ವಿವಾಹ ವಯೋಮಿತಿ ಹೆಚ್ಚಳದಿಂದ ವ್ಯಕ್ತಿ ಸ್ವಾತಂತ್ರ್ಯ ಅತಿಕ್ರಮಣ: ಸಂಸ್ಥಾನ ಜಮ್‌ಇಯ್ಯತುಲ್ ಉಲಮಾ

Update: 2021-12-19 12:09 GMT

ಮಲಪ್ಪುರಂ: ಹೆಣ್ಣು ಮಕ್ಕಳ ಮದುವೆಯ ವಯಸ್ಸನ್ನು 18ರಿಂದ 21ಕ್ಕೆ ಏರಿಸುವ ಕ್ರಮವು ಮತದಾನದ ಹಕ್ಕು ಹೊಂದಿರುವ ವ್ಯಕ್ತಿಗಳ ಲೈಂಗಿಕ ಸ್ವಾತಂತ್ರ್ಯದ ಮೇಲಿನ ಅತಿಕ್ರಮಣವಾಗಿದೆ ಎಂದು ಕೇರಳ ಸಂಸ್ಥಾನ ಜಮ್ ಇಯ್ಯತುಲ್  ಉಲಮಾ ಕೇಂದ್ರ ಮುಶಾವರ ಸಭೆ ಅಭಿಪ್ರಾಯಪಟ್ಟಿತು.

ಹೊಸ ಕ್ರಮವು 21 ವಯಸ್ಸಿಗಿಂತ ಮೊದಲು ಮಹಿಳೆಯರಿಗೆ ಜನಿಸಬಹುದಾದ ಮಕ್ಕಳಿಗೆ ಪಿತೃತ್ವ ಮತ್ತು ಸಂರಕ್ಷಣಾ ಜವಾಬ್ದಾರಿಯ ನಿರಾಕರಣೆಗೆ ಕಾರಣವಾಗುತ್ತದೆ.

ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿ ಹಸ್ತಕ್ಷೇಪ ಮಾಡುವ ಉದ್ದೇಶವನ್ನು ಹೊಂದಿದ  ಈ ಕ್ರಮವು ಹೆಣ್ಣು ಮಕ್ಕಳ ದೈಹಿಕ ಮತ್ತು ಮಾನಸಿಕ ಹಿತಾಸಕ್ತಿಗಳ ನಿರಾಕರಣೆ ಮತ್ತು ವೈಯಕ್ತಿಕ ಕಾನೂನುಗಳಿಗೆ ಸಂರಕ್ಷಣೆ ನೀಡುವ ಸಂವಿಧಾನದ 24 ನೇ ಪರಿಚ್ಛೇದದ ಉಲ್ಲಂಘನೆಯೂ ಆಗಿದೆ ಎಂದು ಹೇಳಿದ ಮುಷಾವರ, ಕೇಂದ್ರ ಸರ್ಕಾರವು ಈ ಕ್ರಮದಿಂದ ಹಿಂದೆ ಸರಿಯಬೇಕೆಂದು ಕರೆ ನೀಡಿದೆ.

ಫೆ.1ರಂದು ವಡಗರದಲ್ಲಿ ‘ "ಇಸ್ಲಾಂ ಸಮಗ್ರ" ಎಂಬ ವಿಷಯದ  ಕುರಿತ ಉಲಮಾ ಮಜ್ಲಿಸ್ ನಡೆಯಲಿದ್ದು, ಶೈಖುಲ್ ಉಲಮಾ ಮರ್‌ಹೂಂ ಎನ್.ಕೆ.ಉಸ್ತಾದರ ಸ್ಮರಣಿಕೆಯನ್ನು ಬಿಡುಗಡೆ ಮಾಡಲಾಗುವುದು.

 ಜಮ್ ಇಯ್ಯತುಲ್ ಉಲಮಾ ಅಧ್ಯಕ್ಷರಾದ ಕಿಡಂಙಝಿ ಯು ಅಬ್ದುರಹೀಂ ಮೌಲವಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಚೆರುಕರ ಮಹಮ್ಮದ್ ಅಸ್ಗರ್ ಮುಸ್ಲಿಯಾರ್ ಉದ್ಘಾಟಿಸಿದರು.  ಮೌಲಾನಾ  ನಜೀಬ್ ಮೌಲವಿ, ಕೆ ಕೆ ಕುಂಞಾಲಿ ಮುಸ್ಲಿಯಾರ್, ಅಲಿ ಹಸನ್ ಬಾಖವಿ, ಯು ಅಲಿ ಮೌಲವಿ, ಕೆ ವೀರಾನ್ ಕುಟ್ಟಿ ಮುಸ್ಲಿಯಾರ್, ಸಯ್ಯಿದ್ ಹಸನ್ ಸಖಾಫ್ ತಂಙಳ್, ಸಯ್ಯಿದ್ ಹಾಶಿಂ ಬಾಫಕಿ ತಂಙಳ್, ಪರಪ್ಪನಂಙಾಡಿ ಖಾಝಿ ಸಯ್ಯಿದ್ ಮುಹಮ್ಮದ್ ತಂಙಳ್, ಇ.ಎಮ್ ಅಬೂಬಕ್ಕರ್ ಮುಸ್ಲಿಯಾರ್, ಅಹ್ಮದ್ ಬಾಖವಿ, ಮುಜೀಬ್ ವಹಬಿ ಮುಂತಾದವರು ಚರ್ಚಾಕೂಟದಲ್ಲಿ ಭಾಗವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News