ಭಾರತೀಯ ಸಾಗರೋತ್ತರ ಕಾಂಗ್ರೆಸ್ ಮಕ್ಕಾ ಕೇಂದ್ರ ಸಮಿತಿ ಅಸ್ತಿತ್ವಕ್ಕೆ: ಅಧ್ಯಕ್ಷರಾಗಿ ಶಾಜಿ ಚುನಕ್ಕರ ಆಯ್ಕೆ

Update: 2025-01-08 17:55 GMT

ಶಾಜಿ ಚುನಕ್ಕರ, ನೌಶಾದ್ ತೊಡುಪುಳ, ಇಬ್ರಾಹಿಂ ಕಣ್ಣಂಗಾರ್

ಮಕ್ಕಾ: ಕಾಂಗ್ರೆಸ್ ಅಖಿಲ ಭಾರತ ಸಮಿತಿಯ ಇಂಡಿಯನ್ ಓವರ್‌ಸೀಸ್ ಕಾಂಗ್ರೆಸ್ (ಐಒಸಿ) ಸಮಿತಿಯ ಅಡಿಯಲ್ಲಿ ಮಕ್ಕಾ ಕೇಂದ್ರ ಸಮಿತಿಯು ಅಸ್ತಿತ್ವಕ್ಕೆ ಬಂದಿದೆ.

ಮಕ್ಕಾ ಅಝೀಝಿಯಾದ ಪಾನೂರ್ ರೆಸ್ಟೋರೆಂಟ್ ಹಾಲ್‌ನಲ್ಲಿ ಐಒಸಿ ಸೌದಿ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಜಾವೇದ್ ಮಿಯಾಂದಾದ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮೊದಲ ಐಒಸಿ ಮಕ್ಕಾ ಕೇಂದ್ರ ಸಮಿತಿ ಅಸ್ತಿತ್ವಕ್ಕೆ ಬಂದಿತು.

ಹಿರಿಯ ಮುಖಂಡ ಶಾನಿಯಾಸ್ ಕುನ್ನಿಕೋಡ್ ಮಂಡಿಸಿದ ಪದಾಧಿಕಾರಿಗಳ ಸಮಿತಿ ಸಭೆಯನ್ನು ಸರ್ವಾನುಮತದಿಂದ ಅನುಮೋದಿಸಿತು. ರಾಷ್ಟ್ರೀಯ ಅಧ್ಯಕ್ಷ ಜಾವೇದ್ ಮಿಯಾಂದಾದ್ ಅವರನ್ನು ಜಾಕೀರ್ ಕೊಡುವಳ್ಳಿ ಶಾಲು ಹೊದಿಸಿ ಬರಮಾಡಿಕೊಂಡರು.

ಐಒಸಿ ಮಕ್ಕಾ ಕೇಂದ್ರ ಸಮಿತಿಯ ಪದಾಧಿಕಾರಿಗಳು: ಶಾಜಿ ಚುನಕ್ಕರ (ಅಧ್ಯಕ್ಷರು), ನೌಶಾದ್ ತೊಡುಪುಳ (ಸಂಘಟನಾ ಪ್ರಧಾನ ಕಾರ್ಯದರ್ಶಿ), ಇಬ್ರಾಹಿಂ ಕಣ್ಣಂಗಾರ್ (ಖಜಾಂಚಿ), ಹಾರಿಸ್ ಮನ್ನಾರ್ಕಾಡ್, ನಿಝಾಮ್ ಕಾಯಂಕುಲಂ, ಮೊಹಮ್ಮದ್ ಶಾ ಪೊರುವಾಹಿ, ಇಕ್ಬಾಲ್ ಗಬ್ಗಲ್, ಶಮ್ನಾಝ್ ಮೀರಾನ್ ಮೈಲೂರು (ಉಪಾಧ್ಯಕ್ಷರು) , ಅಬ್ದುಲ್ ಸಲಾಂ ಅತಿವಾಡ್, ಅನ್ವರ್ ಎಡಪಲ್ಲಿ, ನಿಸಾ ನಿಝಾಮ್ (ಪ್ರಧಾನ ಕಾರ್ಯದರ್ಶಿ), ಸರ್ಫರಾಝ್ ತಲಶ್ಶೇರಿ (ಜಂಟಿ ಕೋಶಾಧಿಕಾರಿ), ಶಮ್ಸ್ ವಡಕಂಚೇರಿ, ಜೇಸ್ ಓಚಿರ, ಶಹಜಹಾನ್ ಕರುನಾಗಪ್ಪಳ್ಳಿ, ಫಿರೋಝ್ ಎಡಕ್ಕರ, ಅಬ್ದುಲ್ ವಾರಿಸ್ ಅರೀಕೋಡ್, ರಫೀಕ್ ಕೋಝಿಕ್ಕೋಡ್, ಹಮ್ಜಾ ಮನ್ನಾರ್ಕಾಡ್, ಜಾಸಿಂ, ಸಮ್ನಾದ್‌ ಕಡಕ್ಕಲ್, ಶೀಅಲ್, ಶೀಅಲ್ ಜಾಕೀರ್ ಹುಸೇನ್ (ಕಾರ್ಯದರ್ಶಿ), ಅಬ್ದುಲ್ ಕರೀಂ ವರಂತರಪಿಳ್ಳಿ (ಕಲ್ಯಾಣ ವಿಭಾಗದ ಅಧ್ಯಕ್ಷರು), ಅಬ್ದುಲ್ ಕರೀಂ ಪೂವಾರ್ (ಕ್ರೀಡಾ ವಿಭಾಗದ ಅಧ್ಯಕ್ಷರು), ನೌಶಾದ್ ಕಣ್ಣೂರು (ಸಾಂಸ್ಕೃತಿಕ ವಿಭಾಗದ ಅಧ್ಯಕ್ಷರು), ನೌಫಲ್ ಕರುನಾಗಪಿಳ್ಳಿ (ಸಾಂಸ್ಕೃತಿಕ ವಿಭಾಗದ ಸಂಚಾಲಕರು), ರಫೀಕ್ ಕೊತ್ತಮಂಗಲಂ (ಕೇರಳ ರಾಜ್ಯ ಸಂಯೋಜಕರು), ಅಬ್ರಾಝ್ (ಕರ್ನಾಟಕ ರಾಜ್ಯ ಸಂಯೋಜಕ), ಅಬ್ದುಲ್ ಅಝೀಝ್ (ತಮಿಳುನಾಡು ರಾಜ್ಯ ಸಂಯೋಜಕ), ಮುಹಮ್ಮದ್ ಚೌಧರಿ (ತೆಲಂಗಾಣ ರಾಜ್ಯ ಸಂಯೋಜಕ), ಮುಹಮ್ಮದ್ ಅಸ್ಲಾಂ (ಉತ್ತರ ಪ್ರದೇಶ ರಾಜ್ಯ ಸಂಯೋಜಕ), ಮುಹಮ್ಮದ್ ಸದ್ದಾಂ ಹುಸೇನ್ (ಬಿಹಾರ ರಾಜ್ಯ ಸಂಯೋಜಕ), ಮನ್ಸೂರ್ ಬಾಬಾ (ಜಮ್ಮು ಮತ್ತು ಕಾಶ್ಮೀರ ಸಂಯೋಜಕ), ಹುಸೇನ್ ಕಣ್ಣೂರು, ಶರಫುದ್ದೀನ್ ಪೂಝಿಕೋಡ್, ಹಬೀಬ್ ಕೋಯಿಕ್ಕೋಡ್, ರಿಯಾಝ್ ವರ್ಕಳ, ಮುಹಮ್ಮದ್ ಹಸನ್ ಅಬ್ಬಾ ಮಂಗಳೂರು, ಮುಹಮ್ಮದ್ ಶಾಫಿ ಕೊಂಪಾಡನ್, ಶಮ್ನಾದ್ ಕಡೈಕ್ಕಲ್, ಶಿಹಾಬ್ ಕಡೈಕ್ಕಲ್ (ಕಾರ್ಯಕಾರಿ ಸಮಿತಿ) ಆಯ್ಕೆಯಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News