ಸೋಶಿಯಲ್ ಫೋರಮ್ ಒಮನ್ ವತಿಯಿಂದ 'ಭಾರತೀಯ ವೈದ್ಯರ ದಿನಾಚರಣೆ'

Update: 2021-07-02 14:29 GMT
ಸೋಶಿಯಲ್ ಫೋರಮ್ ಒಮನ್ ವತಿಯಿಂದ ಭಾರತೀಯ ವೈದ್ಯರ ದಿನಾಚರಣೆ
  • whatsapp icon

ಮಸ್ಕತ್: ಒಮನ್ ನ ವಿವಿಧ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರನ್ನು ಭೇಟಿ ಮಾಡಿ ಹೂಗುಚ್ಛ ಮತ್ತು ಶುಭಾಶಯ ಪತ್ರಗಳನ್ನು ಹಂಚುವ ಮೂಲಕ ಸೋಶಿಯಲ್ ಫೋರಮ್ ಒಮನ್ ವತಿಯಿಂದ 'ಭಾರತೀಯ ವೈದ್ಯರ ದಿನ'ವನ್ನು ವಿಶಿಷ್ಟವಾಗಿ ಗುರುವಾರ ಆಚರಿಸಲಾಯಿತು.

ಕೊರೋನ ಸಂದಿಗ್ಧ ಸಂದರ್ಭದಲ್ಲಿ ಸಮರೋಪಾದಿಯಾಗಿ ಸೇವೆ ಸಲ್ಲಿಸುತ್ತಿರುವ ವೈದ್ಯ ಸಮೂಹವನ್ನು ಈ ಸಂದರ್ಭ ಅಭಿನಂದಿಸಿಸಲಾಯಿತು.

ಒಮನ್ ನ ವಿವಿಧ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಭಾರತೀಯ ವೈದ್ಯರನ್ನು ಗುರುತಿಸಿ ಶುಭಾಶಯ ಕೋರಲಾಯಿತು. ಬದರ್ ಅಲ್ ಸಮಾ, ಅಲ್ ಸಲಾಮ, ಗ್ರೀನ್ ಕಾರ್ನರ್ ಕ್ಲಿನಿಕ್, ಸ್ಟಾರ್ ಕೇರ್,  ಸೊಹಾರ್ ಕ್ಲಿನಿಕ್,  ಫೆರ್ರಿ ಕ್ಲಿನಿಕ್ ಹಾಗು ಇತರ ಆಸ್ಪತ್ರೆಗಳಿಗೆ ತೆರಳಿ ಮತ್ತು ಫೋನು ಕರೆಗಳ ಮೂಲಕ 80ಕ್ಕೂ ಹೆಚ್ಚು ವೈದ್ಯರಿಗೆ ವೈದ್ಯರ ದಿನದ ಶುಭಾಶಯಗಳನ್ನು ಸಲ್ಲಿಸಲಾಯಿತು ಎಂದು ಸೋಶಿಯಲ್ ಫೋರಮ್ ಒಮನ್ ಪದಾಧಿಕಾರಿಗಳು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News