ಮುಂದಿನ ಚುನಾವಣೆಯಲ್ಲಿ ನನ್ನ ಗುರಿ 123 ಕ್ಷೇತ್ರ, 35-40 ಸ್ಥಾನ ಗೆದ್ರೆ ಹೊಂದಾಣಿಕೆ ಸರ್ಕಾರ ಮಾಡಲ್ಲ: ಕುಮಾರಸ್ವಾಮಿ
Update: 2023-06-06 07:33 GMT
ಮೈಸೂರು: 'ಜೆಡಿಎಸ್ ಮಿಷನ್ 123 ಗುರಿ ದಾಟಿ, ಅಧಿಕಾರ ಹಿಡಿಯಲಿದೆ' ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಜೆಡಿಎಸ್ ಪಕ್ಷದ ರಾಜ್ಯ ಮಟ್ಟದ ಎರಡನೇ ದಿನದ ಕಾರ್ಯಾಗಾರ ಆರಂಭಕ್ಕೂ ಮುನ್ನ ಚಾಮುಂಡಿ ಬೆಟ್ಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''30-40 ಸ್ಥಾನ ಗೆದ್ದು ಯಾವುದಾದರೊಂದು ಪಕ್ಷದ ಜೊತೆ ಹೊಂದಾಣಿಕೆ ಮಾಡ್ಕೊಂಡು ಹೋಗಬಹುದು ಅನ್ನೋ ಮನೋಭಾವ ನಮ್ಮ ಶಾಸಕರಲ್ಲಿ ಇದ್ರೆ ಅದನ್ನು ತೆಗೆದು ಹಾಕಿ'' ಎಂದು ಸಲಹೆ ನೀಡಿದರು.
''ನನ್ನ ಗುರಿ ಮುಂದಿನ ಚುನಾವಣೆಯಲ್ಲಿ123 ಕ್ಷೇತ್ರ. ನೂರಕ್ಕೂ ಅಧಿಕ ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿಯುತ್ತೇವೆ. ಇಲ್ಲ ಎಂದಾದರೆ ಹೊಂದಾಣಿಕೆ ಸರ್ಕಾರ ಮಾಡಿಕೊಂಡು ಹೋದ್ರೆ ನಾವು ಕೊಟ್ಟ ಭರವಸೆಯನ್ನ ಈಡೇರಿಸೋಕೆ ಆಗಲ್ಲ'' ಎಂದು ತಿಳಿಸಿದರು.