ಸದ್ಯದಲ್ಲಿಯೇ ವಾಟ್ಸ್ ಆ್ಯಪ್ ಜಾರಿಗೊಳಿಸಲಿದೆ ಹೊಸ ಫೀಚರ್: ಇಲ್ಲಿದೆ ಮಾಹಿತಿ
ಕ್ಯಾಲಿಫೋರ್ನಿಯಾ: ಮೆಟಾ (Meta) ಮಾಲೀಕತ್ವದ ಜನಪ್ರಿಯ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸ್ ಆ್ಯಪ್ (Whatsapp) ʻಮೆಸೇಜ್ ಯುವರ್‌ಸೆಲ್ಫ್ʼ ಎಂಬ ಹೊಸ ಫೀಚರ್ ಅನ್ನು ಭಾರತದಲ್ಲಿ ಮುಂದಿನ ವಾರಗಳಲ್ಲಿ ಬಿಡುಗಡೆಗೊಳಿಸುವುದಾಗಿ ಘೋಷಿಸಿದೆ. ಇದೊಂದು ಬಳಕೆದಾರರು ಸ್ವತಃ ತಮ್ಮೊಂದಿಗೆ ಚಾಟ್ ಮಾಡುವಂತಹ ಫೀಚರ್ ಆಗಿದ್ದು ಬಳಕೆದಾರರು ಟಿಪ್ಪಣಿಗಳು, ಜ್ಞಾಪನೆಗಳು ಮತ್ತು ಅಪ್‌ಡೇಟ್‌ಗಳನ್ನು ತಮಗೇ ಕಳುಹಿಸಬಹುದಾಗಿದೆ.
ತಮ್ಮ ಟು-ಡು ಅಥವಾ ಮಾಡಬೇಕಾದವುಗಳನ್ನು ಪಟ್ಟಿ ಮಾಡಲು ಈ ಫೀಚರ್ ಅನ್ನು ಬಳಕೆದಾರರು ಬಳಸಬಹುದಾಗಿದೆ. ಈ ಹೊಸ ಫೀಚರ್ ಬಳಸಲು ಬಳಕೆದಾರರು ವಾಟ್ಸ್ ಆ್ಯಪ್ ತೆರೆದು ಹೊಸ ಚಾಟ್ ರಚಿಸಿ, ನಂತರ ಪಟ್ಟಿಯ ಮೇಲ್ಭಾಗದಲ್ಲಿರುವ ತಮ್ಮ ಸ್ವಂತ ಕಾಂಟಾಕ್ಟ್ ಕ್ಲಿಕ್ ಮಾಡಿ ಪಠ್ಯ ಸಂದೇಶ ಕಳುಹಿಸುವುದನ್ನು ಆರಂಭಿಸಬಹುದಾಗಿದೆ.
ಈ ಫೀಚರ್ ಆಂಡ್ರಾಯ್ಡ್ ಮತ್ತು ಐಫೋನ್‌ಗಳಲ್ಲಿ ಲಭ್ಯವಿರಲಿದೆ ಹಾಗೂ ಮುಂದಿನ ವಾರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಮೆಟಾ ಹೇಳಿಕೆಯೊಂದು ತಿಳಿಸಿದೆ.
ವಾಟ್ಸ್ ಆ್ಯಪ್ ನಲ್ಲಿ ಕಮ್ಯುನಿಟೀಸ್ ಫೀಚರ್ ಸಹಿತ 32 ಜನರೊಂದಿಗೆ ವೀಡಿಯೋ ಕಾಲಿಂಗ್, ಇನ್-ಚಾಟ್ ಪೋಲಿಂಗ್ ಮತ್ತು 1024 ರಷ್ಟು ಬಳಕೆದಾರರು ಇರಬಹುದಾದ ಗ್ರೂಪ್‌ಗಳನ್ನು ಅನುಮತಿಸುವ ಫೀಚರ್‌ಗಳನ್ನು ಕೆಲವೇ ದಿನಗಳ ಹಿಂದೆ ಘೋಷಿಸಲಾಗಿತ್ತು.
ಇದನ್ನೂ ಓದಿ: ವಲಸಿಗರಿಗೆ ಅತ್ಯುತ್ತಮ ನಗರ ಸ್ಪೇನ್ ನ ವೆಲೆನ್ಸಿಯಾ, ದುಬೈ