ಛತ್ತೀಸ್‌ಗಢ: ಕ್ಯಾಂಪ್ ನಲ್ಲಿ ಆಹಾರ ಸೇವಿಸಿದ ಬಳಿಕ 26 ಮಂದಿ ಯೋಧರು ಅಸ್ವಸ್ಥ
ರಾಯ್ಪುರ: ಕ್ಯಾಂಪ್ ನಲ್ಲಿ ಆಹಾರ ಸೇವಿಸಿದ ಬಳಿಕ 26 ಮಂದಿ ಇಂಡೋ ಟಿಬೆಟಿಯನ್ ಗಡಿ ಸೈನ್ಯಕ್ಕೆ ಸೇರಿದ ಯೋಧರು ಅಸ್ವಸ್ಥರಾಗಿರುವ ಕುರಿತು ವರದಿಯಾಗಿದೆ. ಘಟನೆಯು ಛತ್ತೀಸ್‌ಗಢದ ರಾಜಧಾನಿ ರಾಯಾಪುರದಿಂದ 150 ಕಿ.ಮೀ ದೂರದ ರಾಜ್‌ನಂದಗಾವ್ ನ ಮಿಲಿಟರಿ ಕ್ಯಾಂಪ್ ನಲ್ಲಿ ನಡೆದಿದೆ.
"ನಕ್ಸಲರು ಅಧೀಕವಾಗಿರುವ ಛತ್ತೀಸ್‌ಗಢ-ಮಧ್ಯಪ್ರದೇಶದ ಗಡಿಭಾಗದಲ್ಲಿ ಯೋಧರು ಕರ್ತವ್ಯ ನಿರತಾಗಿದ್ದರು. ಇದು ಫುಡ್ ಪಾಯಿಸನ್ ಎಂದು ಶಂಕಿಸಲಾಗಿದೆ. 21 ಮಂದಿಯನ್ನು ಕಮ್ಯೂನಿಟಿ ಹೆಲ್ತ್ ಸೆಂಟರ್ ಗೆ ದಾಖಲಿಸಲಾಗಿದೆ. ಐವರನ್ನು ಬೆಳಗ್ಗೆಯೇ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿಕೆ ನೀಡಿದ್ದಾಗಿ thehindu.com ವರದಿ ಮಾಡಿದೆ.
"ಬುಧವಾರದಂದು ರಾತ್ರಿ ಯೋಧರು ರಾತ್ರಿಯ ಆಹಾರವಾಗಿ ಪನೀರ್ ಮತ್ತು ಮಾಂಸವನ್ನು ಸೇವಿಸಿದ್ದರು. ಮರುದಿನ, ಕೆಲವರು ಬೇಧೀ ಮತ್ತು ವಾಂತಿಯ ಕುರಿತು ಮಾಹಿತಿ ನೀಡಿದರು. ಒಟ್ಟು 21 ಮಂದಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಎಲ್ಲರ ಸ್ಥಿತಿಯೂ ಸದ್ಯ ಸ್ಥಿರವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.