ಜಮ್ಮುಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಯ ವೇಳೆ ಪೊಲೀಸರ ಗುಂಡಿಗೆ ಬಲಿಯಾದ ಹಣ್ಣು ಮಾರಾಟಗಾರ: ವರದಿ

Update: 2021-10-24 11:32 GMT
Photo: Ndtv.com

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೊಪಿಯಾನ್‌ ಜಿಲ್ಲೆಯ ಜೈನ್‌ ಪೋರಾ ಗ್ರಾಮದಲ್ಲಿ ಇಂದು ಬೆಳಗ್ಗೆ ನಾಗರಿಕರೋರ್ವರು ಗುಂಡಿಗೆ ಬಲಿಯಾಗಿದ್ದಾರೆ. ಮೃತಪಟ್ಟವರನ್ನು ಸೇಬು ಮಾರಾಟಗಾರ ಶಾಹಿದ್‌ ಅಜಾಝ್‌ ಎಂದು ಗುರುತಿಸಲಾಗಿದೆ. ಶಾಹಿದ್‌ ಹತ್ಯೆಗೆ ಕಾರಣವಾದ ಅಂಶಗಳ ಕುರಿತು ಹಲವು ರೀತಿಯ ಹೇಳಿಕೆಗಳು ಕೇಳಿ ಬರುತ್ತಿರುವ ನಡುವೆಯೇ ಭಯೋತ್ಪಾದಕರ ಮತ್ತು ಪೊಲೀಸರ ನಡುವಿನ ಗುಂಡಿನ ದಾಳಿಯ ಮಧ್ಯೆ ಅವರು ಪೊಲೀಸರ ಗುಂಡಿಗೆ ಬಲಿಯಾಗಿದ್ದಾರೆ ಎಂದು ndtv.com ವರದಿ ಮಾಡಿದೆ.

ಈ ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ. ಅಜಾಝ್‌ ಗೆ 20 ವರ್ಷ ಎಂದು ಅಂದಾಜಿಸಲಾಗಿದೆ. 

ಈ ಬಗ್ಗೆ ಟ್ವೀಟ್‌ ಮಾಡಿರುವ ಶೋಪಿಯಾನ್‌ ಜಿಲ್ಲಾ ಪೊಲೀಸರು, "ಸುಮಾರು 10:30ರ ವೇಳೆಗೆ ಅಪರಿಚಿತ ಭಯೋತ್ಪಾದಕರು 178 ಬಿಎನ್‌ ಸಿಆರ್‌ಪಿಎಫ್‌ ಶೋಪಿಯಾನ್‌ ನ ಬಾಬಾಪೋರಾದಲ್ಲಿನ ನಾಕಾ ಪಾರ್ಟಿಯ ಮೇಲೆ ದಾಳಿ ಮಾಡಿದರು. ಈ ವೇಳೆ ಸಿಆರ್ಪಿಎಫ್‌ ಪ್ರತಿದಾಳಿ ನಡೆಸಿದ್ದು, ಕ್ರಾಸ್‌ ಫೈರಿಂಗ್‌ ನಲ್ಲಿ ಓರ್ವ ಅಪರಿಚಿತ ವ್ಯಕ್ತಿ ಮೃತಪಟ್ಟಿದ್ದಾನೆ. ಹೆಚ್ಚಿನ ವಿವರಗಳನ್ನು ಕಂಡುಹಿಡಿಯಲಾಗುತ್ತಿದೆ" ಎಂದ ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News