ಹೊಸ ಫೀಚರ್ ಪರಿಚಯಿಸಲಿರುವ ವಾಟ್ಸ್ ಆ್ಯಪ್‌; ಇಲ್ಲಿದೆ ಮಾಹಿತಿ

Update: 2023-06-30 05:05 GMT

ಹೊಸದಿಲ್ಲಿ: ವಾಟ್ಸ್ ಆ್ಯಪ್‌ (WhatsApp) ಚಾಟ್‌ ಪಟ್ಟಿಯಲ್ಲಿ ಫೋನ್‌ ಸಂಖ್ಯೆಯ ಬದಲು ಬಳಕೆದಾರರ ಹೆಸರುಗಳು ಅಥವಾ ಯೂಸರ್‌ನೇಮ್‌ಗಳನ್ನು ಹೊಂದುವ ಹೊಸ ಅಪ್‌ಡೇಟ್‌ ಅನ್ನು ಬಿಡುಗಡೆಗೊಳಿಸಲು ವಾಟ್ಸ್ ಆ್ಯಪ್‌ ಚಿಂತನೆ ನಡೆಸಿದೆ. WABetaInfo ಮಾಹಿತಿಯಂತೆ ಇದರಿಂದ ಅಪರಿಚಿತ ಸಂಖ್ಯೆಯಿಂದ ಸಂದೇಶ ಬಂದಾಗ ಫೋನ್‌ ಸಂಖ್ಯೆ ಬದಲು 'ಯೂಸರ್‌ನೇಮ್‌' ಕಾಣಿಸುವುದು ಬಳಕೆದಾರರಿಗೆ ಅನುಕೂಲಕರವಾಗಲಿದೆ.

ಅಪರಿಚಿತ ಸಂಖ್ಯೆಯಿಂದ ಬರುವ ಸಂದೇಶದ ಜೊತೆ ಪುಶ್‌ ಹೆಸರು ಚಾಟ್‌ ಲಿಸ್ಟ್‌ನಲ್ಲಿ ಕಾಣಿಸಿಕೊಳ್ಳಲಿದೆ ಹಾಗೂ ಫೋನ್‌ ಸಂಖ್ಯೆ ಚಾಟ್‌ ಬಬಲ್‌ನಲ್ಲಿ ಎರಡನೇ ಸ್ಥಾನದಲ್ಲಿರಲಿದೆ. ಗುಂಪು ಚಾಟ್‌ ಸಂದರ್ಭ ಬಳಕೆದಾರನನ್ನು ತಕ್ಷಣ ಗುರುತಿಸಲು ಹಾಗೂ ಅಪರಿಚಿತ ಸಂಪರ್ಕಗಳ ಚಾಟ್‌ಗಳ ಕುರಿತು ತಿಳಿಯಲು ಈ ಫೀಚರ್‌ ಸಹಕಾರಿಯಾಗಲಿದೆ.

ಕಳೆದ ಡಿಸೆಂಬರಿನಲ್ಲಿ ಹೊರತರಲಾದ ಫೀಚರ್‌ನಲ್ಲಿ ಪುಶ್‌ ಹೆಸರು ಗುಂಪು ಚಾಟ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರೆ ಈಗ ಅದು ಚಾಟ್‌ ಪಟ್ಟಿಯಲ್ಲಿ ಕಾಣಿಸಲಿದೆ.

ಗ್ರೂಪ್‌ ಚಾಟ್‌ಗಳೊಳಗೆ ಪ್ರೊಫೈಲ್‌ ಐಕಾನ್‌ ಗಳನ್ನು ಹೊಂದುವ ಹಾಗೂ 21 ಹೊಸ ಎಮೋಜಿಗಳನ್ನು ಪರಿಚಯಿಸುವ ಅಪ್ಡೇಟ್ ಕೂಡಾ ಶೀಘ್ರದಲ್ಲೇ ಬರಲಿದೆ.

ವಾಟ್ಸ್ ಆ್ಯಪ್‌ ಗ್ರೂಪ್‌ಗಳಲ್ಲಿ ಅಡ್ಮಿನ್‌ಗಳಿಗೆ ಹೆಚ್ಚಿನ ನಿಯಂತ್ರಣ ಒದಗಿಸುವ ಕುರಿತೂ ಚಿಂತನೆ ನಡೆದಿದೆ. ಇದರಿಂದ ಸದಸ್ಯರಾಗುವವರಿಗೆ ಅಡ್ಮಿನ್‌ಗಳು ವಾಟ್ಸ್ ಆ್ಯಪ್‌ ಲಿಂಕ್‌ಗಳನ್ನು ಕಳುಹಿಸಬಹುದು ಹಾಗೂ ಯಾರು ಗುಂಪು ಸೇರಬಹುದೆಂಬುದನ್ನು ಅವರು ನಿರ್ಧರಿಸಬಹುದಾಗಿದೆ.

Similar News