ದೇಶಾದ್ಯಂತ ವಾಟ್ಸ್‌ ಆ್ಯಪ್, ಇನ್‍ಸ್ಟಾಗ್ರಾಂ, ಫೇಸ್‍ಬುಕ್‍ನಲ್ಲಿ ಈಗ ಮೆಟಾ ಎಐ ಲಭ್ಯ‌

Update: 2024-06-27 14:16 GMT

Photo credit: indiatoday.in

ಹೊಸದಿಲ್ಲಿ: ಮೆಟಾ ಇದೀಗ ಭಾರತದಲ್ಲಿ ಅತ್ಯಾಧುನಿಕ ಎಐ ಅಸಿಸ್ಟೆಂಟ್ ವಿಶೇಷತೆ ಮೆಟಾ ಎಐಯನ್ನು ಪರಿಚಯಿಸಿದೆ. ಮೆಟಾ ಕಂಪನಿಯ ಇನ್‍ಸ್ಟಾಗ್ರಾಂ, ಫೇಸ್‍ಬುಕ್ ಮತ್ತು ವಾಟ್ಸಪ್ ಸೇವೆಗಳನ್ನು ಬಳಸುವ ಜನ ಈ ಆ್ಯಪ್‍ಗಳಲ್ಲಿ ಮೆಟಾ ಎಐ ಬಳಸಬಹುದಾಗಿದೆ. ಮೆಟಾ ಎಐ ಬಳಕೆದಾರರಿಗೆ ದೈನಂದಿನ ಕಾರ್ಯಗಳು, ಕಲಿಕೆ, ಸೃಜನಶೀಲ ಕಾರ್ಯಗಳಿಗೆ ನೆರವಾಗುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಕಳೆದ ವರ್ಷದ ಮೆಟಾ ಕನೆಕ್ಟ್ ನಲ್ಲಿ ಇದನ್ನು ಆರಂಭಿಕವಾಗಿ ಪರಿಚಯಿಸಲಾಗಿತ್ತು ಮತ್ತು ಇದೀಗ ಇದು ಇತೀಚಿನ ಲಾಮಾ 3 ತಂತ್ರಜ್ಞಾನದಿಂದ ಸಶಕ್ತಗೊಂಡಿದೆ. ಕಳೆದ ಎಪ್ರಿಲ್‍ನಿಂದ ಮೆಟಾ ಎಐ ಜಾಗತಿಕವಾಗಿ ವಿಸ್ತರಣೆಗೊಳ್ಳುತ್ತಿದ್ದು, ಇದೀಗ ಭಾರತೀಯ ಬಳಕೆದಾರರಿಗೆ ಕೂಡಾ ಲಭ್ಯ.

ವಾಟ್ಸ್‌ ಆ್ಯಪ್ ನಲ್ಲಿ ಗ್ರೂಪ್ ಚಾಟ್‍ಗಳಲ್ಲಿ ಪ್ಲಾನಿಂಗ್ ಮತ್ತು ಸಲಹೆಗಳಿಗೆ ನೆರವಾಗಲು ಇದನ್ನು ಬಳಸಬಹುದು. ರಾತ್ರಿ ಊಟಕ್ಕೆ ರೆಸ್ಟೋರೆಂಟ್‍ಗಳಿಗೆ ಆಹಾರ ಶಿಫಾರಸ್ಸು ಮಾಡಲು, ಪ್ರವಾಸದ ವೇಳಾಪಟ್ಟಿ ಸಿದ್ಧಪಡಿಸಲು ಬಳಸಬಹುದಾಗಿದ್ದು, ವಾಟ್ಸ್‌ ಆ್ಯಪ್ ಸಂವಾದಗಳಲ್ಲೇ ಮೆಟಾ ಎಐಗೆ ಬಳಕೆದಾರರು ಮನವಿ ಮಾಡಿಕೊಳ್ಳಬಹುದು. ಮೆಟಾ ಎಐ ನೇರ ಲಭ್ಯತೆಗೆ, ನಿಮ್ಮ ಸಾಧಗಳಲ್ಲಿ ಲಭ್ಯವಿರುವ ಅಪ್‍ಡೇಟ್ ಬಳಸಿಕೊಂಡು ಗ್ರಾಹಕರು ಆ್ಯಪ್‍ನ ತುದಿಯಲ್ಲಿರುವ ಬ್ಲೂ-ಪರ್ಪಲ್ ವೃತ್ತಾಕಾರದ ಸರ್ಕಲ್ ಕ್ಲಿಕ್ ಮಾಡಬಹುದು.

ಫೇಸ್‍ಬುಕ್‍ನಲ್ಲಿ ನಿಮ್ಮ ಫೀಡ್‍ಗಳಲ್ಲಿ ಮೆಟಾ ಎಐ ಹೆಚ್ಚುವರಿ ಪರಿಸ್ಥಿತಿ ಮತ್ತು ಮಾಹಿತಿಗಳನ್ನು ನೀಡುತ್ತದೆ ಎಂದು ಕಂಪನಿ ಹೇಳಿದೆ. ಉದಾಹರಣೆಗೆ ನೀವು ನಾರ್ತನ್ ಲೈಟ್ಸ್ ಬಗ್ಗೆ ಪೋಸ್ಟ್ ನೋಡಿದಲ್ಲಿ, ನೀವು ಇದನ್ನು ನೋಡಲು ಯಾವುದು ಒಳ್ಳೆಯ ಸಮಯ ಎಂಬ ಮಾಹಿತಿಯನ್ನು ಮೆಟಾ ಎಐನಿಂದ ಪಡೆಯಬಹುದು. ಮೆಟಾ ಎಐ ಅಸಿಸ್ಟ್ ಅನ್ನು ವಾಟ್ಸ್ ಆ್ಯಪ್‍ನಲ್ಲಿ ಚಾಟ್‍ಗಳ ರೂಪದಲ್ಲೇ ಪಡೆಯಬಹುದು.


Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News