ್ಲಿಪೇಟೆ ಆಯ್ಕೆಯಾದರು.
ಸನ್ಮಾನ ಮತ್ತು ಅಭಿನಂದನೆ:
ಇದೇವೇಳೆ ಹಿಂದಿನ ಸಮಿತಿಯನ್ನು ವಿಸರ್ಜಿಸುವ ಮೊದಲು ಹಳೆಯ ಸಮಿತಿಯ ಸದಸ್ಯರಿಗೆ ಅವರ ಸೇವೆಗಳಿಗಾಗಿ ವಿಶೇಷ ಕೃತಜ್ಞತೆಗಳನ್ನು ಸಲ್ಲಿಸಲಾಯಿತು. ಹೊಸ ವೃತ್ತಿಜೀವನದ ಪ್ರಯಾಣ ಆರಂಭಿಸಲು ಹೊರಟಿರುವ ಜೀಶಾನ್ ಬಾಳೆಹೊನ್ನೂರು ಅವರನ್ನು, MGTಗೆ ನೀಡಿದ ಸೇವೆಗಳಿಗಾಗಿ ಶಾಲು ಹೊದಿಸಿ ಸನ್ಮಾನಿಸಲಾಯಿತು.
ನೂತನ ಅಧ್ಯಕ್ಷ ಜಲಾಲ್ ಬೇಗ್ ಮಾತನಾಡಿ, ಹೊಸ ಜವಾಬ್ದಾರಿಯನ್ನು ಪ್ರಾಮಾಣಿಕತೆಯಿಂದ ನಿರ್ವಹಿಸುವ ಭರವಸೆ ನೀಡಿದರಲ್ಲದೆ, ಎಲ್ಲರ ಸಹಕಾರ ಕೋರಿದರು.
ಹಾರಿಸ್ ಬಿಳಗುಳ ಮತ್ತು ಮುಸ್ತಾಕ್ ಗಬ್ಗಲ್ ಸಭೆಯ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸಿದರು.