'ಡಿಸಪಿಯರಿಂಗ್' ಮೆಸೇಜ್‌ಗಳನ್ನು ಉಳಿಸಿಕೊಳ್ಳುವ 'ಕೀಪ್ ಇನ್ ಚಾಟ್' ಫೀಚರ್ ಪರಿಚಯಿಸಲಿರುವ ವಾಟ್ಸ್ ಆ್ಯಪ್
ಹೊಸದಿಲ್ಲಿ: ವಾಟ್ಸ್ ಆ್ಯಪ್ ನ 'ಡಿಸಪಿಯರಿಂಗ್' (ಅಳಿದು ಹೋಗುವ) ಮೆಸೇಜ್ ಫೀಚರ್ ಬಳಕೆದಾರರಿಗೆ ಬಹಳಷ್ಟು ಉಪಯುಕ್ತವಾಗಿದೆ, ಪ್ರಮುಖವಾಗಿ ಕೆಲಸಮಯದ ನಂತರ ಸಂದೇಶಗಳು ತಮಗೆ ಬೇಕಾಗಿಲ್ಲ ಅನ್ನುವವರಿಗೆ ಇದು ವರದಾನ. ಇದೀಗ ಡಿಸಪಿಯರಿಂಗ್ ಮೆಸೇಜ್‌ಗಳನ್ನು ಕಳುಹಿಸುವವರಿಗೆ ಅವರು ಕಳುಹಿಸುವ ಸಂದೇಶದ ಕೆಲವು ಪಠ್ಯವನ್ನು ಉಳಿಸಿಕೊಳ್ಳುವ ಫೀಚರ್ ಅನ್ನು ವಾಟ್ಸ್ ಆ್ಯಪ್ ಪರಿಚಯಿಸಲಿದೆ. ಸಂಬಂಧಿತ ಬಳಕೆದಾರ ಡಿಸಪಿಯರಿಂಗ್ ಮೆಸೇಜಸ್ ಫೀಚರ್ ಅನ್ನು ಆನ್ ಮಾಡಿದ್ದರೂ ಈ ಹೊಸ ಫೀಚರ್ ಲಭ್ಯವಾಗಲಿದೆ.
ಇದಕ್ಕಾಗಿಯೆಂದೇ ಕೀಪ್ ಇನ್ ಚಾಟ್ ಫೀಚರ್ ಅನ್ನು ಈಗ ಪರಿಚಯಿಸಲಾಗುತ್ತಿದೆ. ಒಂದು ಗ್ರೂಪ್‌ನಲ್ಲಿ ಯಾರಾದರೂ ಡಿಸಪಿಯರಿಂಗ್ ಮೆಸೇಜ್ ಅನ್ನು ಇರಿಸಿಕೊಂಡರೆ, ಅದನ್ನು ಕಳುಹಿಸಿದವರಿಗೆ ಸೂಚನೆ ಹೋಗುತ್ತದೆ ಮತ್ತು ಅವರು ಈ ನಿರ್ಧಾರವನ್ನು ವಿರೋಧಿಸಬಹುದಾಗಿದೆ. ಇತರರು ತಾವು ಕಳುಹಿಸಿದ ಡಿಸಪಿಯರಿಂಗ್ ಮೆಸೇಜ್‌ಗಳನ್ನು ಇರಿಸಿಕೊಳ್ಳಬಾರದು ಎಂದು ಕಳುಹಿಸಿದವರು ನಿರ್ಧರಿಸಿದರೆ ಆ ನಿರ್ಧಾರವೇ ಅಂತಿಮವಾಗುತ್ತದೆ. ಇದರರ್ಥ ಯಾರೂ ಈ ಸಂದೇಶ ಉಳಿಸಿಕೊಳ್ಳುವ ಹಾಗಿಲ್ಲ ಹಾಗೂ ನಿರ್ದಿಷ್ಟ ಅವಧಿಯ ನಂತರ ಆ ಸಂದೇಶ ಮಾಯವಾಗುತ್ತದೆ.
ಬಳಕೆದಾರರು ಕಳುಹಿಸುವವರ ಅನುಮತಿಯೊಂದಿಗೆ ಯಾವುದೇ ಸಂದೇಶವನ್ನು ಇರಿಸಿಕೊಂಡರೆ ಅವುಗಳನ್ನು ಬುಕ್‌ಮಾರ್ಕ್ ಐಕಾನ್‌ನೊಂದಿಗೆ ಲೇಬಲ್ ಮಾಡಲಾಗುವುದು ಹಾಗೂ ಕೆಪ್ಟ್ ಮೆಸೇಜ್ ಫೀಚರ್‌ನಲ್ಲಿ ಅವುಗಳನ್ನು ಕಾಣಬಹುದು.