ವಾಣಿಜ್ಯ ಸಂಸ್ಥೆಗಳು ರಾತ್ರಿ ವೇಳೆ ಕಾರ್ಯನಿರ್ವಹಿಸಿದರೆ, ಅಪರಾಧ ಹೆಚ್ಚುತ್ತದೆ: ವಿವಿಧ ಬಡಾವಣೆ ನಿವಾಸಿಗಳಿಂದ ಆಕ್ಷೇಪ

Update: 2022-04-25 18:04 GMT

ಬೆಂಗಳೂರು, ಎ.25: ನಗರದಲ್ಲಿ 10ಕ್ಕಿಂತ ಅಧಿಕ ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ವಾಣಿಜ್ಯ ಸಂಸ್ಥೆಗಳು 24/7 ಕೆಲಸ ಮಾಡಲು ಕಾರ್ಮಿಕ ಇಲಾಖೆಯು ಅನುವು ಮಾಡಿಕೊಟ್ಟಿದೆ. ಇದರಿಂದ ನಗರದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತವೆ ಎಂದು ಐ ಚೇಂಜ್ ಇಂದಿರಾನಗರ ಸಂಘಟನೆ ಆರೋಪಿಸಿದೆ. 

ಸೋಮವಾರ ಪ್ರೆಸ್‍ಕ್ಲಬ್‍ನಲ್ಲಿ ಸಂಘಟನೆಯ ಸದಸ್ಯೆ ಸ್ನೇಹಾ ನಂದಿಹಾಳ್ ಅವರು ಮಾತನಾಡಿ, ರಾತ್ರಿ ವೇಳೆ ಈಗಾಗಲೇವ ನಗರದಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಇದರ ಬೆನ್ನಲ್ಲೇ ವಾಣಿಜ್ಯ ಸಂಸ್ಥೆಗಳಿಗೆ ದಿನದ ಇಪ್ಪತ್ನಾಲ್ಕು ಗಂಟೆ ಕೆಲಸ ಮಾಡಲು ಅವಕಾಶ ನೀಡಿರುವುದು ಸರಿಯಲ್ಲ. ಇದರಿಂದ ಮಹಿಳೆಯರು ಸೇರಿದಂತೆ ಮಕ್ಕಳು ಭಯದ ವಾತಾವರಣದಲ್ಲಿ ಬದುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು. 

ವಸತಿ ಪ್ರದೇಶಗಳಿಗೆ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಗಳು ರಾತ್ರಿಯಲ್ಲಿ 45 ಡೆಸಿಬಲ್‍ಗಿಂತ ಕಡಿಮೆ ಶಬ್ದ ಇರಬೇಕು ಎಂದು ಎಂದು ತಿಳಿಸುತ್ತವೆ. ಆದರೆ ಇದು ಈಗಾಗಲೇ ಉಲ್ಲಂಘನೆಯಾಗಿದೆ. ಅನಿಯಂತ್ರಿತ ಕೂಟಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಹಾಗಾಗಿ ವೈದ್ಯಕೀಯ ಸೇವೆ ಹೊರತು ಪಡಿಸಿ, ವಾಣಿಜ್ಯ ಸಂಸ್ಥೆಗಳಿಗೆ ರಾತ್ರಿ ವೇಳೆ ಕಾರ್ಯನಿರ್ವಹಿಸದಂತೆ ಕಡಿವಾಣ ಹಾಕಬೇಕು ಎಂದು ಸರಕಾರವನ್ನು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News